ಶ್ರೀ ಶನೇಶ್ವರ ಸ್ವಾಮಿಯ ಮಹಾ ರಥೋತ್ಸವ
Team Udayavani, Feb 19, 2021, 7:30 PM IST
ಬೇಲೂರು: ಶ್ರೀಶನೇಶ್ವರ ಸ್ವಾಮಿಯವರ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಶ್ರೀಶನೇಶ್ವರ ಸ್ವಾಮಿಯ ಮಹಾ ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ವಿಶೇಷ ಪೂಜೆಯೊಂದಿಗೆ ಮಧ್ಯಾಹ್ನ ಶ್ರೀಶನೇಶ್ವರಸ್ವಾಮಿಯ ಮಹಾ ರಥೋತ್ಸವಕ್ಕೆ ಶ್ರೀಶನೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಹಾಗೂ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಈ ವೇಳೆ ಸಾವಿರಾರು ಭಕ್ತ ರಥ ಎಳೆದು ಶನೇಶ್ವರಸ್ವಾಮಿಯ ಕೃಪೆಗೆ ಪಾತ್ರರಾದರು. ಸಂಪ್ರದಾಯ ಮುಂದುವರಿಕೆ: ಮಹಾ ರಥೋತ್ಸವದ ನಂತರ ಮಾತನಾಡಿದ ಶ್ರೀಶನೇ ಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಶ್ರೀಶನೇಶ್ವರಸ್ವಾಮಿಯ ಮಹಾ ರಥೋತ್ಸವವನ್ನು ನಮ್ಮ ಹಿರಿಯರು ಹಿಂದಿನಿಂದಲೂ ನೆರವೇರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ನಾವೂ ನೆರವೇರಿಸುತ್ತಿದ್ದೇವೆಂದರು.
ಮಹಾ ರಥೋತ್ಸವದಲ್ಲಿ ಸುಮಾರು 25 ಗ್ರಾಮಗಳು ಸೇರಿದಂತೆ ಬೇಲೂರು ಪಟ್ಟಣದ ಜನತೆ ಹೆಚ್ಚು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಧನ್ಯರಾದರು. ನಂತರ ಸಾವಿರಾರು ಭಕ್ತರಿಗೆ ಶ್ರೀಶನೇಶ್ವರಸ್ವಾಮಿ ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು. ರಥೋತ್ಸವದಲ್ಲಿ ಶ್ರೀಶನೇಶ್ವರಸ್ವಾಮಿ ದೇವಾಲಯ ಸಮಿತಿ ಕಾರ್ಯದರ್ಶಿ ಎಚ್. ಎಂ.ದಯಾನಂದ್, ನಿರ್ದೇಶಕರಾದ ಎಂ.ಎ.ನಾಗರಾಜ್, ಸಿ.ಎಸ್.ಪ್ರಕಾಶ್, ಧರ್ಮೇಗೌಡ, ಕೇಶವಮೂರ್ತಿ, ಬಿಟ್ರಾವಳ್ಳಿ ಉಮೇಶ್, ಶಾಂತೇಗೌಡ, ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.