ಹೂಡಾ ಕಸದ ಆಟೋಗೆ ಶಾಸಕರ ಫೋಟೊ
Team Udayavani, Jun 14, 2020, 6:18 AM IST
ಹಾಸನ: ನಗರದ ವಿಜಯನಗರ ಬಡಾವಣೆಯಲ್ಲಿ ಹಾಸನ ನಗರಾಭಿವೃದಿಟಛಿ ಪ್ರಾಧಿಕಾರ (ಹೂಡಾ)ದಿಂದ ಕಸ ಸಂಗ್ರಹಿಸುವ ಆಟೋದ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಎಂದು ಜಿಪಂ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ನೋಟಕ್ಕೆ ಶಾಸಕರು ಕಸ ಸಂಗ್ರಹಣೆಯನ್ನು ಉಚಿತವಾಗಿ ಎಂದು ಶಾಸಕರು ಬಿಂಬಿಸುತ್ತಿದ್ದರೂ ಪರಿವರ್ತನಾ ಟ್ರಸ್ಟ್ ಹೆಸರಿನಲ್ಲಿ ಹಾಸನದ ವಿದ್ಯಾನಗರ, ವಿವೇಕ ನಗರ, ಇಂದಿರಾ ನಗರದಲ್ಲಿಯೂ ಬಡಾವಣೆಯ ಸುಮಾರು ಮೂರು ಸಾವಿರ ಮನೆಗಳಿಂದ ತಲಾ 40 ರೂ. ನಂತೆ ವಸೂಲಿ ಮಾಡುತ್ತಿದ್ದಾರೆಂದು ಹಣ ಸಂಗ್ರಹಣೆ ಮಾಡಿ ವಿತರಣೆ ಮಾಡಿರುವ ರಶೀದಿಗಳನ್ನು ಪ್ರದರ್ಶಿಸಿದರು.
ನಗರದ ಹೊರ ವಲಯದ ಗ್ರಾಮ ಪಂಚಾಯಿತಿಗಳು ಕಸ ಸಂಗ್ರಹಣೆಗೆ ಆಟೋ ಮತ್ತು ಟ್ರ್ಯಾಕ್ಟರ್ ಖರೀದಿದ್ದರೂ ಅವುಗಳ ಬಳಕೆಗೆ ಬಿಡದೇ ತಮ್ಮ ಆಟೋಗಳಲ್ಲಿಯೇ ಕಸ ಸಂಗ್ರಹಣೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿದರು. ನನ್ನ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರೂ ಈ ರೀತಿ ಕೀಳು ಮಟ್ಟದ ಪ್ರಚಾರ ಪಡೆದುಕೊಂಡು ರಾಜಕಾರಣ ಮಾಡಿರಲಿಲ್ಲ.
ಎಚ್.ಡಿ.ರೇವಣ್ಣ ಅವರು ಹಾಸನ ನಗರಕ್ಕೆ ಮಾಡಿಸಿರುವ ಅಭಿವೃದಿಟಛಿ ಯೋಜನೆಗಳಿಗೆಲ್ಲಫೋಟೋ ಹಾಕಿಕೊಳ್ಳುವಂತಿದ್ದರೆ ಹಾಸನದ ತುಂಬೆಲ್ಲಾ ಸಾವಿರಾರು ಫೋಟೋ ಹಾಕಿಸಿಕೊಂಡು ಪ್ರಚಾರ ಪಡೆಯಬಹುದಿತ್ತು ಎಂದರು. ಜಿಲ್ಲಾ ಜೆಡಿಎಸ್ ವಕ್ತಾರ ಎಚ್.ರಘು, ಪಕ್ಷದ ಮುಖಂಡ ರಾದ ಮೊಗಣ್ಣಗೌಡ, ಸಂಗಂ, ಚನ್ನಂಗಿಹಳ್ಳಿ ಶ್ರೀಕಾಂತ್ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.