ಅಂತರ್ ಜಿಲ್ಲಾ ಸಾಗಣೆಗೆ ಅನುಮತಿ: ಸಚಿವ ಜೆ.ಸಿ.ಮಾಧುಸ್ವಾಮಿ
ಹಣ್ಣು, ತರಕಾರಿ, ಕೊಬ್ಬರಿ, ನಿರ್ಮಾಣ ಸಾಮಗ್ರಿ ಸಾಗಣೆ; ಕಾರ್ಮಿಕರನ್ನು ಕರೆ ತರಲು ಸಮ್ಮತಿ
Team Udayavani, Apr 25, 2020, 11:56 AM IST
ಹಾಸನ: ಜಿಲ್ಲೆಯಲ್ಲಿ ಲಾಕ್‌ಡೌನ್‌ನ್ನು ಮೇ 3 ರವರೆಗೂ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿರುವ ಹಾಸನ ಜಿಲ್ಲಾಡಳಿತ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಅಂತರ್ ಜಿಲ್ಲಾ ಸಾಗಣೆ ನಿರ್ಬಂಧ ಸಡಿಲಿಸಲು ತೀರ್ಮಾನಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುನಿಸಿಪಲ್ ವ್ಯಾಪ್ತಿ ಹೊರತು ಪಡಿಸಿ ನಿರ್ಮಾಣ ಕಾಮಗಾರಿ ನಡೆಸಲು ಸರ್ಕಾರ ಅನುಮತಿ ನೀಡಿರುವುದರಿಂದ ಹೊರ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆ
ತರಲು ಹಾಗೂ ಎಲೆಕ್ಟ್ರಿಕಲ್ ವಸ್ತುಗಳು, ಹಾರ್ಡ್‌ವೇರ್, ಸಿಮೆಂಟ್ ಖರೀದಿಸಿ ಸಾಗಣೆ ಮಾಡಲೂ ಸಮ್ಮತಿಸಿದೆ. ಸಭೆಯ ನಂತರ ವಿವರ ನೀಡಿದ ಸಚಿವ ಜೆ.ಸಿ.ಮಾಧು
ಸ್ವಾಮಿ, ಹಾಸನ ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಪ್ರಕರಣ ವರದಿಯಾದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಹಸಿರು ವಲಯದಲ್ಲಿ ಜಿಲ್ಲೆ ಸೇರಿದೆ. ಮುಂದಿನ ದಿನಗಳ
ಲ್ಲಿಯೂ ಇದೇ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಲು ಲಾಕ್‌ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಸು ವುದು ಅನಿವಾರ್ಯವೆಂದರು.
ಕೇಂದ್ರ-ರಾಜ್ಯ ಸರ್ಕಾರಗಳು ಆರ್ಥಿಕ ಚಟುವಟಿಕೆಗಳ ಪುನಾರಂಭಕ್ಕೆ ಅವಕಾಶ ನೀಡಿರುವುದರಿಂದ ಕೆಲವು ಷರತ್ತು ಗಳನ್ನು ವಿಧಿಸಿ ತರಕಾರಿ, ಹಣ್ಣು, ಕೊಬ್ಬರಿ, ನಿರ್ಮಾಣ
ಸಾಮಗ್ರಿಗಳ ಅಂತರ್ ಜಿಲ್ಲಾ ಸಾಗಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಲೋಕೋಪಯೋಗಿ, ನೀರಾವರಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾಮಗಾರಿ ಆರಂಭಿಸಲು ಅವ
ಕಾಶ ಕಲ್ಪಿಸಲಾಗಿದ್ದು, ಈ ಕಾಮಗಾರಿಗಳಿಗೆ ಅಗತ್ಯ ವಸ್ತು ಖರೀ ದಿಸಿ ಸಾಗಣೆಗೆ ಅನುಮತಿ ನೀಡಲಾಗಿದೆ. ಆದರೆ, ಅಂಗಡಿಗಳ ಮಾಲಿಕರು ಸಂಬಂಧಪಟ್ಟವರಿಂದ ಇಂಡೆಂಟ್ ಪಡೆದು
ಸಾಮಗ್ರಿ ಮಾರಾಟ ಮಾಡಬಹುದೇ ಹೊರತು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುವಂತಿಲ್ಲ. ಸಾಮಗ್ರಿಗಳನ್ನು ಅಂತರ್ ಜಿಲ್ಲಾ ಸಾಗಣೆ ಮಾಡುವ ಲಾರಿಗಳ ಚಾಲಕರು, ಕ್ಲೀನರ್‌ಗಳು
ಮನೆಯವರು ಮತ್ತು ಸಮುದಾಯದ ಜೊತೆ ಸೇರುವಂತಿಲ್ಲ. ಅವರು ಪ್ರತ್ಯೇಕವಾಗಿಯೇ ಇರಬೇಕು. ಅನಿವಾರ್ಯವಾಗಿ ಮನೆಗೆ ಹೋಗಬೇಕಾದವರು 14 ದಿನಗಳ ಕ್ವಾರಂಟೈನ್
ಪೂರ್ಣಗೊಳಿಸಿದ ನಂತರವಷ್ಟೇ ಕುಟುಂಬ ಸಮುದಾಯದ ಜತೆ ಸೇರಬೇಕೆಂದರು.
ರಸ್ತೆ, ಕಟ್ಟಡ, ನೀರಾವರಿ ಯೋಜನೆಗಳ ಕಾಮಗಾರಿ ನಡೆ ಸಲು ಕಾರ್ಮಿಕರನ್ನು ಹೊರ ಜಿಲ್ಲೆಗಳಿಂದ ಕರೆ ತರಲು ಅವ ಕಾಶವಿದ್ದರೂ ಒಂದು ಬಾರಿ ಮಾತ್ರ ಅವಕಾಶವಿದ್ದು, ಬಂದ
ವರು ಮತ್ತೆ ವಾಪಸ್ ಹೋಗಲು ಅವಕಾಶ ನೀಡುವುದಿಲ್ಲ. ಅವರನ್ನು ಕರೆತರುವ ಜವಾಬ್ದಾರಿ ಸಂಬಂಧಪಟ್ಟ ಗುತ್ತಿಗೆ ದಾರರದ್ದೇ ಆಗಿರುತ್ತದೆ. ಕಾಮಗಾರಿಗಳಿಗೆ ಕ್ವಾರಿ ಮತ್ತು ಕ್ರಷರ್ ಗಳಿಂದ ಸಾಮಗ್ರಿ ಖರೀದಿಸಬಹುದು. ಆದರೆ, ಕ್ವಾರಿ, ಕ್ರಷಿಂಗ್ ಗೆ ಅವಕಾಶವಿಲ್ಲವೆಂದರು.
ಮುನಿಸಿಪಲ್ ವ್ಯಾಪ್ತಿ ಹೊರತುಪಡಿಸಿದ ಪ್ರದೇಶಗಳಲ್ಲಿ ಕೆಲವು ಕೈಗಾರಿಕಾ ಘಟಕಗಳು 3ನೇ ಒಂದು ಭಾಗದಷ್ಟು ಕಾರ್ಮಿಕರನ್ನು ಬಳಸಿ ಉತ್ಪಾದನಾ ಚಟುವಟಿಕೆ ಆರಂಭಿಸ
ಬಹುದಾದೆ. ಆದರೆ ಕಾರ್ಮಿಕರ ಸಂಚಾರಕ್ಕೆ ವಾಹನಗಳ ಸುರಕ್ಷಿತ ವ್ಯವಸ್ಥೆಯನ್ನು ಸಂಸ್ಥೆಗಳ ಮಾಲಿಕರೇ ಮಾಡಿ ಕೊಳ್ಳಬೇಕೆಂದರು. ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಕೆ.
ಎಸ್.ಲಿಂಗೇಶ್, ಪ್ರೀತಂ ಜೆ.ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಶ್ರೀನಿವಾಸಗೌಡ, ಜಿಪಂ ಸಿಇಒ ಪರಮೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.