ಶುಲ್ಕ ವಿವರ ಘೋಷಣೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಡ್ಡೆ
Team Udayavani, May 3, 2019, 2:29 PM IST
ಚನ್ನರಾಯಪಟ್ಟಣ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ವಿಧಿಸುವ ಶುಲ್ಕದ ವಿವರಗಳನ್ನು ನಿಗದಿತ ದಿನಾಂಕದೊಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಗೆ ಸಲ್ಲಿಸಿ ಕೈತೊಳೆದು ಕೊಂಡಿರುವುದನ್ನು ಹೊರತುಪಡಿಸಿ ಶಾಲಾ ಆವರಣದಲ್ಲಿನ ನೋಟಿಸ್‌ಬೋರ್ಡ್‌ನಲ್ಲಿ ಹಾಕದೇ ಅಸಡ್ಡೆ ತೋರುತ್ತಿವೆ.
ಅನುದಾನ ರಹಿತ ಶಾಲೆಗಳು ಡಿ.31ರೊಳಗೆ ಶೈಕ್ಷಣಿಕ ವರ್ಷದ ನಿಗದಿತ ಶುಲ್ಕಗಳ ಸಂಪೂರ್ಣ ವಿವರಗಳನ್ನು ಇಲಾಖೆಗೆ ಒದಗಿಸಿವೆ. ಆದರೆ ಶಾಲೆಗೆ ಮಕ್ಕಳು ದಾಖಲೆಯಾಗುತ್ತಿರುವ ಈ ವೇಳೆಯಲ್ಲಿ ನೋಟಿಸ್ ಬೋರ್ಡ್ ಅಥವಾ ವೆಬ್‌ಸೈಟ್‌ಗಳಲ್ಲಿ ಶುಲ್ಕದ ವಿವಿರಗಳನ್ನು ಪ್ರಕಟಿಸಬೇಕೆಂಬ ಸರ್ಕಾರ ಆದೇಶಕ್ಕೆ ಮನ್ನಣೆ ನೀಡದೇ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಪ್ರಸಕ್ತ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದು, ಪಾಲಕರಿಂದ ಮನಸೋ ಇಚ್ಛೆ ಹಣ ವಸೂಲಿಗೆ ಇಳಿದಿವೆ.
ಶಿಕ್ಷಣ ಇಲಾಖೆ ನಿದ್ದೆ ಮಾಡುತ್ತಿದೆ: ತಾಲೂಕಿನ 43 ಖಾಸಗಿ ಶಾಲೆಗಳಿದ್ದು, 2019-20ನೇ ಸಾಲಿನ ನಿಗದಿತ ಶುಲ್ಕ ವಿವರಣೆಯನ್ನು ಡಿಸೆಂಬರ್ ತಿಂಗಳಿನಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತಲುಪಿಸಿದ್ದಾರೆ. ಶಾಲೆಗೆ ಮಕ್ಕಳ ದಾಖಲಾತಿ ಯಾಗುವ ತಿಂಗಳಿನಲ್ಲಿ ನಿಗದಿತ ಶುಲ್ಕದ ವಿವರವನ್ನು ನೋಟಿಸ್ ಬೋರ್ಡ್ ಹಾಕು ವಲ್ಲಿ ಖಾಸಗಿ ಸಂಸ್ಥೆಯವರು ಅಸಡ್ಡೆ ತೋರುತ್ತಿದ್ದಾರೆ, ಈ ಬಗ್ಗೆ ಪ್ರಶ್ನೆ ಮಾಡಬೇಕಿರುವ ಸರ್ಕಾರಿ ಇಲಾಖೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.
ಬಿಇಒ ನಿರಂತರ ರಜೆ: ಈ ಸಂಬಂಧ ಶಾಲೆಗಳಿಗೆ ಬಿಸಿ ಮುಟ್ಟಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಏ.5 ರಿಂದ ಏ.29ರ ವರೆಗೆ ರಜೆ ಮೇಲೆ ತೆರಳಿದ್ದು, ಎರಡು ದಿವಸದಿಂದ ಕಚೇರಿಗೆ ಅಗಮಿಸಿದ್ದಾರೆ. ಎಸ್‌ಎಸ್‌ಎಲ್ಸಿ ಫಲಿತಾಂಶ ಹೊರಬಂದಿರುವ ವೇಳೆಯಲ್ಲಿ ಕಚೇರಿಗೆ ಆಗಮಿಸಿರುವ ಬಿಇಒ ಎಚ್.ಕೆ.ಪುಷ್ಪಲತಾ ಈಗಾಗಲೇ ಕಡಿಮೆ ಫಲಿತಾಂಶ ಬಂದಿರುವ ಪ್ರೌಢ ಶಾಲೆ ಶಿಕ್ಷಕರ ಸಭೆ, ಬೇಸಿಗೆ ರಜೆಯಲ್ಲಿನ ಬಿಸಿಯೂಟ ಪರಿಶೀಲನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆ ಮುಖ ಮಾಡುತ್ತಿಲ್ಲ.
ಕ್ಷೇತ್ರ ಶಿಕ್ಷಣಾಧಿಕಾರಿ ನಿರಂತರ ರಜೆ ಮೇಲೆ ಕಚೇರಿ ಯಿಂದ ಹೊರಗೆ ಇದ್ದ ವೇಳೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹೇಳುವವರು ಹಾಗೂ ಕೇಳುವರು ಇಲ್ಲದಂತಾಗಿದ್ದು ಇಸಿಒಗಳು ತಮ್ಮ ಜವಬ್ದಾರಿ ಮರೆತಿದ್ದಾರೆ. ಅವರು ತಮ್ಮ ವ್ಯಾಪ್ತಿಗೆ ಬರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು ಈ ಕೆಲಸ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಪಾರದರ್ಶಕತೆ ಇಲ್ಲ: ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಮೇಲೆ ನಿಗಾ ವಹಿಸಲು ಮತ್ತು ಶಾಲಾ ಪ್ರವೇಶಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಬೇಕೆಂಬ ಉದ್ದೇಶದಿಂದ ಪ್ರವೇಶಾತಿ ಶುಲ್ಕ ನಿಗದಿ ಮಾಡಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒದಗಿಸುವುದು ಮತ್ತು ನಿಗದಿ ಪಡಿಸಿರುವ ಶುಲ್ಕದ ವಿವರಗಳನ್ನು ಶಾಲೆಗಳ ವೆಬ್‌ಸೈಟ್, ನೋಟಿಸ್ ಬೋರ್ಡ್‌ಗಳಲ್ಲಿ ಪ್ರಕಟಿಸುವಂತೆ ನಿಯಾಮಾವಳಿ ಜಾರಿಯಲ್ಲಿದೆ, ಆದರೆ ಹೆಚ್ಚಿನ ಖಾಸಗಿ ಶಾಲೆಗಳು ಶುಲಕ ನಿಗದಿ ದಾಖಲೆಯನ್ನು ಇಲಾಖೆಗೆ ನೀಡಿರುವುದು ಬಿಟ್ಟರೆ ಶಾಲೆಗಳಲ್ಲಿ ಶುಲ್ಕದ ವಿವಿರಗಳ ಸಂಪೂರ್ಣ ಮಾಹಿತಿ ಯನ್ನು ನೋಟಿಸ್ ಬೋರ್ಡ್‌ಗಳಿಗೆ ಹಾಕದೇ ಇರುವು ದರಿಂದ ಪಾರದರ್ಶಕ ಪ್ರಕ್ರಿಯೆಗೆ ತೊಡಕನ್ನು ಉಂಟು ಮಾಡುತ್ತಿದೆ.
ಪೋಷಕರು ಪ್ರಶ್ನಿಸುತ್ತಿಲ್ಲ: ಮಕ್ಕಳ ಶಾಲೆಗೆ ದಾಖಲಿ ಸಲು ಆಗಮಿಸುವ ಪೋಷಕರಿಗೆ ನಿಯಮಾನು ಸಾರ ಮಾಡಿದ ಶುಲ್ಕದ ಸ್ವರೂಪ, ಬೋಧನಾ ಸಂಪನ್ಮೂಲ ಸೇರಿದಂತೆ ಇತರೆ ವಿವಗಳನ್ನು ಮನದಟ್ಟು ಮಾಡ ಬೇಕು. ಆದರೆ ತಮ್ಮ ಮಕ್ಕಳ ಭವಿಷ್ಯದ ಮುಂದೆ ಉಳಿದೆಲ್ಲವನ್ನು ನಗಣ್ಯವೆಂದು ಕೆಲ ಪೋಷಕರು ಕೂಡಾ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಶುಲ್ಕ ನಿಗದಿಗೆ ಸಂಬಂಧಿಸಿದಂತೆ ವಿರೋಧಗಳು ಎದು ರಾಗದಂತೆ ಕೆಲವು ಖಾಸಗಿ ಶಾಲೆಗಳು ನೋಡಿ ಕೊಳ್ಳುತ್ತಿವೆ. ಒಟ್ಟು ಶುಲ್ಕವನ್ನಷ್ಟೇ ತಿಳಿಸುತ್ತಿವೆ ಎಂಬ ಆರೋಪಗಳು ಪೋಷಕರಿದ ಕೇಳು ಬರುತ್ತಿದೆ.
ಖಾಸಗಿ ಶಾಲೆಗಳ ಶುಲ್ಕದ ವಿವರ: ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ ಎಲ್ಕೆಜಿ ಅಥವಾ 1ನೇ ತರಗತಿಗೆ 6,300 ರೂ. ಶುಲ್ಕ ಪಡೆದರೆ, ಕೆಲವು ಶಾಲೆಗಳು 1ನೇ ತರಗತಿಗೆ 34,800 ರೂ. ಶುಲ್ಕ ನಿಗದಿ ಮಾಡಿರುವುದಾಗಿ ಇಲಾಖೆಗೆ ಮಾಹಿತಿ ನೀಡಿವೆ.
ನ್ಯಾಯಾಲದ ಮೊರೆ: ಶಾಲಾ ಪ್ರವೇಶಾತಿಗೆ ಯಾವ ಪ್ರಮಾಣದಲ್ಲಿ ಶುಲ್ಕ ನಿಗದಿ ಮಾಡಬೇಕೆಂಬ ನಿಯಮ ಸಂಬಂಧ ಖಾಸಗಿ ಶಾಲೆಗಳು ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಅಂತಿಮ ಅಧಿಸೂನೆಯನ್ನು ಸರ್ಕಾರ ಹೊರಡಿಸಿಲ್ಲ. ಇಷ್ಟೇ ಶುಲ್ಕ ಪಡೆಯಬೇಕೆಂಬ ನಿಮಯಕ್ಕೂ ಒಪ್ಪದೇ ಇತ್ತ ತಾವೇ ವಿಧಿಸುವ ಶುಲ್ಕದ ವಿವರಗಳನ್ನು ಇಲಾಖೆಗೂ ನೀಡಿದ್ದಕ್ಕಿಂತ ಹೆಚ್ಚು ಹಣವನ್ನು ಪೀಕಿಸುತ್ತಿದ್ದಾರೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಗಮನಕ್ಕೆ ತಂದರೆ ಲಿಖೀತರೂಪದಲ್ಲಿ ದೂರು ನೀಡುವಂತೆ ಹೇಳುತ್ತಾರೆ ಇದರಿಂದ ಊರ ಉಸಾಬರಿ ನಮಗ್ಯಾಕೆ ಎಂದು ಹಲವು ಪೋಷಕರು ಸುಮ್ಮನಾಗುತ್ತಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳು ತಮ್ಮ ನೋಟಿಸ್ ಬೋರ್ಡ್‌ನಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ಶುಲ್ಕದ ವಿವರಗಳನ್ನು ಹಾಕದಿರುವ ಸಂಸ್ಥೆಯ ವಿರುದ್ಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಪೋಷಕ ರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.
ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.