ಬೇಕಾಬಿಟ್ಟಿ ಪಾರ್ಕಿಂಗ್‌: ಸಂಚಾರ ದಟ್ಟಣೆ ಹೆಚ್ಚಳ

Team Udayavani, May 30, 2022, 6:24 PM IST

Untitled-1

ಬೇಲೂರು: ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ದೇಗುಲದಿಂದ ನಡೆಯುವ ಪಾರ್ಕಿಂಗ್‌ ಸುಂಕದ ಟೆಂಡರ್‌ದಾರ ಬೇಕಾಬಿಟ್ಟಿ ವಸೂಲಾತಿ ಮಾಡುತ್ತಿದ್ದು,ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಟ್ರಾಫಿಕ್‌ ನಿರ್ಮಾಣ ವಾಗಿದೆ. ಸುಂಕ ವಸೂಲಾತಿಯ ಯುವಕರು ಪ್ರವಾಸಿಗರ ಮೇಲೆ ದರ್ಪದಿಂದ ವರ್ತಿಸುತ್ತಾರೆ. ತಕ್ಷಣವೇ ಸಂಬಂಧ ಪಟ್ಟವರು ಇವರ ಟೆಂಡರ್‌ ರದ್ದು ಪಡಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೇಲೂರು ಚನ್ನಕೇಶವ ದೇಗುಲದಿಂದ ಪ್ರತಿ ವರ್ಷ ನಡೆಯುವ ಪಾರ್ಕಿಂಗ್‌ ಶುಲ್ಕವನ್ನು ಟೆಂಡರ್‌ದಾ ರರಿಗೆ ವಹಿಸಲಾಗುತ್ತದೆ. ಆದರೆ ಟೆಂಡರ್‌ದಾರರು ಮಾತ್ರ ದೇಗುಲದಿಂದ ನಿಗದಿಪಡಿಸಿದ ಪಾರ್ಕಿಂಗ್‌ ಹೊರ ತು ಪಡಿಸಿ, ದೇಗುಲದ ಪ್ರವೇಶದ ರಸ್ತೆಯಲ್ಲಿಯೇ ಸುಂಕ ವಸೂಲಾತಿಗೆ ಮುಂದಾಗುತ್ತಾರೆ. ಈ ಕಾರಣದಿಂದ ರಸ್ತೆಯಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿ ನಿತ್ಯ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ದೂರದೂರಿನಿಂದ ಬರುವ ಪ್ರವಾಸಿಗರ ಮೇಲೆ ವಿನಃ ಕಾರಣ ದರ್ಪ ತೋರಿಸುತ್ತಾರೆ. ಹಲವು ಬಾರಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ಆಗಿದೆ. ಇಷ್ಟಾದರೂ ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ.

ಸಮಸ್ಯೆ ಬಗೆಹರಿಸಿ: ದೇಗುಲದಿಂದ ನಡೆಯುವ ಪಾರ್ಕಿಂಗ್‌ ಸುಂಕವನ್ನು ದೇವಾಲಯ ಹಿಂಭಾಗದ ಖಾಲಿ ಜಾಗದಲ್ಲಿಯೇ ನಡೆಸಬೇಕು ಎಂಬ ಆದೇಶವನ್ನುಟೆಂಡರ್‌ದಾರರಿಗೆ ನೀಡಿದ್ದಾರೆ. ಆದರೆ, ಆದೇಶ ಗಾಳಿ ತೂರಿದ್ದಾರೆ. ಇನ್ನೂ ಕನಿಷ್ಠ ಸೌಜನ್ಯಕ್ಕೂ ದೇಗುಲದ ಹತ್ತಿರಪೊಲೀಸರು ಬರುತ್ತಿಲ್ಲ. ದೊಡ್ಡ ಗಲಾಟೆ ನಡೆದರೆ ಮಾತ್ರಬರುತ್ತಾರೆ. ಇದ್ದರಿಂದ ಸಾರ್ವಜನಿಕರಿಗೆತೊಂದರೆಯಾಗುತ್ತಿದೆ. ದೂರದಿಂದ ಖಾಸಗಿ ವಾಹನಗಳಿಂದ ಬರುವ ಪ್ರವಾಸಿ ಗರು ದೇಗುಲದ ವ್ಯವಸ್ಥಾಪನಾ ಸಮಿತಿ ಹಾಗೂ ಇಲ್ಲಿನ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಜನತೆ ಎಚ್ಚರಿಕೆ ನೀಡಿದ್ದಾರೆ.

ಕಠಿಣ ಆದೇಶ ಹೊರಡಿಸುತ್ತೇವೆ: ಈ ಸಂಬಂಧ ಚನ್ನಕೇಶವ ಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಸಮಿತಿ ಅಸ್ತಿತ್ವಕ್ಕೆಬಂದ ದಿನದಿಂದಲೇ ಇಲ್ಲಿನ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ವ್ಯಾಪಕ ದೂರ ಬಂದ ಕಾರಣ ದೇಗುಲದ ಹಿಂಭಾಗದಲ್ಲಿಯೇ ಪಾರ್ಕಿಂಗ್‌ ಸುಂಕ ಪಡೆಯಬೇಕೆಂದು ವಾಹನ ನಿಲುಗಡೆಗೆ ಸೂಕ್ತ ನಾಮಫ‌ಲಕ ಹಾಕಿದೆ. ಅದರೂ ಟೆಂಡರ್‌ದಾರರು ದೇಗುಲದ ಷರತ್ತು ಗಳನ್ನು ಉಲ್ಲಂಘಿಸುತ್ತಾರೆ ಎಂದು ಜನರ ದೂರು ಹಿನ್ನೆಲೆ ಸಭೆ ನಡೆಸಿ ಕಠಿಣ ಆದೇಶ ನೀಡಲಾಗುತ್ತದೆ ಎಂದರು.

ಬಿಗಿ ಕ್ರಮ ಕೈಗೊಳ್ಳುತ್ತೇವೆ: ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಮಾತನಾಡಿ, ಟೆಂಡರ್‌ನಿಯಮದ ಪ್ರಕಾರ ಸುಂಕ ವನ್ನು ದೇಗುಲ ಹಿಂಭಾಗದಲ್ಲಿವಾಹನ ನಿಲುಗಡೆ ಸ್ಥಳದಲ್ಲಿಯೇ ಪಡೆಯಬೇಕಿದೆ.ಆದರೆ, ದೇಗುಲ ಪ್ರವೇಶ ರಸ್ತೆಯಲ್ಲಿ ಸುಂಕ ವಸೂಲಾತಿನಡೆಸುತ್ತಿರುವ ಕಾರಣದಿಂದ ಪ್ರವಾಸಿಗರು ಮತ್ತು ಸ್ಥಳೀಯರಿಗೆ ತೀವ್ರ ತೊಂದರೆ ಯಾಗುತ್ತದೆ. ಈ ಸಂಬಂಧ ವ್ಯವಸ್ಥಾಪನಾ ಸಮಿತಿ ಸಭೆ ಕರೆಯಲಾಗಿದು, ಬಿಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.