ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ
Team Udayavani, Jun 20, 2019, 1:24 PM IST
ಸಕಲೇಶಪುರ: ಜನ ಮತ ನೀಡಲಿ ಬಿಡಲಿ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ 1×8 ಎಂ.ವಿ.ಎ 66/11 ಕೆ.ವಿ ವಿದ್ಯುತ್ ಉಪ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದ ವೇಳೆಯಲ್ಲಿ ಈ ಭಾಗದ ಜನರ ವಿದ್ಯುತ್ ಸಮಸ್ಯೆಯನ್ನು ಕಂಡು ಹೆತ್ತೂರಿಗೆ ವಿದ್ಯುತ್ ಉಪಕೇಂದ್ರವನ್ನು ಮಂಜೂರು ಮಾಡಿಸಿದ್ದೆ. ಆದರೆ ನಾವು ಅಧಿಕಾರ ದಲ್ಲಿರದ ಕಾರಣ ಕಾಮಗಾರಿ ಮುಗಿಯುವುದು ವಿಳಂಬವಾಗಿದೆ. ದೇವೇೕಗೌಡರಿಗೆ ರಾಜಕೀಯ ವಾಗಿ ಪುನರ್ ಶಕ್ತಿ ನೀಡಿದ್ದು ಹೆತ್ತೂರು ಭಾಗದ ಜನ ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಋಣ ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಉಚ್ಚಂಗಿ ಗ್ರಾಮದಲ್ಲೂ ಸಹ ಇದೇ ರೀತಿಯ ವಿದ್ಯುತ್ ಉಪಕೇಂದ್ರವನ್ನು ಮಾಡಲು ಯೋಜಿ ಸಿದ್ದು ಕೆಪಿಟಿಸಿಎಲ್ ಅಧಿಕಾರಿಗಳು ಯೋಜನೆಯ ನೀಲ ನಕ್ಷೆ ತಯಾರಿಸಬೇಕೆಂದರು.
ರೈತರ ಸಮಸ್ಯೆ ನಿವಾರಿಸಲು ಕ್ರಮ: ಬೆಳೆಗಾರರ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ದೇವೇ ಗೌಡರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ದ್ದರು. ಈ ಹಿಂದೆ ಕೇಂದ್ರದಲ್ಲಿ ವಾಣಿಜ್ಯ ಸಚಿವ ರಾಗಿದ್ದ ಸುರೇಶ್ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದೆವು. ಅವರು ಸಮಸ್ಯೆಯನ್ನು ಬಗೆಹರಿ ಸಲು ಆಸಕ್ತಿ ತೋರಿದ್ದರು. ಆದರೆ ಲೋಕಸಭಾ ಚುನಾವಣೆ ಘೋಷಣೆಯಗಿದ್ದರಿಂದ ಸಮಸ್ಯೆ ಬಗೆಹರಿಯಲಿಲ್ಲ. ಕಾಡಾನೆ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಹಲವು ಬಾರಿ ಕೇಂದ್ರ ಸರ್ಕಾರ ಮನವಿ ಮಾಡಿದರೂ ಸ್ಪಂದಿಸದ ಕಾರಣ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಕಾಡಾನೆ ಸಮಸ್ಯೆಯನ್ನು ಬಗೆಹರಿಸಲು ಕುಮಾರಣ್ಣನ ನೇತೃತ್ವದಲ್ಲಿ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಯಾವ ರೀತಿಯಲ್ಲೂ ತೊಂದರೆ ಯಾಗದಂತೆ ಉತ್ತಮ ಯೋಜನೆ ಗಳನ್ನು ರೂಪಿಸುವಂತೆ ಸಿಎಂ ಕುಮಾರಣ್ಣ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅಧಿಕಾರಿಗಳು ಸಹ ರೈತಪರ ವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಗುಣಮಟ್ಟದ ವಿದ್ಯುತ್ ಸರಬರಾಜು: ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಹೆತ್ತೂರು ಸುತ್ತಮುತ್ತಲಿನ ಗ್ರಾಮಗಳಾದ ಐಗೂರು, ಬ್ಯಾಕರವಳ್ಳಿ, ವನಗೂರು, ಹಾಡ್ಯ ಹಾಗೂ ಹೊಂಗಡಹಳ್ಳ ಸೇರಿದಂತೆ ಇತರ ಕಡೆಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಈ ವಿದ್ಯುತ್ ಸರಬರಾಜು ಕೇಂದ್ರ ಸಹಾಯಕಾರಿಯಾಗಿದೆ. ಜೊತೆಗೆ ಯಸಳೂರು ವಿದ್ಯುತ್ ವಿತರಣಾ ಕೇಂದ್ರ ಹೊರೆಯನ್ನು ಕಡಿಮೆ ಮಾಡುವುದರಿಂದ 11 ಕೆ.ವಿ. ಮಾರ್ಗ ದಲ್ಲಾಗುವ ವಿದ್ಯುತ್ ನಷ್ಟವೂ ಕಡಿಮೆಯಾಗುತ್ತದೆ ಎಂದರು.
ಈ ಭಾಗದಲ್ಲಿ ಮಳೆ ಬಹಳ ಕಡಿಮೆ ಯಾಗಿರುವುದು ಆತಂಕವಾಗಿದೆ. ಕೊಡಗಿಗೆ ಹೇಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೀರೋ ಹಾಗೆಯೆ ಸಕಲೇಶಪುರ ಅಭಿವೃದ್ಧಿ ಪ್ರಾಧಿಕಾರ ಮಾಡಲು ಮುಖ್ಯಮಂತ್ರಿಗಳು ಗಮನಹರಿಸ ಬೇಕು. ಸಕಲೇಶಪುರ ತಾಲೂಕಿನಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕರು ಒತ್ತಾಯಿಸಿದರು.
ನೂತನ ಲೋಕ ಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಷ್ಟಾಚಾರ ಉಲ್ಲಂಘನೆ: ಜಿಪಂ ಸದಸ್ಯೆ ಉಜ್ಮಾ ರುಜ್ವಿ ಮಾತನಾಡಿ, ಈ ಭಾಗದ ಜನರ ಅನು ಕೂಲಕ್ಕಾಗಿ ತಮ್ಮ ಪತಿ ಸುದರ್ಶನ್ ಅವರು 2.20 ಎಕರೆ ಜಾಗವನ್ನು ಕೆಪಿಟಿಸಿಎಲ್ಗೆ ನೀಡಿದ್ದರು. ಆದರೆ ಇಂದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಯಾದ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿ ಗಳು ಹಾಕದೆ ಅಪಮಾನವೆಸಗಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ ರೇವಣ್ಣ ನವರು ನನ್ನ ಮನವೊಲಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲದಿದ್ದಲ್ಲಿ ನಾನು ಇಲ್ಲಿಗೆ ಬರುತ್ತಿರಲಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮುಖ್ಯ ಅಭಿಯಂತರ ಕೊಟ್ರೇಶ್, ಮುಖ್ಯ ಅಧೀಕ್ಷಕ ಉಮೇಶ್, ಕಾರ್ಯಪಾಲಕ ಅಭಿಯಂತರ ಲೋಕೇಶ್, ಉಪ ಅಭಿಯಂತರ ರಂಜನ್, ಜಾತ್ಯತೀತ ಜನತಾದಳ ಮುಖಂಡರಾದ ಸಚಿನ್ ಪ್ರಸಾದ್, ನಾಗರಾಜ್, ದಿವಾಕರ್, ರಾಜೇಗೌಡ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.