ನಿರಂತರ ಮಳೆಗೆ ನೆಲ ಕಚ್ಚಿದ ಮೆಣಸಿನ ಕಾಳು
Team Udayavani, Oct 19, 2020, 4:13 PM IST
ಸಕಲೇಶಪುರ: ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ, ಬಹುತೇಕ ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿ ಕೊಳೆಯಲಾರಂಭಿಸಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಕಡಿಮೆ ಆಗಬೇಕಿದ್ದ ಮಳೆ, ಇನ್ನೂ ಮುಂದುವರಿದಿದ್ದು, ಮೆಣಸು ಬೆಳೆಗಾರರನ್ನು ಆತಂಕಕ್ಕೆ ಇಡುಮಾಡಿದೆ.
ಬಳ್ಳಿಯಬುಡದಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗ ನಿಧಾನವಾಗಿ ಇಡೀ ಬಳ್ಳಿಯನ್ನೇ ಬಲಿಪಡೆಯುತ್ತಿದೆ.ಮಳೆಗಾಲದ ಆರಂಭದಲ್ಲಿ ಸಮೃದ್ಧವಾಗಿ ಬೆಳೆದುನಿಂತ ಮೆಣಸಿನ ಬಳ್ಳಿ, ನಿರೀಕ್ಷೆಗೂ ಮೀರಿ ಫಸಲು ಬರುವ ನಿರೀಕ್ಷೆ ರೈತರಲ್ಲಿತ್ತು. ಆದರೆ, ಮಳೆ ವಿಪರೀತವಾದ್ದರಿಂದ ಬಳ್ಳಿ ಕೊಳೆತು ಇಳುವರಿನೆಲಕಚ್ಚಿದೆ ಎನ್ನುತ್ತಾರೆ ಬೆಳೆಗಾರ ಪ್ರದೀಪ್.
ಬೆಳೆಗಾರರಿಗೆ ಚಿಂತೆ: ಜಂತು ಹುಳುವಿನಿಂದಸೊರಗು ರೋಗ ಬರುವುದಾದರೂ ಅಲ್ಲಿ ಗಿಡಗಳು ನಿಧಾನವಾಗಿ ಸೊರಗುತ್ತವೆ. ಈ ರೋಗಕ್ಕೆ ತುತ್ತಾದ ಬಳ್ಳಿಯಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಒಣಗಿ ಹೋಗುತ್ತವೆ. ರಭಸದ ಮಳೆಯಿಂದ ಸೊರಗು ರೋಗಕಾಣಿಸಿಕೊಂಡು ತೋಟಗಳಉದ್ದಕ್ಕೂ ವ್ಯಾಪಿಸುತ್ತಿರುವುದು ಬೆಳೆಗಾರರ ಚಿಂತೆಗೆಕಾರಣವಾಗಿದೆ.
ಬೆಲೆಯೂ ಏರುತ್ತಿಲ್ಲ: ಇತ್ತ ಮಳೆಯಿಂದ ಶೇ.25ರಷ್ಟು ಫಲಸು ನೆಲಕಚ್ಚಿರುವ ಬೆನ್ನಲ್ಲೇ ಇತ್ತ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರ ಕೇಜಿಗೆ 350 ರೂ.ಕ್ಕೆ ಇಳಿದಿದೆ. ಬೆಳೆ ಕಡಿಮೆ ಆದ್ರೂ, ಬೆಲೆಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ದಾರಿ ಕಾಣದೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ಪ್ರಸಕ್ತ ಸಾಲಿನಲ್ಲಿ ಕೂಲಿ, ರಸಗೊಬ್ಬರ,ಕೀಟನಾಶಕಗಳ ದರ ಏರಿಕೆ ಕಂಡಿರುವ ಕಾರಣ ಬೆಳೆಯ ವೆಚ್ಚ ಅಧಿಕವಾಗಿದೆ. ಆದರೆ, ಇಳುವರಿ ಇಳಿಮುಖಗೊಂಡಿದೆ.
ಮಳೆಯಿಂದ ಮೆಣಿಸಿನ ಬಳ್ಳಿ ಉಳಿಸಿಕೊಳ್ಳಲು ರೈತರಿಗೆ ಸಾಧ್ಯವಾ ಗುತ್ತಿಲ್ಲ. ಈಗ ಕೊಯ್ಲು ಮಾಡಿರುವ ಮೆಣಸು ಒಣಗಿಸಲಾಗದೇ, ಇತ್ತ ಬೆಲೆ ಕುಸಿತದಿಂದ ಮಾರಲೂ ಆಗದೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಔಷಧಿ ಸಿಂಪಡಿಸಿ ಮೆಣಸು ಬಳ್ಳಿ ರಕ್ಷಿಸಿ :
ಸಕಲೇಶಪುರ: ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಮೆಣಸು ಬಳ್ಳಿಯನ್ನು ರಕ್ಷಿಸಿಕೊಳ್ಳಲುಬೆಳೆಗಾರರು ಸೂಕ್ತ ಔಷಧೋಪಚಾರಮಾಡಬೇಕು ಎಂದು ಹಿರಿಯತೋಟಗಾರಿಕೆ ಇಲಾಖೆಸಹಾಯಕ ನಿರ್ದೇಶಕಿ ವಿಜಯಚಿತ್ರ ಹೇಳಿದ್ದಾರೆ.
ಈ ಕುರಿತುಪ್ರಕಟಣೆ ನೀಡಿರುವ ಅವರು, ಕಾಳುಮೆಣಸುಬೆಳೆಗಾರರು ಬಳ್ಳಿಗಳಿಗೆ 100 ಗ್ರಾಂಮೆಟಲಾಕ್ಷೆಲ್ ಮತ್ತು500 ಗ್ರಾಮ್ ಮ್ಯಾಂಕೋಜೆಬ್ ಶಿಲೀಂದ್ರ ನಾಶಕಗಳನ್ನು 200 ಲೀಟರ್‌ನೀರಿನಲ್ಲಿ ಕರಗಿಸಿ, ಪ್ರತಿ ಬಳ್ಳಿಗೆ 2 ರಿಂದ 3ಲೀಟರ್ ದ್ರಾವಣವನ್ನು ಬಳ್ಳಿಗಳ ಬುಡಕ್ಕೆ ಹಾಕಬೇಕು ಮತ್ತು ಬಳ್ಳಿಗಳಿಗೆ ಸಿಂಪಡಣೆ ಮಾಡಬೇಕು ಎಂದು ಹೇಳಿದ್ದಾರೆ.
ಮಳೆ ನೀರು ನಿಲ್ಲದಂತೆ ಬಸಿಗಾಲುವೆ ಗಳನ್ನು ಮಾಡುವುದು ಮತ್ತು ಪ್ರತಿ ಬಳ್ಳಿಗೆ50 ರಿಂದ 100 ಗ್ರಾಂ ಪೊಟಷ್ ರಸಗೊಬ್ಬರವನ್ನು ನೀಡಲು ತೋಟಗಾರಿಕೆ ಇಲಾಖೆ ಹಾಗೂ ಸಾಂಬಾರ ಮಂಡಳಿಯಿಂದ ಶಿಫಾರಸು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ರೈತರು ತಮ್ಮ ಕಾಳುಮೆಣಸು ತೋಟಗಳನ್ನು ಪುನಶ್ಚೇತನಗೊಳಿಸಲು 2020-21ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 620 ಎಕರೆ ಗುರಿ ನಿಗದಿಯಾಗಿದೆ. ಈ ಯೋಜನೆಯಡಿ ರೈತರಿಂದ ಸ್ವೀಕೃತವಾದ ಅರ್ಜಿಗಳಿಗೆ ಗರಿಷ್ಠ 1 ಎಕರೆಗೆ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸೂಡೋಮೋನಸ್ ಮತ್ತು ಲಘು ಪೋಷ ಕಾಂಶಗಳನ್ನು ನೀಡಲಾಗುತ್ತಿದೆ. 10 ಗ್ರಾಮ್ ಟ್ರೈಕೋಡರ್ಮಾ, ಸೂಡೋಮೋನಸ್ ಜೈವಿಕ ಗೊಬ್ಬರಗಳನ್ನು 1 ಬುಟ್ಟಿ ಕೊಟ್ಟಿಗೆ ಗೊಬ್ಬರಕ್ಕೆ ಮಿಶ್ರಣ ಮಾಡಿ ಪ್ರತಿ ಬಳ್ಳಿಗೆ ನೀಡುವುದರಿಂದ ಶಿಲೀಂಧ್ರ ರೋಗಹರಡುವುದನ್ನು ನಿಯಂತ್ರಿಸಬಹುದಾಗಿದೆ. ಈರೀತಿಕ್ರಮಕೈಗೊಳ್ಳುವಂತೆಕಾಳುಮಣಸು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.
ಮಳೆಯಿಂದ ತೋಟದಲ್ಲಿ ಶೀತ ಹೆಚ್ಚಾಗಿ ಮೆಣಸಿನ ಬಳ್ಳಿಯ ಬೇರು ಕೊಳೆಯುತ್ತದೆ. ಬುಡದಲ್ಲಿ ಫಂಗಲ್ಸ್ ಬಂದು ಮೆಣಸಿನ ಬಳ್ಳಿ ಸಾಯುತ್ತಿದೆ.ಎಲೆ,ಕಾಳು ಉದುರುತ್ತಿದೆ. ಎಷ್ಟೇಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗಾಗಲೇ ಶೇ.25 ಬೆಳೆ ನಾಶವಾಗಿದೆ. ಉಳಿದ ಬೆಳೆ ಉಳಿಸಿ ಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ವರ್ಷ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇಳುವರಿ ಕಡಿಮೆ ಆಗಿದೆ. ಹೀಗಾಗಿ ರೈತರ ಸ್ಥಿತಿ ಅತಂತ್ರವಾಗಿದೆ.ಕೂಡಲೇಸರ್ಕಾರ ಮೆಣಸು ಬೆಳೆಗಾರರ ನೆರವಿಗೆ ಬರಬೇಕಿದೆ. -ಪ್ರಜ್ವಲ್, ಕಾಫಿ, ಮೆಣಸು, ಬೆಳೆಗಾರ
ಮೆಣಸಿನ ಬಳ್ಳಿ ಪುನಶ್ಚೇತನಕ್ಕೆ ಬೆಳೆಗಾರರಿಗೆ ಇಲಾಖೆಯಿಂದ ಸಬ್ಸಿಡಿ ದರಲ್ಲಿ ಔಷಧಿಯನ್ನು ವಿತರಿಸಲಾಗುತ್ತದೆ. ಈಗಾಗಲೇ 1560 ರೈತರುಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ಅರ್ಜಿ ಬರುವ ಸಾಧ್ಯತೆ ಇದೆ. ಅದರಲ್ಲಿ ಅರ್ಹರನ್ನು ಆಯ್ಕೆ ಮಾಡಿ ಕಡಿಮೆ ದರದಲ್ಲಿ ಔಷಧಿ ನೀಡಲಾಗುವುದು. –ವಿಜಯಚಿತ್ರ, ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ.
– ಸುಧೀರ್, ಎಸ್.ಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.