![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 19, 2020, 2:28 PM IST
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ಪಟ್ಟಣ ವ್ಯಾಪ್ತಿಯಲ್ಲಿ ನ್ಯಾಯ ಬೇಕೆಂದು ಆಗ್ರಹಿಸಿ ಪೊಲೀಸ್ ಪೇದೆಯೋರ್ವ ಗಾಂಧೀಜಿ ಫೋಟೊ ಹಿಡಿದುಕೊಂಡು ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಸಂಜೆ ನಡೆಯಿತು.
ಜನನಿಬಿಡ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಅಪೋಲೋ ಮೆಡಿಕಲ್‌ನ ಮುಂಭಾಗ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆ ದಯಾನಂದ್ ತಮ್ಮ ಕಾರು ನಿಲ್ಲಿಸಿ ಔಷಧಿ ತರಲು ಮೆಡಿಕಲ್ ಷಾಪ್ ಒಳಗೆ ಹೋಗಿ ದ್ದರು. ಈ ಸಂದಭದಲ್ಲಿ ಅನಧಿಕೃತ ಜಾಗದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಕಂಡ ತಹಶೀಲ್ದಾರ್ ಮಂಜುನಾಥ್ ತಮ್ಮ ಕಾರು ಚಾಲಕನಿಗೆ ವಾಹನದ ಗಾಳಿ ಬಿಡಲು ಹೇಳಿದರು.
ಈ ಸಂರ್ಧಭದಲ್ಲಿ ತಹಶೀಲ್ದಾರ್ ವಾಹನದ ಚಾಲಕ ಕಾರಿನ ಚಕ್ರದ ಗಾಳಿ ಬಿಡುವಾಗ ಮೆಡಿಕಲ್ ಷಾಪ್‌ನಿಂದ ಪೇದೆ ಹೊರ ಬಂದಿದ್ದು ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಾಮುಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದು ಈ ವೇಳೆ ಪೇದೆ ದಯಾನಂದ್ ಮಹಾತ್ಮಗಾಂಧೀಜಿಯವರ ಫೋಟೊ ಹಿಡಿದು ಕಾರಿನ ಮುಂಭಾಗ ಕುಳಿತು ನ್ಯಾಯ ಕೊಡಿಸಬೇಕು. ತಹಶೀಲ್ದಾರ್ ನೋಟಿಸ್ ಕೊಡಲಿ, ದಂಡ ಹಾಕಲಿ. ಆದರೆ ಕಾರಿನ ಚಕ್ರದ ಗಾಳಿ ತೆಗೆದಿದ್ದು ಸರಿಯಲ್ಲ ಎಂದು ಧರಣಿ ಕುಳಿತರು.
ಇದರಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಲವು ಸಮಯ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಂತಿಮವಾಗಿ ನಗರ ಠಾಣೆ ಪಿಎಸ್‌ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಬಂದು ಇತರೆ ಪೊಲೀಸರ ಸಹಾಯ ದಿಂದ ಪೇದೆಯನ್ನು ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.