![ಕ್ರಿಕೆಟಿಗ ಅಕ್ಷರ್ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್](https://www.udayavani.com/wp-content/uploads/2024/12/Cricketer-Akshar-Patel-415x234.jpg)
ಸುಳ್ಳು ಭರವಸೆ ಮೂಲಕ ರಾಜಕಾರಣ ಮಾಡೋಲ್ಲ
Team Udayavani, Apr 14, 2019, 11:20 AM IST
![bagur](https://www.udayavani.com/wp-content/uploads/2019/04/bagur-620x316.png)
ಚನ್ನರಾಯಪಟ್ಟಣ: ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದೇನೆ ಹಾಗಂದ ಮಾತ್ರಕ್ಕೆ ಪೊಳ್ಳು ಭರವಸೆ ಹೇಳಿಕೊಂಡು ರಾಜಕಾರಣ ಮಾಡುವ ಜಯಮಾನ ನನ್ನದಲ್ಲ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಾರ ಮಾಡಿ ಬಾಗೂರು ಹೋಬಳಿಯ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: ಬಾಗೂರುಹೋಬಳಿ ನೀರಿನ ಸಮಸ್ಯೆ ಇದೆ ಈ ಬಗ್ಗೆ ಕ್ಷೇತ್ರದ ಶಾಸಕರು ಜಿಲ್ಲಾ ಮಂತ್ರಿ ರೇವಣ್ಣ ಅವರ ಗಮನಕ್ಕೆ ತಂದಿದ್ದಾರೆ. ಅವರಿಂದ ಶೀಘ್ರದಲ್ಲಿ ಕೆರೆ ಕಟ್ಟೆಗೆ ನೀರು ಹರಿಸಲಾಗುವುದು. ತಾಲೂಕಿಗೆ ಸುಮಾರು 200 ಕೋಟಿ ರೂ. ಏತನೀರಾವರಿಗಾಗಿ ಬಿಡುಗಡೆ ಮಾಡಿದ್ದು 90 ಕರೆ ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಮುಂದಿನ ವಿಧಾನ ಸಭೆ ಚುನಾವಣೆ ವೇಳೆಗೆ ತಾಲೂಕು ಬಾಗೂರು, ನುಗ್ಗೇಹಳ್ಳಿ, ತೋಟಿ, ಹಿರೀಸಾವೆ, ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆ ಪೂರ್ಣ ಮಾಡಲಾಗುವುದು. ಒಂದು ವೇಳೆ ಈ ಯೋಜನೆ ಪೂರ್ಣ ಮಾಡದೇ ಹೋದರೆ
ನಮಗೆ ಆಶೀರ್ವಾದ ಮಾಡುವುದು ಬೇಡ ಎಂದು ಸವಾಲು ಹಾಕಿದ್ದಾರೆ.
ಹುಸಿಯಾದ ಮಂಜು ಭರವಸೆ: 9 ತಿಂಗಳ ಹಿಂದೆ ಜಿಲ್ಲಾ ಮಂತ್ರಿಯಾಗಿದ್ದ ಎ.ಮಂಜು ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ದಂಡಿಗನಹಳ್ಳಿಹೋಬಳಿ ಕಾಚೇನಹಳ್ಳಿ ಏತನೀವಾರಿ ಭರವಸೆ ನೀಡಿ ಅಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರು. ನಂತರದ ದಿವಸದಲ್ಲಿ ಅತ್ತ ಸುಳಿಯಲಿಲ್ಲ ಈಗ ಅಲ್ಲಿ ಮತಯಾಚನೆಗೆ ತೆರಳಿದರೆ ಮಹಿಳೆಯರು ಪೊರಕೆ ಸೇವೆ ಮಾಡುತ್ತಾರೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಚೇನಹಳ್ಳಿ ಏತನೀರಾವರಿ ಮೂರನೇ ಹಂತಕ್ಕೆ ಚಾಲನೆ ನೀಡಿದೆ ಎಂದರು.
ಸೈನಿಕರನ್ನು ರಾಜಕೀಯಕ್ಕೆ ತರಬೇಡಿ: ಕುಲಗೆಟ್ಟ ರಾಜಕೀಯ ವ್ಯವಸ್ಥೆಗೆ ಸೈನಿಕರನ್ನು ಮಧ್ಯ ತರುವುದು ಬೇಡ. ಮೋದಿ ತಾನು ಪಾಕಿಸ್ತಾನದ ಮೇಲೆ ದಾಳಿ ಮಾಡಿದವರಂತೆ ಹೇಳುತ್ತಾರೆ. ದೇಶದ ಸೈನಿಕರು ತಮ್ಮ ಕರ್ತವ್ಯ ಮಾಡಿದ್ದಾರೆ ಹೊರತು ಮೋದಿ ಮಾಡಿಲ್ಲ. ಇಂದಿರಾ ಗಾಂಧಿ, ಅಟಾಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿಯೂ ಪಾಕಿಸ್ತಾನದ ಮೇಲೆ ದಾಳಿ
ನಡೆದಿತ್ತು ಎಂದು ಹೇಳಿದರು.
ರೈತರ ಮತ ಪಡೆಯಲು ಮೋದಿ ತಂತ್ರ: ರೈತರು ಖಾತೆಗೆ ಆರು ಸಾವಿರ ಹಣ ಮೂರು ಕಂತಿನಲ್ಲಿ ಹಾಕುವುದು ಕೇವಲ ಏ.23ರ ವರೆಗೆ ಇರುತ್ತದೆ
ಮುಂದಿ ಇದು ಇರುವುದಿಲ್ಲ. ಚುನಾವಣೆ ವೇಳೆ ರೈತರ ಮತ ಪಡೆಯಲು ಮೋದಿ ನೀಡಿರುವ ಕೊಡುಗೆಇಂತಹ ಕೊಡುಗೆಗೆ ರೈತರು ಮಾರು ಹೋಗುವುದು ಬೇಡ. ಇದೊಂದು ರೀತಿ ವ್ಯಾಪಾರಸ್ಥರು ನೀಡುವ ಕೊಡುಗೆ ರೀತಿಯಲ್ಲಿ ನೀಡಲಾಗಿದೆ ಎಂದು ವ್ಯಂಗ್ಯವಾಡಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಶದಲ್ಲಿ ವಿರೋಧ ಪಕ್ಷ ಇಲ್ಲದಂತೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿದ್ದರ ಫಲವಾಗಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗುತ್ತಿದೆ. ಇದಕ್ಕೆ ಎರಡೂ ಪಕ್ಷದ ಕಾರ್ಯಕರ್ತ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮೋದಿ ಮೋಡಿ ನಡೆಯೋಲ್ಲ: ಮೋದಿ ಅಧಿಕಾರಕ್ಕೆ ಬಂದ ಮೇಲೆ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಹಲವು ರಾಜ್ಯದಲ್ಲಿ ಮೋದಿ ಚಮತ್ಕಾರ ನಡೆಯಲಿಲ್ಲ. ಹಾಗಾಗಿ ಉತ್ತರ ಭಾರತದಿಂದ ದಕ್ಷಿಣದ ಕಡೆ ಮುಖಮಾಡಿದ್ದಾರೆ ಇಲ್ಲಿಯೂ ಅವರ ಮೋಡಿ ನಡೆಯುವುದಿಲ್ಲ. ಶ್ರೀಮಂತ ಉದ್ಯಮಿಗಳ ಸಾಲ ಮನ್ನ ಮಾಡುವ ಈತ
ರೈತರ ಸಾಲಮನ್ನಾ ಯಾಕೆ ಮಾಡಲಿಲ್ಲ ಎಂದು ಪ್ರಜ್ವಲ್ ಪ್ರಶ್ನಿಸಿದರು.
ಬಾಗೂರಿಗೆ ಆಗಮಿಸಿದ ಮೈತ್ರಿ ಆಭ್ಯರ್ಥಿ ಪ್ರಜ್ವಲ್‌ಗೆ ಬೃಹತ್ ಹಾರವನ್ನು ಕೈನ್ ಮೂಲಕ ಕಾರ್ಯಕರ್ತರು ಹಾಕಿದರು. ಸಂಸದೀಯ ಕಾರ್ಯದರ್ಶಿ ಎಂ.ಎ.ಗೋಪಾಲಸ್ವಾಮಿ, ಜಿಪಂ ಸದಸ್ಯ ಸಿ.ಎನ್ ಪುಟ್ಟಸ್ವಾಮಿಗೌಡ, ಎಪಿಎಂಸಿ ಅಧ್ಯಕ್ಷ ಶಿವಣ್ಣ, ನಿರ್ದೇಶಕರಾದ ಎಂ.ಶಂಕರ್, ಶಿವಸ್ವಾಮಿ, ಅನಿಲ್ ಕುಮಾರ, ಮುಖಂಡರಾದ ಲೋಕೇಶ್, ಕೃಷ್ಣೇಗೌಡ, ಲಲಿತಮ್ಮ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![ಕ್ರಿಕೆಟಿಗ ಅಕ್ಷರ್ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್](https://www.udayavani.com/wp-content/uploads/2024/12/Cricketer-Akshar-Patel-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![HD-Kumaraswmy](https://www.udayavani.com/wp-content/uploads/2024/12/HD-Kumaraswmy-1-150x90.jpg)
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
![Coffe-Grower](https://www.udayavani.com/wp-content/uploads/2024/12/Coffe-Grower-150x90.jpg)
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
![4-sakleshpura](https://www.udayavani.com/wp-content/uploads/2024/12/4-sakleshpura-150x90.jpg)
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
![Kottigehara](https://www.udayavani.com/wp-content/uploads/2024/12/Kottigehara-150x90.jpg)
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
![15](https://www.udayavani.com/wp-content/uploads/2024/12/15-3-150x90.jpg)
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.