ಪಪಂ ಸಿಒ ಹುದ್ದೆಗೆ ತೀವ್ರಗೊಂಡ ಲಾಬಿ!
Team Udayavani, Jul 16, 2023, 5:08 PM IST
ಅರಕಲಗೂಡು: ಇಲ್ಲಿನ ಪಪಂ ಮುಖ್ಯಾಧಿಕಾರಿ ಹುದ್ದೆಗೆ 11 ಬಾರಿ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಹಾವು ಏಣಿ ಆಟದಿಂದ ಕೂಡಿದೆ. ಒಂದು ರೀತಿಯಲ್ಲಿ ಮುಖ್ಯಾಧಿಕಾರಿ ಹುದ್ದೆ ಬಿಕರಿಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ 2022 ರಿಂದ 2023ರ ಜುಲೆ„-14ರ ತನಕ ಒಟ್ಟು 11ಬಾರಿ ಸಿಒಗಳು ಇಲ್ಲಿನ ಪಪಂಗೆ ವರ್ಗಾವಣೆಗೊಂಡು ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬೆಳವಣಿಗೆ ಪಟ್ಟಣದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಅರಕಲಗೂಡು ಪಪಂನ ಮುಖ್ಯಾಧಿಕಾರಿ ಹುದ್ದೆಗೆ 2017ರಿಂದಲೂ ಜಟಾಪಟಿಯಿಂದ ನಡೆಯುತ್ತಿದೆ. ವರ್ಗಾವಣೆ ಭೂತಕ್ಕೆ ಸಿಲುಕಿ ಇಲ್ಲಿಗೆ ಬರುವ ಮುಖ್ಯಾಧಿಕಾರಿಗಳು ಪದೇಪದೆ ವರ್ಗಾವಣೆ ಆಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.
2017ರಲ್ಲಿ ದಿವಂಗತ ಸುರೇಶ್‌ಬಾಬು, ಸುಜಯ್ ಕುಮರ್, ಮಂಜುನಾಥ್, ಹೊರತುಪಡಿಸಿದರೆ ನಂತರ ಬಂದ 9 ಮಂದಿ ಸಿಒಗಳು ಕೆಲ ತಿಂಗಳು, ದಿನಗಳು ವಾರಗಳಂತೆ ವರ್ಗಾವಣೆಯಾಗುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಕುಂಠಿತವಾಗಿದೆ. ಜತೆಗೆ ಆಡಳಿತಕ್ಕೂ ಮಾರಕವಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ತನ್ನ ವರ್ಗಾವಣೆ ನೀತಿ ಮುಂದುವರೆಸುತ್ತಿರುವುದು ತಲೆ ತಗ್ಗಿಸುವ ವಿಷಯವಾಗಿದೆ.
ಮುಖ್ಯಾಧಿಕಾರಿ ಹುದ್ದೆ ಪ್ರತಿಷ್ಠೆ: ಮುಖ್ಯಾಧಿಕಾರಿ ಹುದ್ದೆ ಪದೇಪದೆ ವರ್ಗಾವಣೆಯಾಗುವ ಮೂಲಕ ಅಧಿಕಾರಿಗಳ ಪ್ರತಿಷ್ಠೆಗೆ ಬಲಿಯಾಗುತ್ತಿದ್ದಾರೆ. ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಕೆಲ ಅಕಾರಿಗಳು ತನ್ನ ರಾಜಕೀಯ ಶಕ್ತಿ ಬಳಸಿಕೊಂಡಿದ್ದಾರೆ. ದಿವಂಗತ ಸುರೇಶ್ ಬಾಬು ಅವರು ಇದೇ ಪಪಂನಲ್ಲಿ ಹೆಚ್ಚು ವರ್ಷಗಳ ಕಾಲ ಅಧಿ ಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂದರೆ, ಸುಮಾರು 10 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ 2020ರಲ್ಲಿ ವಯೋನಿವೃತ್ತಿ ಹೊಂದಿದ್ದಾರೆ. ಇವರ ನಿವೃತ್ತಿ ನಂತರ ನಿಯೋಜನೆಗೊಂಡ ಬಸವರಾಜು 4 ತಿಂಗಳು, ಶಿವಕುಮಾರ್ ಅವರು 30 ತಿಂಗಳು,ಇವರ ನಂತರವೇ ಸಿಒ ಹುದ್ದೆಯ ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ಮುಖ್ಯಾಕಾರಿಯಾಗಿ ಶಿವಕುಮಾರ್ ಕಾರ್ಯನಿರ್ವಹಿಸುವ ಅವಧಿಯಲ್ಲಿಯೇ ಇದೇ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸವಿತಾ ಆವರು 2022ರ ಜು. 1ರಂದು ಸಿಒ ಹುದ್ದೆಗೆ ನಿಯೋಜನೆಗೊಂಡು ಅಧಿಕಾರ ಸ್ವೀಕರಿಸಿ ಸೆ.30ರ ತನಕ ಕಾರ್ಯನಿರ್ವಹಿಸಿದ್ದಾರೆ.
ಇದೆ ಸ್ಥಳಕ್ಕೆ ನಟರಾಜ್ ಅವರು ಸಿಇ ಆಗಿ 2022ರ ಅಕ್ಟೋಬರ್ ಒಂದರಲ್ಲಿ ಅಧಿಕಾರ ಸ್ವೀಕಾರ ಮಾಡಿ ಮುಂದುವರಿಯುತ್ತಾರೆ. ಆದರೆ, ಪುನಃ 2022ರ ನ.7ರಂದು ಶಿವ ಕುಮಾರ್ ಅವರು ಸಿಒ ಆಗಿ ಬರುತ್ತಾರೆ. ಇವರ ಜಾಗಕ್ಕೆ 2023ರ ಫೆ.27ರಂದು ಬಸವರಾಜ ಟಾಕಪ್ಪ ಶಿಗ್ಗಾವಿ ಅವರು ಬಂದು ಅಧಿಕಾರ ವಹಿಸಿಕೊಳ್ಳುತ್ತಾರೆ. ಆದರೆ ಶಿವಕುಮಾರ್ ಅವರು ತನ್ನ ನಿವೃತ್ತಿಯ ಸಮಯ ಸಮೀಪದಲ್ಲಿರುವುದರಿಂದ ಪದೇಪದೆ ವರ್ಗಾವಣೆ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿ 2023ರ ಏಪ್ರಿಲ್ 1ರಂದು ಪುನಃ ಕೋರ್ಟ್ ಅದೇಶದಂತೆ ಅಧಿಕಾರ ಸ್ವೀಕರಿಸುತ್ತಾರೆ.
ಇದೇ ಶಿವಕುಮಾರ್ ಅವರು 2023ರ ಜೂ.30ರಂದು ಮತ್ತೂಮ್ಮೆ ವರ್ಗಾವಣೆಗೊಳ್ಳುತ್ತಾರೆ. ಈ ಅವಧಿಯಲ್ಲಿ ಪ್ರಥಮ ದರ್ಜೆ ಸಹಾಯಕಿ ಸವಿತಾ ಅವರು ಪ್ರಭಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಕೇವಲ 2 ದಿನಗಳಲ್ಲೆ ಮತ್ತೆ ಬಸವರಾಜ ಟಾಕಪ್ಪ ಶಿಗ್ಗಾವಿ ಅವರು ಜು.3ರಂದು ಸಿಒ ಹುದ್ದೆಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡಿ 5 ದಿನ ಕಾರ್ಯ ನಿರ್ವಹಿಸುತ್ತಾರೆ. 2023ರ ಜು.3ರಂದೇ ಲಿಂಗರಾಜು ಅವರು ಸಿಒ ಹುದ್ದೆಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡುತ್ತಾರೆ. ಇಲ್ಲಿಗೆ ಮುಗಿಯುವುದಿಲ್ಲ. ಮತ್ತೆ 2023ರ ಜು.14ರಂದು ಬಸವರಾಜ ಟಾಕಪ್ಪ ಶಿಗ್ಗಾವಿ ಅವರು ಮುಖ್ಯಾಧಿಕಾರಿ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.
ವ್ಯಾಪಕ ಟೀಕೆ: ಅರಕಲಗೂಡು ಪಪಂ ಹೊರತುಪಡಿಸಿದರೇ, ಜಿಲ್ಲೆಯ ಯಾವುದೇ ನಗರಸಭೆ, ಪುರಸಭೆ, ಪಪಂ ಅಧಿಕಾರಿಗಳು, ಮುಖ್ಯಾಧಿಕಾರಿ ಹುದ್ದೆಗೆ ಇಷ್ಟೊಂದು ನಿರಂತರವಾಗಿ ವರ್ಗಾವಣೆ ನಡೆದಿಲ್ಲ. ಆದರೆ ಇಲ್ಲಿನ ಪಪಂ ಸಿಒ ಹುದ್ದೆಗೆ ಪದೇಪದೆ ವರ್ಗಾವಣೆಗೊಳ್ಳುತ್ತಿರುವ ಅಧಿಕಾರಿಗಳ ನಡೆ ಬಗ್ಗೆ ಆ ಹುದ್ದೆಯಲ್ಲಿನ ವಿಶೇಷತೆ ಏನು..? ಲಾಭದಾಯ ಹುದ್ದೆನಾ? ಎಂಬ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇಷ್ಟೊಂದು ಮಂದಿ ಸಿಒಗಳ ಅಧಿಕಾರ ವಹಿಸಿಕೊಂಡು ಸೇವೆ ಸಲ್ಲಿಸಿದ್ದರೂ ಕೂಡ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಿದ್ದರೂ ಕೂಡ ಇಲ್ಲಿ ಅಧಿಕಾರ ಅನುಭವಿಸಿದವರೇ ತಮ್ಮ ರಾಜಕೀಯ ಬಲ ಬಳಸಿ ಇಲ್ಲಿಗೆ ಬರುತ್ತಿರುವ ಹಿನ್ನೆಲೆ ತುಂಬಾ ಗಂಭೀರವಾಗಿ ಪರಿಗಣಿಸಬೇಕಿದೆ.
ಹುದ್ದೆಯಿಂದ ಆಗುತ್ತಿರುವ ಲಾಭ ಕುರಿತು, ಮೇಲಾಧಿಕಾರಿಗಳು, ಶಾಸಕರು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ಸಿಒ ಹುದ್ದೆಯಿಂದ ಜನತೆಗೆ ಆಗುತ್ತಿರುವ ಗೊಂದಲ ಹಾಗೂ ಅಭಿವೃದ್ಧಿ ಹಿನ್ನಡೆಯಾಗಿದೆ. ಆಡಳಿತ ಸದಸ್ಯರು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಮಟ್ಟಿಗೆ ಈ ವರ್ಗಾವಣೆ ಲಾಬಿಯನ್ನು ಕೊಂಡಯಬೇಕು. ಆ ಮೂಲಕ ಹುದ್ದೆಯನ್ನು ಘನೆತೆಯನ್ನು ಕಾಪಾಡಬೇಕು. ● ಶಶಿ ಕುಮಾರ್, ಜೆಡಿಎಸ್ ಯುವ ಮುಖಂಡ
ಅರಕಲಗೂಡು ಪಪಂನ ಮುಖ್ಯಾಧಿಕಾರಿ ಹುದ್ದೆ ವರ್ಗಾವಣೆ ಮಕ್ಕಳ ಆಟಿಕೆಯಾಗಿ ದೆ. ಈ ಹುದ್ದೆಗೆ ಬಂದವರೇ ಪದೇಪದೆ ಪ್ರಭಾ ವ ಬಳಸಿ ಬರುತ್ತಿದ್ದಾರೆ. ಇದರ ಉದ್ದೇಶ, ಅಧಿಕಾರದ ಹಿನ್ನೆಲೆ, ಹಾಗೂ ಹುದ್ದೆಯಿಂದ ಆಗುತ್ತಿರುವ ಲಾಭ ಕುರಿತು ಮೇಲಾಧಿಕಾರಿ ಕ್ಷೇತ್ರದ ಶಾಸಕರು ಗಮನ ಕೊಡಬೇಕಿದೆ. ಹುದ್ದೆ ಹಿಂದೆ ರಾಜಕೀಯ ಪ್ರತಿಷ್ಠೆ ಜತೆಗೆ ಅಧಿಕಾರದ ವ್ಯಾಮೋಹಗಳ ಗೊಂದಲಕ್ಕೆ ಸರಕಾರ ತೆರೆ ಎಳೆಯಬೇಕಿದೆ. ● ಕೃಷ್ಣಯ್ಯ, ಹಿರಿಯ ಸದಸ್ಯ, ಪಪಂ ಅರಕಲಗೂಡು.
-ವಿಜಯ್ ಕುಮಾರ್, ಅರಕಲಗೂಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.