ಅಂಚೆ ಕಚೇರಿ ಸ್ಥಳಾಂತರ: ಪಾಳುಬಿದ್ದ ಸ್ವಂತ ಕಟ್ಟಡ
Team Udayavani, Nov 13, 2021, 1:53 PM IST
ಅರಸೀಕೆರೆ: ನಗರದ ರೈಲ್ವೆ ನಿಲ್ದಾಣದಲ್ಲಿದ್ದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಆರ್.ಎಂ.ಎಸ್ ಅಂಚೆ ಕಚೇರಿಯನ್ನು ಇಲಾಖೆಯ ಅಧಿಕಾರಿಗಳು ಕಟ್ಟಡವನ್ನು ಪಾಳು ಬಿಟ್ಟು ಬೀರೂರಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಅರಸೀಕೆರೆ ಪ್ರಮುಖ ರೈಲ್ವೆ ಜಂಕ್ಷನ್ ಕೇಂದ್ರವಾಗಿದ್ದು, ಅನೇಕ ರೈಲುಗಳು ಪ್ರತಿನಿತ್ಯ ಸಂಚರಿಸುತ್ತವೆ.
ಅಂಚೆ ಸಾಗಾಣಿಕೆಗೆ ಮೈಸೂರು, ಹಾಸನ ಶಿವಮೊಗ್ಗ, ಬೆಂಗಳೂರುಗಳತ್ತ ರವಾನಿಸುವ ಅಂಚೆ ಬ್ಯಾಗ್‌ಗಳನ್ನು ಸಕಾಲದಲ್ಲಿ ಕಳಿಸಲು ಅರಸೀಕೆರೆ ಸೂಕ್ತ ಸ್ಥಳವಾಗಿದ್ದ ಕಾರಣ ಹಲವು ದಶಕಗಳಿಂದ ಇಲ್ಲಿಯೇ ಆರ್‌ಎಂಎಸ್ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಾ ಉತ್ತಮ ಸೇವೆ ನೀಡುವ ಮೂಲಕ ಜನರ ಮೆಚ್ಚಿಗೆಗೂ ಪಾತ್ರವಾಗಿತ್ತು.
ಇದನ್ನೂ ಓದಿ:- ತ್ರಿಪುರಾ ಘಟನೆ ಖಂಡಿಸಿ ಪ್ರತಿಭಟನೆ
ಆದರೆ ಇತ್ತೀಚೆಗೆ ಬೀರೂರಿಗೆ ಸ್ಥಳಾಂತರಗೊಂಡಿರುವುದು ಯಾವ ಕಾರಣ ಎಂಬುದು ಸಾರ್ವ ಜನಿಕರಿಗೆ ಅರ್ಥವಾಗದ ಯಕ್ಷ ಪ್ರಶ್ನೆಯಾಗಿದೆ. ಬೀರೂರಿನಿಂದ ಮೈಸೂರು, ಬೆಂಗಳೂರು, ಹಾಸನ ಮಾರ್ಗ ರವಾನಿಸುವ ಬ್ಯಾಗ್‌ಗಳು ಅರ ಸೀಕೆರೆ ಮಾರ್ಗವಾಗಿಯೇ ಬರಬೇಕು.
ಅರಸೀಕೆರೆಯಲ್ಲಿದ್ದ ಅಂಚೆ ಇಲಾಖೆ ಉಗ್ರಾಣ ಕೇಂದ್ರವನ್ನು ಹುಬ್ಬಳ್ಳಿಗೆ ಸ್ಥಳಾಂ ತರ ಗೊಂಡಿರುವುದರಿಂದ ಕೋಟ್ಯಂತರ ಬೆಲೆ ಕಟ್ಟಡಗಳು ಪಾಳು ಬಿದ್ದಂತಾಗುತ್ತದೆ. ಆದ್ದರಿಂದ ಅರಸೀಕೆರೆ ಪಿಎಸ್‌ಡಿ ಕಟ್ಟಡಕ್ಕೆ ಬೀರೂರಿನಲ್ಲಿರುವ ಆರ್‌ಎಂಎಸ್ ಕಚೇರಿ ಯನ್ನು ಸ್ಥಳಾಂತರಿಸಿದರೆ. ಅಲ್ಲಿ ಪ್ರತಿ ತಿಂಗಳು ನೀಡುತ್ತಿರುವ ಸುಮಾರು 75 ಸಾವಿರ ರೂ ಅಂಚೆ ಇಲಾಖೆಗೆ ಉಳಿತಾಯ ವಾಗುತ್ತದೆ ಮತ್ತು ಇಲಾಖೆಯ ಆಸ್ಥಿಯೂ ಸುಭದ್ರವಾಗಿರುತ್ತದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಾರ್ಯನಿರ್ವಹಣೆ ಅಗತ್ಯ – ಅಂಚೆ ಇಲಾಖೆ ಜನಸಾಮಾನ್ಯರಿಗೆ ಸಣ್ಣ ಉಳಿತಾಯ ಯೋಜನೆಯನ್ನು ಪರಿಚಯಿಸಿ ಉಳಿತಾಯ ಜಾಗೃತಿ ಹಾಗೂ ಉತ್ತಮ ಸೇವೆ ಮಾಡುತ್ತಿದೆ, ಆದರೆ ತಾನೇ ತನ್ನ ಕಟ್ಟಡವನ್ನು ಖಾಲಿ ಬಿಟ್ಟು, ಬಾಡಿಗೆ ನೀಡುತ್ತಿರುವುದು ದುರಂತವೇ ಸರಿ. ಆರ್‌ಎಂಎಸ್ ಕಚೇರಿಯನ್ನು ಅರಸೀಕೆರೆಗೆ ಸ್ಥಳಾಂತರಸಿ ಕಾರ್ಯ ನಿರ್ವಹಿಸಲಿ, ಎಂಬುದು ಸಾರ್ವಜನಿಕರ ಆಶಯವಾಗಿದೆ, ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿ ಕಾರ್ಯ ನಿರ್ವಹಣೆ ಇನ್ನೂ ಹೆಚ್ಚು ಸುಲಲಿತ ಮತ್ತು ಆರ್ಥಿಕ ಉಳಿತಾಯ ಅಂಶಗಳನ್ನು ಅವಲೋಕಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.