ಕಳಪೆ ಕಾಮಗಾರಿ: ರೈಲ್ವೇ ಮೇಲ್ಸೇತುವೆ ಕುಸಿಯುವ ಭೀತಿ
Team Udayavani, Oct 10, 2022, 5:21 PM IST
ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿ ರೈಲ್ವೇ ಮೇಲ್ಸೇತುವೆ 1.25 ಕೋಟಿ ವೆಚ್ಚದಲ್ಲಿ ದುರಸ್ತಿ ಗೊಳಿಸಿ ಬೆರಳೆಣಿಕೆ ತಿಂಗಳುಗಳ ಅಂತರದಲ್ಲಿ ಮತ್ತೆ ಕುಸಿಯುತ್ತಾ ಅಪಾಯದ ಮುನ್ಸೂಚನೆ ನೀಡುತ್ತಿದೆ. ಹೊಳೆನರಸೀಪುರ ಪಟ್ಟಣದಿಂದ ಹಾಸನಕ್ಕೆ ತೆರಳುವ ತಾಲೂಕಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಂಡು ಕೆಲವೇ ವರ್ಷಗಳಾಗಿದೆ.
ಈ ಸೇತುವೆ ನಿರ್ಮಾಣದ ಹಂತದಲ್ಲೆ ನಾಲ್ಕಾರು ಭಾರಿ ಕುಸಿದು ಅವಾಂತರಕ್ಕೆ ಕಾರಣಾಗಿತ್ತು.ಆದರೆ ಅಂತು ಇಂತೂ ಸೇತುವೆಯೇನೋ ಸಿದ್ದವಾಗಿ ಎಲ್ಲ ರೀತಿಯ ವಾಹನಗಳ ಸಂಚಾರ ಆರಂಭದಲ್ಲಿ ಎಲ್ಲವು ಸುಖಕರವಾಗಿತ್ತು. ಆದರೆ, ಮೇಲ್ಸೆತುವೆ ಕಾಮಗಾರಿ ಗುಣಮಟ್ಟವಿಲ್ಲದೆ ಹೋಗಿದ್ದರಿಂದ ಕೆಲವೇ ತಿಂಗಳುಗಳಲ್ಲಿ ರಸ್ತೆಗುಂಡಿ ಬಿಳುವ ಹಂತ ತಲುಪಿದೆ. ರಸ್ತೆಗೆ ಹಾಕಿದ್ದ ಕಾಂಕ್ರಿಟ್ ಸಂಪೂರ್ಣವಾಗಿ ಕುಸಿಯಲಾರಂಭಿಸಿದೆ. ಈ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಡಲು ಮೀನಮೇಷ ಎಣಿಸುವಂತೆ ಆಗಿದ್ದರಿಂದ ಜೊತೆಗೆ ರಸ್ತೆಗೆ ಹಾಕಿದ್ದ ಕಾಂಕ್ರಿಟ್ ಕಿತ್ತು ಹೋಗಿ ರಸ್ತೆ ಗುಂಡಿಮಯವಾಗಿ ವಾಹನ ಸವಾರರ ಓಡಾಡಕ್ಕೆ ತೀವ್ರ ಅಡಚಣೆಗೆ ಕಾರಣವಾಯಿತು.
ಮೇಲ್ಸೇತುವೆ ದುರಸ್ತಿಗೆ 1.25 ಕೋಟಿ ವೆಚ್ಚ: ಇದನ್ನು ಮನಗಂಡು ಜಿಲ್ಲೆಯ ಪ್ರಭಾವಿ ಜನಪ್ರತಿ ನಿಧಿಗಳ ಆಸಕ್ತಿಯಿಂದ ಕಳೆದ ಜನವರಿಯಲ್ಲಿ ಇದರ ದುರಸ್ತಿಗೆ ಅಂದಾಜು 1.25 ಕೋಟಿ ಕ್ರೀಯಾಯೋಜನೆ ಮೇಲೆ ಮೇಲ್ಸೇತುವೆ ದುರಸ್ತಿ ಕಾರ್ಯ ಆರಂಭಗೊಂಡು ಸುಮಾರು ಒಂದು ತಿಂಗಳ ಕಾಲ ಈ ರಸ್ತೆಯನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಬೇರೊಂದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು. ಆದರೆ, ಈ ಮೇಲ್ಸೇತುವೆ ನಿರ್ಮಾಣಕ್ಕೆ ಸುಮಾರು 35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕೆಲವೇ ದಿನಗಳಲ್ಲಿ ಪುನಃ ಇದೀಗ ಈ ರಸ್ತೆ ಕುಸಿಯಲಾರಂಭಿಸಿದೆ. ರಸ್ತೆ ಮಧ್ಯೆ ಗುಂಡಿಗಳು ಬೀಳ ತೊಡಗಿವೆ.
ಮಳೆ ನೀರು ಆವೃತ: ರಸ್ತೆ ಕ್ರಮಬದ್ಧವಾಗಿರದೆ ಏರಿಳಿತಗಳು ಕಾಣಿಸಿಕೊಳ್ಳಲಾರಂಬಿಸಿದೆ. ಈ ಮೇಲ್ಸೇತುವೆಯಲ್ಲಿನ ರಸ್ತೆ ಪಕ್ಕದಲ್ಲಿ ಮಳೆ ನೀರು ಹೊರ ಹೋಗಲು ಇರಬೇಕಾದ ಯಾವೊಂದು ತೂಬುಗಳು ಇಲ್ಲದೆ ಹೋಗಿರುವು ದರಿಂದ ಮಳೆ ನೀರು ಹೊರಹೋಗದ ಕಾರಣ ಸೇತುವೆಗೆ ಹಾಕಿರುವ ಡಾಂಬರ್ ರಸ್ತೆ ಕಿತ್ತು ಹಳ್ಳಗಳು ಬೀಳತೊಡ ಗಿದೆ. ಇದನ್ನು ಇದೇ ರೀತಿ ಬಿಟ್ಟರೆ ವಾಹನಗಳ ಓಡಾಟವಿರಲಿ, ದಿನ ನಿತ್ಯ ಅಫಘಾತದ ಜೋನ್ ಆಗಲಿದೆ ಎಂಬುದು ವಾಹನ ಚಾಲಕರ ಅನಿಸಿಕೆ ಆಗಿದೆ. ರೈಲ್ವೆ ಇಲಾಖೆ ಈ ರಸ್ತೆ ಬಗ್ಗೆ ತುರ್ತು ಗಮನ ಹರಿಸದೇ ಹೋದಲ್ಲಿ ಜೀವಗಳ ಹಾನಿಗೆ ಆಗುವ ಸಂಭವವಿದೆ. ಈ ರಸ್ತೆ ಬಗ್ಗೆ ಜಿಲ್ಲೆಯ ಪ್ರಭಾವಿತ ಜನ ಪ್ರತಿನಿಧಿಗಳು ಕ್ರಮಕೈಗೊಂಡು ಮುಂದೆ ಆಗಬಹುದಾದ ಜೀವ ಹರಣಗಳನ್ನು ತಡೆಯವರೆ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.