ಅನುದಾನಿತ ಶಾಲಾ, ಕಾಲೇಜು ಸಿಬ್ಬಂದಿಗೂ ಪಿಂಚಣಿ ನೀಡಿ
Team Udayavani, Jun 26, 2019, 12:16 PM IST
ಹಾಸನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಒಕ್ಕೂಟದ ಗೌರವಾಧ್ಯಕ್ಷ ಚಂದ್ರಕಾಂತ್ ಪಡೇಸೂರು, ಅಧ್ಯಕ್ಷ ಪುಟ್ಟಲಿಂಗೇಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಾಸನ: ಪಿಂಚಣಿ ವಂಚಿತ ತಾರತಮ್ಯ ಮಾಡದೇ ಎಲ್ಲಾ ಅನುದಾನಿತ ಶಾಲಾ- ಕಾಲೇಜುಗಳ ಸಿಬ್ಬಂದಿಗೂ ಪಿಂಚಣಿ ನೀಡಬೇಕೆಂದು ರಾಜ್ಯ ಅನುದಾನಿ ಕಾಲೇಜುಗಳ ಒಕ್ಕೂಟದ ಗೌರವಾಧ್ಯಕ್ಷ ಚಂದ್ರಕಾಂತ್ ಪಡೇಸೂರು ಒತ್ತಾಯಿಸಿದರು.
ರಾಜ್ಯದಲ್ಲಿ 1987-88ನೇ ಸಾಲಿನಿಂದ 1994-95ನೇ ಸಾಲಿನವರೆಗೂ ಆರಂಭ ವಾದ ಶಾಲಾ-ಕಾಲೇಜುಗಳಿಗೆ ಅಂದಿನ ಸರ್ಕಾರ ಶಾಶ್ವತ ಅನುದಾನ ರಹಿತ ಎಂಬ ಕರಾರು ಹಾಕಿ ಅನುಮತಿ ನೀಡಿತ್ತು. ಆದರೆ ಹೋರಾಟ ಮಾಡಿದ ಪರಿಣಾಮ ಸರ್ಕಾರ ಎರಡು ನಿರ್ಣಯಗಳಲ್ಲಿ 1992ರ ವರೆಗೂ ಹಾಗೂ 1995ರ ವರೆಗೂ ಆರಂಭವಾದ ಶಾಲೆಗಳಿಗೆ ಅನು ದಾನ ನೀಡಿತ್ತು. ಆದರೆ ಸರ್ಕಾರದ ಆದೇಶದಲ್ಲಿ ಸಿಬ್ಬಂದಿಯವರು ಆದೇಶ ಪೂರ್ವದಲ್ಲಿ 18-20 ವರುಷಗಳು ದುಡಿದರು ಸೇವೆ ಪರಿಗಣಿತವಾಗಲಿಲ್ಲ. ಸೇವೆಯ ಹಿರಿತನ ಪರಿಗಣಿಸಿ ವೇತನ ನಿಗದಿಯಾಗಲಿಲ್ಲ. ಆದೇಶದಂತೆ ಪಿಂಚಣಿ ಸೌಲಭ್ಯ ಸಿಗಲಿಲ್ಲ. 10 ವರ್ಷ ಗಳ ಸೇವಾವಧಿ ಮುಗಿಸಿ ನಿವೃತ್ತರಾದ ವರು ಪಿಂಚಣಿ ಸಿಗದೇ ಜೀವನಕ್ಕೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
ಅನುದಾನಕ್ಕೆ ಒಳಪಟ್ಟ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಸರ್ಕಾರ ನಿವೃತ್ತಿ ವೇತನ ಮಂಜೂರು ಮಾಡಿ ಅವರ ಈ ಬದುಕಿಗೆ ದಾರಿ ಮಾಡಿಕೊಡ ಬೇಕು. ಅನುದಾನ ರಹಿತ ಅವಧಿಯ ವೇತನವನ್ನು ಯಾವ ನೌಕರರರೂ ಕೇಳುವುದಿಲ್ಲ . ಆದರೆ ಶಾಲೆಗಳಲ್ಲಿ ಸೇವೆ ಆರಂಭಿಸಿದ ಒಟ್ಟು ದಿ ಸೇವಾ ಅವಧಿ ಯನ್ನು ಪರಿಗಣಿಸಿ ನಿವೃತ್ತಿ ವೇತನ ನಿಗದಿಪಡಿಸಬೇಕು. ರಾಜ್ಯದಲ್ಲಿ ಅನು ದಾನಿತ ಶಾಲಾ, ಕಾಲೇಜುಗಳ ಸುಮಾರು 35 ಸಾವಿರ ಜನ ಶಿಕ್ಷಕರು ಸಿಬ್ಬಂದಿ ಪಿಂಚಣಿ ವಂಚಿತರಾಗಿದ್ದಯ, ಪ್ರತಿ ವರ್ಷ 250ರಿಂದ 300 ಜನ ಶಿಕ್ಷಕರು ಮಾತ್ರ ನಿವೃತ್ತರಾಗುತ್ತಿದ್ದಾರೆ. ಅವರಿಗೆ ಪಿಂಚಣಿ ನೀಡುವುದು ಸರ್ಕಾರಕ್ಕೆ ಹೊರೆಯಾಗದು ಎಂದು ಹೇಳಿದರು.
ರಾಜ್ಯ ಅನುದಾನಿತ ಶಾಲಾ ಕಾಲೇಜು ಗಳ ಒಕ್ಕೂಟದ ಅಧ್ಯಕ್ಷ ಪುಟ್ಟಲಿಂಗೇಗೌಡ, ರಾಜ್ಯ ಪ್ರತಿನಿಧಿ ನವೀನಕುಮಾರ್, ಉಪಾಧ್ಯಕ್ಷ ಮಂಜುನಾಥ್, ಅಶೋಕ್ ಮರ್ಗಿ, ಹರೀಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.