ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿ: ಭಾರತಕ್ಕೆ ಎರಡನೇ ಸ್ಥಾನ
Team Udayavani, Nov 14, 2022, 4:37 PM IST
ಹಾಸನ: ಪ್ಲಾಸ್ಟಿಕ್ ಮಾಲಿನ್ಯವು ಹೆಚ್ಚಿರುವ ಅಗ್ರಗಣ್ಯ 10 ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕ ಅಹಮದ್ ಹಗರೆ ಅವರು ಆತಂಕ ವ್ಯಕ್ತಪಡಿಸಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನದ ಜಯನಗರ ಘಟಕ ಹಾಗೂ ಹಾಸನ ತಾಲೂಕು ಸಮಿತಿಯ ವಿವಿಧ ಸಂಘಟನೆಗಳ ಸಂಯು ಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಬಂಧನ – ಪರಿಸರ ಸ್ಪಂದನ ಒಂದು ಪ್ರಾಯೋಗಿಕ ಚಟುವಟಿಕೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ಪರಿಸರ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ 2019-20ರಲ್ಲಿ ಭಾರತದಲ್ಲಿ ಸುಮಾರು 34 ಲಕ್ಷ ಟನ್, 2021-22ರ ಅವಧಿಯಲ್ಲಿ ಭಾರತದಲ್ಲಿ 42 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವು ಸೃಷ್ಟಿಯಾಗಿದೆ. ಅಂದರೆ ಪ್ರತಿ ಮನುಷ್ಯ ವಾರ್ಷಿಕವಾಗಿ 3 ಕೆ.ಜಿ. ಪ್ಲಾಸ್ಟಿಕ್ ಕಸವನ್ನ ಬೀದಿಗೆಸೆಯುತ್ತಿದ್ದಾನೆ. ಈ ಪ್ಲಾಸಿಕ್ ಮೈಕ್ರೋ ಪ್ಲಾಸ್ಟಿಕ್ ಗಳಾಗಿ ಪುನಃ ನೀರಿನ ಮೂಲಕ, ಆಹಾರದ ಮೂಲಕ ಹಾಗೂ ಗಾಳಿಯ ಮೂಲಕ ಮಾನವನೂ ಸೇರಿದಂತೆ ಎಲ್ಲ ಜೀವಿಗಳ ದೇಹ ಸೇರಿ ಗಂಟಲುರಿತ, ಕ್ಯಾನ್ಸರ್, ಅಸ್ತಮಾದಂತಹ ರೋಗಗಳು ಉಲ್ಬಣ ಗೊಳ್ಳಲು ಕಾರಣವಾಗಿದೆ ಎಂದು ವಿವರಿಸಿದರು.
ತ್ಯಾಜ್ಯಗಳ ವರ್ಗೀಕರಣ: ಹಾಸನದ ಜಯನಗರ ರಿಂಗ್ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ರಸ್ತೆಯಿಂದ ಬಡಾವಣೆಯ ವಿವಿಧ ಮಾರ್ಗಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಅಪಾಯಕಾರಿ ಗುಣಗಳನ್ನ ಜನತೆಗೆ ತಿಳಿ ಹೇಳುವ ಪ್ಲೆಕಾರ್ಡ್, ಹಾಡು, ಘೋಷಣೆ ಹಾಕಿ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ಸಂಚರಿಸಿ ಮನೆಗಳಿಂದ, ಬೀದಿಗಳಿಂದ, ಅಂಡಿಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಮರುಬಳಕೆ ಅಂದರೇ ನವೀಕರಿಸುವ, ಏಕಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ವರ್ಗೀಕರಿಸಲಾಯಿತು. 2ಚೀಲ ಮರು ನವೀಕರಿಸಬಲ್ಲ ಪ್ಲಾಸ್ಟಿಕ್ ಹಾಗೂ 30ಕ್ಕೂ ಅಧಿಕ ಇಕೋ ಬಾಟಲ್ ಬ್ರಿಕ್ಕಿಂಗ್ ಮಾಡಲಾಯಿತು.
ಈ ಕ್ರಿಯೆಯಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್.ಪಾಷಾ, ಖಜಾಂಚಿ ಗಿರಿಜಾಂಬಿಕ, ಸ್ನೇಹ ಸಂಪದ ಮಹಿಳಾ ಸಮಿತಿ ಅಧ್ಯಕ್ಷೆ ಮಮತಾ, ಶಿವು, ರೋಟರಿ ಮಿಡ್‌ಟೌನ್‌ನ ರಮಾಕಾಂತ್, ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಕೆ ಭವ್ಯ, ಜಾನಕಿ, ಬಿಜಿಎಸ್ ಜಿಲ್ಲಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಜಯಪ್ರಕಾಶ, ತಾಲೂಕು ಅಧ್ಯಕ್ಷೆ ರಾಧಾ, ತಾಲೂಕು ಕಾರ್ಯದರ್ಶಿ ವನಜಾಕ್ಷಿ, ಲಯನ್ಸ್ ಕ್ಲಬ್‌ನ ನಾಗೇಶ್, ಕಲಾವಿದ ದೇಸಾಯಿ, ಸ್ಕೌಟ್ ಅಂಡ್ ಗೈಡ್ಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.