ರಾಚೇನಹಳ್ಳಿ ಕೆರೆ ಒಡಲಿಗೆ ಕೊಳಚೆ ನೀರು
Team Udayavani, Sep 27, 2021, 4:15 PM IST
ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಜೈನಕಾಶಿ ಎಂದೇ ಪ್ರಖ್ಯಾತವಾಗಿರುವ ತಾಲೂಕಿನ ಶ್ರವಣಬೆಳಗೊಳಕ್ಕೆ ಆಗಮಿಸುವ ರಾಜ್ಯ ಹೊರರಾಜ್ಯದ ಪ್ರವಾಸಿಗರು ಮೂಗು ಮುಚ್ಚಿಕೊಂಡು ಕ್ಷೇತದೊಳಗೆಪ್ರವೇಶ ಪಡೆಯುವ ಪರಿಸ್ಥಿತಿ ನಿರ್ಮಾಣವಾ ಗಿರುವುದು ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ.
ಕ್ಷೇತ್ರದಲ್ಲಿನ ವಸತಿ ಗೃಹಗಳ, ಲಾಡ್ಜ್, ಹೋಟೆಲ್‌ನ ಕೊಳಚೆ ನೀರು ಹಾಗೂ ಶ್ರವಣಬೆಳಗೊಳ, ರಾಚೇನಹಳ್ಳಿ ಗ್ರಾಮದಿಂದ ಸುಮಾರು 1,460 ಕುಟುಂಬಗಳುಬಳಕೆ ಮಾಡಿ ಅನುಪಯುಕ್ತ ನೀರನ್ನು ಚರಂಡಿ ಮೂಲಕ ಹರಿಸಲಾಗುತ್ತಿದೆ.
ಇದರೊಟ್ಟಿಗೆ ಯುಜಿಡಿ ನೀರನ್ನು ಇದೇ ಕೆರೆಗೆ ಹರಿಸಲಾಗುತ್ತಿದೆ, ಇದನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ರಾಚೇನಹಳ್ಳಿ ಕೆರೆಗೆ ಅತ್ಯಾಧುನಿಕತಂತ್ರಜ್ಞಾನದ ಒಳಚರಂಡಿ ಹಾಗೂ ಕೊಳಚೆನೀರು ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗಿದೆ.
2018ರ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಮೂರು ಕೋಟಿ ರೂ.ವೆಚ್ಚಮಾಡಿ ಜರ್ಮನ್ ತಂತ್ರಜ್ಞಾನದ ಹೈಟೆಕ್ ಯಂತ್ರ ಅಳವಡಿಸಿ ಶ್ರವಣಬೆಳಗೊಳದ ಒಳಚರಂಡಿ ಕೊಳಚೆನೀರು ಸಂಸ್ಕರಣೆಗೆ ಮುದಾಗಿದ್ದು, ಇದನ್ನು 10ವರ್ಷಗಳ ವರೆಗೆ ಎಂಬಿಬಿಆರ್ ಸಂಸ್ಥೆ ಉಚಿತವಾಗಿನಿರ್ವಹಣೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಕರಾರು ಮಾಡಿಕೊಂಡಿದೆ ಆದರೆ ಕೊಳಚೆ ನೀರು ಮಾತ್ರ ಸಂಸ್ಕರಣೆ ಆಗುತ್ತಿಲ್ಲ.
ವಿದ್ಯುತ್ ಕೊರತೆ: ಸಂಸ್ಕರಣ ಯಂತ್ರಗಳಿಗೆ ನಿರಂತರ ವಿದ್ಯುತ್ ಅಳವಡಿಸದೆ ಇರುವುದರಿಂದ ಕೊಳಚೆ ನೀರು ಸಂಪೂರ್ಣ ಸಂಸ್ಕರಣೆ ಆಗುತ್ತಿಲ್ಲ, 2018ರ ಮಹಾ ಮಸ್ತಕಾಭಿಷೇಕದ ಫೆಬ್ರವರಿ ಹಾಗೂ ಮಾರ್ಚ್‌ತಿಂಗಳಲ್ಲಿ ಮಾತ್ರ ದಿನದ 24 ತಾಸು ವಿದ್ಯುತ್ ನೀಡಿದ್ದರು. ನಂತರ ದಿನಕ್ಕೆ 10 ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ಕೊಳಚೆ ನೀರು ಸಂಸ್ಕರಣೆ ಆಗದೆ ರಾಚೇನಹಳ್ಳಿ ಕೆರೆಯ ಒಡಲು ಸೇರುತ್ತಿದೆ. ಹದಿನೈದು ಲಕ್ಷ ಲೀ. ಸಾಮರ್ಥ್ಯದ ಮೂರು ಯಂತ್ರವನ್ನು ಅಳವಡಿಸಿದ್ದು ನಿತ್ಯವೂ 5 ಲಕ್ಷ ಲೀ. ಕೊಳಚೆ ನೀರು ಸಂಸ್ಕರಣೆ ಮಾಡುವ ಸಾಮರ್ಥ್ಯಹೊಂದಿದೆ. ಒಳಚರಂಡಿಯ ತ್ಯಾಜ್ಯ ಶೇಖರಣೆಗೆ ಹತ್ತು ಅಡಿ ಆಳದ 7.5 ಮೀ. ಸುತ್ತಳತೆ ತ್ಯಾಜ್ಯಸಂಸ್ಕರಿಸುವ ಟ್ಯಾಂಕ್ ನಿರ್ಮಿಸಲಾಗಿದೆ. ಇದುಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಕೊಳಚೆ ನೀರು ಶುದ್ಧವಾಗಲಿದೆ ಇದರಿಂದ ದುರ್ವಾಸನೆ ಬರುವುದು ನಿಲ್ಲುವುದಲ್ಲದೆ ಸೊಳ್ಳೆ ಕಾಟವೂ ಕಡಿಮೆ ಆಗಲಿದೆ.
ದುರ್ವಾಸನೆ: ಹಾಸನ, ಶಿವಮೊಗ್ಗ, ಧರ್ಮಸ್ಥಳ, ಮಂಗಳೂರು, ಹುಬ್ಬಳಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆ ಹಾಗೂ ಉತ್ತರ ಭಾರತದಿಂದ ನಿತ್ಯವೂ ಆಗುಸುವ ಪ್ರವಾಸಿಗರು ಕ್ಷೇತ್ರದ ಒಳಗೆ ಪ್ರವೇಶ ಮಾಡುವ ಮೊದಲು ಕೊಳಚೆ ನೀರು ದರ್ಶನ ಮಾಡುವುದರೊಂದಿಗೆ ದುರ್ವಾಸನೆ ಸೇವಿಸುವಂತಾಗಿದೆ. ಇದರಿಂದ ಹಲವು ಮಂದಿ ಪ್ರವಾಸಿಗರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅದೆಷ್ಟೊ ಮಂದಿ ಪ್ರವಾಸಿಗರು ಹಿಡಿಶಾಪ ಹಾಕಿದರೂ, ಜಿಲ್ಲಾ ಅಥವಾ ತಾಲೂಕು ಆಡಳಿತ ಇತ್ತಗಮನ ಹರಿಸಿಲ್ಲ, ಗ್ರಾಪಂಗೆ ಸಾರ್ವಜನಿಕರು ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಂತರ ರೂ. ವೆಚ್ಚ ಮಾಡಿ ಸಂಸ್ಕರಣ ಘಟಕ ಸ್ಥಾಪನೆ ಮಾಡಿದ್ದರೂ, ವಾಸನೆ ಮುಕ್ತ ಗ್ರಾಮ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದರೆ ತಪ್ಪಾಗಲಾರದು.
ಕೆರೆ ಸಮೀಪ ಏನೇನಿದೆ…?:
ಕೆರೆಗೆ ಹೊಂದುಕೊಂಡಂತೆ ಗಂಗಮಾಳಮ್ಮ ಕೊಲ್ಲಪ್ಪನಲ್ಲಿ 16 ಕುಟುಂಬ ವಾಸವಾಗಿವೆ. ಪೊಲೀಸ್ ವಸತಿಗೃಹ, ಗಣ್ಯಾತಿ ಗಣ್ಯರ ವಸತಿ ಗೃಹ, ಅತಿಥಿ ಗೃಹ, ಬಾಹುಬಲಿ ಎಂಜನಿಯರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯ, ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯ ವಿದ್ಯಾರ್ಥಿ ನಿಲಯಗಳಿದ್ದು ನಿತ್ಯವೂ ದುರ್ವಾಸನೆ, ಸೊಳ್ಳೆ ಕಾಟಕ್ಕೆ ಹೈರಾಣಾಗುತ್ತಿದ್ದಾರೆ.ಜನಪ್ರತಿನಿಧಿಗಳೆ ಇತ್ತ ಗಮನಹರಿಸಿ: 2018ರ ಮಹಾ ಮಸ್ತಕಾಭಿಷೇಕ ಸಮಯದಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ಕೊಳಚೆ ನೀರು ಸಂಸ್ಕರಣಾ ಘಟಕ ಉದ್ಘಾಟನೆ ಮಾಡಲು ಸ್ಥಳಿಯ ಜನಪ್ರತಿನಿಧಿಗಳಾದ ಶಾಸಕ ಸಿ.ಎನ್.ಬಾಲಕೃಷ್ಣ, ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್.ಗಿರೀಶ್ ಆಸಕ್ತಿ ತೋರಬೇಕಿದೆ.
ಕೊಳಚೆ ನೀರು ಸಂಸ್ಕರಣಾ ಘಟಕವನ್ನು 3 ವರ್ಷದಿಂದ ಗ್ರಾಪಂಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಸ್ತಾಂತರ ಮಾಡಿಲ್ಲ, ಇನ್ನು ಶುಭಾ ಸೇಲ್ಸ್ ಕಂಪನಿಯವರು ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ. -ನಾಗೇಶ್, ಶ್ರವಣಬೆಳಗೊಳ ಗ್ರಾಪಂ ಪಿಡಿಒ
ಕೊಳಚೆ ನೀರು ಸಂಸ್ಕರಣೆಯಾದ ಮೇಲೆಉತ್ತಮ ನೀರು ಕೆರೆಗೆ ಬಿಡಬೇಕಿದೆ.ಆದರೆ, ವಿದ್ಯುತ್ ಸಮಸ್ಯೆಯಿಂದ ನಿತ್ಯವೂ ಸಂಸ್ಕರಣೆ ಮಾಡಲಾಗುತ್ತಿಲ್ಲ. ವಿದ್ಯುತ್ ಇದ್ದ ವೇಳೆ ಸಂಸ್ಕರಣೆ ಆಗುತ್ತದೆ. ವಿದ್ಯುತ್ ಇಲ್ಲದಿದ್ದರೆ ವೇಳೆ ಕೊಳಚೆ ನೀರು ಕೆರೆ ಸೇರುತ್ತಿದೆ.-ಪ್ರಕಾಶ್, ಘಟಕದ ಯಂತ್ರಗಾರ
ಜಿಲ್ಲಾಡಳಿತ ಸ್ಥಳೀಯ ರಾಜಕಾರಣಿ ನಿರಾಸಕ್ತಿಯಿಂದ ಶ್ರವಣಬೆಳಗೊಳ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸಾಂಕ್ರಾಮಿಕ ರೋಗಕ್ಕೆ ತತ್ತಾಗುತ್ತಿದ್ದಾರೆ.ಉತ್ತಮ ಪರಿಸರ ಕಲ್ಪಿಸಬೇಕು ಆದಷ್ಟು ಬೇಗ ಕೊಳಚೆ ನೀರು ಸಂಸ್ಕರಣೆ ಮಾಡಿ ಕೆರೆಗೆಹರಿಸುವ ಕೆಲಸವಾಗಲಿ. -ಜಿ.ಕೆ.ಶ್ರವಣ್, ಬಿಜೆಪಿ ಯುವಮೋರ್ವ ತಾಲೂಕು ಕಾರ್ಯದರ್ಶಿ.
-ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.