ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳ ಮೀನ ಮೇಷ
Team Udayavani, Nov 6, 2019, 3:00 AM IST
ಅರಕಲಗೂಡು: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ಸಾಲಗೇರಿ ರಸ್ತೆಯೂ ವಾಹನಗಳ ದಟ್ಟಣೆ ಅಧಿಕವಾಗಿದ್ದು ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳ ಮೀನ ಮೇಷ, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ರಸ್ತೆ ಅಭಿವೃದ್ಧಿಗೆ 2.58 ಕೋಟಿ ರೂ. ಬಿಡುಗಡೆ: ರಸ್ತೆ 12ರಿಂದ 15 ಅಡಿ ವಿಸ್ತೀರ್ಣ ಹೊಂದಿದ್ದು, ವಾಹನಗಳ ಸಂಚಾರಕ್ಕೆ ವಾಸದ ಮನೆಗಳೇ ಅಡ್ಡಿಯಾಗಿವೆ. ಇದನ್ನು ಮನಗಂಡ ಮಾಜಿ ಸಚಿವ ಎ.ಮಂಜು ರಸ್ತೆಯ ಅಭಿವೃದ್ಧಿಗೆ ಲೋಕಪಯೋಗಿ ಇಲಾಖೆಯಿಂದ 900 ಮೀಟರ್ ವಿಸ್ತೀರ್ಣದ ರಸ್ತೆಗೆ 2.58 ಕೋಟಿ ಬಿಡುಗಡೆ ಮಾಡಿಸಿದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ರಸ್ತೆ ವಿಸ್ತಣೆಗೆ ಮೂಡದ ಒಮ್ಮತ: ಎ.ಮಂಜು ಅವರ ಆಡಳಿತ ಮುಕ್ತಾಯದ ನಂತರ ಹೊಸದಾಗಿ ಆಯ್ಕೆಯಾದ ಶಾಸಕ ಎ.ಟಿ. ರಾಮಸ್ವಾಮಿ ಅವರು ರಸ್ತೆ ಅಭಿವೃದ್ಧಿಗಾಗಿ ನಿವಾಸಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದರೂ ರಸ್ತೆಯ ವಿಸ್ತೀರ್ಣದ ಬಗ್ಗೆ ಒಮ್ಮತಕ್ಕೆ ಬರದ ಕಾರಣ ಸರ್ಕಾರದ ಜಾಗದ ಗಡಿ ಗುರುತಿಸಿ ಸ್ಥಳ ತೆರವುಗೊಳಿಸಲು ಆದೇಶಿಸಿದರು. ಸರ್ಕಾರದ ಜಾಗವನ್ನು ಒತ್ತುವರಿ ಮಾಡಿರುವ ನಿವಾಸಿಗಳಿಗೆ ಪಟ್ಟಣ ಪಂಚಾಯಿತಿಯ ಮೂಲಕ ಮೂರು ನಾಲ್ಕು ನೋಟೀಸ್‌ಗಳನ್ನು ನೀಡಿದರೂ ಈವರೆಗೂ ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ.
ನಿವಾಸಿಗಳು, ಅಧಿಕಾರಿಗಳ ನಡುವೆ ಜಟಾಪಟಿ: ಸಾಲಗೇರಿ ರಸ್ತೆ ಅಭಿವೃದ್ಧಿಗೆಂದು ಮಾಜಿ ಸಚಿವ ಎ.ಮಂಜು ರವರು ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಮಾಡಲು ಮುಂದಾದರು. ಆದರೆ ಸಾಲಗೇರಿ ರಸ್ತೆಯ ಎರಡೂ ಬದಿಯಲ್ಲಿರುವ ನಿವಾಸಿಗಳು ತಮ್ಮ ಮನೆಯನ್ನು ತೆರವುಗೊಳಿಸಲು ನಿರಾಕರಿಸಿದ ಕಾರಣ ಅವರುಗಳೊಂದಿಗೆ ಹಲವಾರು ಸಭೆಗಳನ್ನ ನಡೆಸಿದರೂ ಪ್ರಯೋಜನವಾಗಿಲ್ಲ.
ಸಾಲಗೇರಿ ರಸ್ತೆಯ ನಿವಾಸಿಗಳಿಗೆ ನ್ಯಾಯಾಲಯದಿಂದ ನೋಟೀಸ್ ನೀಡಲು ಪಟ್ಟಣ ಪಂಚಾಯಿತಿ ಲಕ್ಷಾಂತರ ಹಣವನ್ನ ಕಳೆದರೂ ಕಾಮಗಾರಿ ಮುಂದಾಗದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯಿತಿ ಲೋಕೋಪಯೋಗಿ ಇಲಾಖೆಗಳ ನಡುವೆ ಸಾಲಗೇರಿ ರಸ್ತೆಯ ನಿವಾಸಿಗಳ ಜಟಾಪಟಿ ಇನ್ನೂ ನಿಂತಿಲ್ಲ. ಇವೆಲ್ಲವನ್ನು ಸರಿಪಡಿಸುವುದು ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ರಸ್ತೆಯ ಅಭಿವೃದ್ಧಿಯ ವಿಷಯದಲ್ಲಿ ಶಾಸಕರು ಲೋಕಪಯೋಗಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಸ್ತೆಯ ಅಭಿವೃದ್ಧಿಗೆ ಕಾನೂನು ಪ್ರಕಾರ ಮುಂದಾಗುವಂತೆ ತಿಳಿಸುವ ಮೂಲಕ ನಿವಾಸಿಗಳಿಗೆ ತೊಂದರೆಯಾಗದಂತೆ ರಸ್ತೆಯ ವಿಸ್ತೀರ್ಣವನ್ನ 10.5 ಮೀ.ರಸ್ತೆಯನ್ನ ಅಗಲೀಕರಣ ಮಾಡುವಂತೆ ಈಗಾಗಲೇ ತಿಳಿಸಿದರೂ ಶಾಸಕರ ಮಾತಿಗೂ ಬೆಲೆ ಇಲ್ಲದಂತಾಗಿದೆ.
ರಸ್ತೆ ಅಭಿವೃದ್ಧಿಗೆ ಟೆಂಡರ್: ಸಾಲಗೇರಿ ರಸ್ತೆಯ ಅಭಿವೃದ್ಧಿ ಕುರಿತು ಮಾಹಿತಿ ನೀಡಿರುವ ಲೋಕಪಯೋಗಿ ಇಲಾಖೆ ಅಭಿಯಂತರ ರಾಜಶೇಖರ್, ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರನ್ನು ನಿಗದಿಗೊಳಿಸಲಾಗಿದೆ. ಈ ರಸ್ತೆಯ ಅಭಿವೃದ್ಧಿಗೆ 2.58 ಕೋಟಿ ಹಣ ಬಿಡುಗಡೆಯಾಗಿದೆ. ಅಲ್ಲಿಯ ನಿವಾಸಿಗಳು ಮನೆಗಳನ್ನು ತೆರವುಗೊಳಿಸದ ಕಾರಣ ರಸ್ತೆ ಅಭಿವೃದ್ಧಿ ಕಾರ್ಯವಿಳಂಬವಾಗುತ್ತಿದೆ. ಪಟ್ಟಣ ಪಂಚಾಯಿತಿಯವರು ಎಂದು ಒತ್ತುವರಿ ತೆರವುಗೊಳಿಸುವರೋ ಅಂದಿನಿಂದ 6 ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿದರು.
ಸಾಲಗೇರಿ ರಸ್ತೆ ಬದಿಯ ನಿವಾಸಿಗಳಿಗೆ ಮನೆ ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿದೆ. ಅಲ್ಲಿಯ ನಿವಾಸಿಗಳು ಮಳೆಗಾಲ ಇರುವ ಕಾರಣ ಮನೆಗಳನ್ನ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಮಳೆಗಾಲ ಕಳೆಯುವವರೆಗೆ ಕಾಲವಕಾಶ ಕೇಳಿದ್ದಾರೆ. ಮಳೆ ಕಡಿಮೆಯಾದ ನಂತರ ನಿವಾಸಿಗಳ ಮನೆ ತೆರವಿಗೆ ಮುಂದಾಗುತ್ತೇವೆ.
-ಸುರೇಶ್‌ಬಾಬು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.