ನಿಲ್ಲದ ಮಳೆ: ಹೊಲದಲ್ಲೇ ಉಳಿದ ಬೆಳೆ
16,716 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ
Team Udayavani, Oct 19, 2020, 4:19 PM IST
ಬೇಲೂರು: ಪ್ರಸಕ್ತ ಸಾಲಿನಲ್ಲಿಅಕ್ಟೋಬರ್‌ವರೆಗೂಮಳೆ ನಿರಂತರವಾಗಿ ಸುರಿದ ಪರಿಣಾಮಕಟಾವಿಗೆ ಬಂದಿದ್ದ ಮುಸುಕಿನ ಜೋಳ ಬೆಳೆ ನೆಲಕಚ್ಚಿದೆ.ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟ ಸಿಲುಕಿರುವ ಈಸಂದರ್ಭದಲ್ಲಿ ಕೈಬಂದ ಬೆಳೆ ಅತಿವೃಷ್ಟಿಗೆ ಸಿಲುಕಿ ಹೊಲದಲ್ಲೇಕೊಳೆಯುತ್ತಿದೆ.
ಕೃಷಿ ಇಲಾಖೆ ನೆಪ ಮಾತ್ರಕ್ಕೆ ಪರಿಶೀಲನೆ ನಡೆಸಿ ಕೈಚೆಲ್ಲಿ ಕುಳಿತಿದೆ. ಇನ್ನು ರೈತರ ಕಷ್ಟಕ್ಕೆ ಇಲ್ಲಿಯವರೆಗೂ ಯಾವ ಜನಪ್ರತಿನಿಧಿಯೂಸ್ಪಂದಿಸುತ್ತಿಲ್ಲ, ಇತ್ತ ತಿರುಗಿಯೂ ನೋಡುತ್ತಿಲ್ಲ.ತಾಲೂಕಿನಲ್ಲಿ ಈ ಹಿಂದೆ ಬೆಳೆಯುತ್ತಿದ್ದಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ತಗುಲಿದ್ದರಿಂದ ಬಹುತೇಕ ರೈತರು ಮುಸುಕಿನ ಜೋಳ ಬೆಳೆಯತ್ತ ಮುಖ ಮಾಡಿದರು. ಈಗಇಲ್ಲಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಉಳುಮೆ, ರಸಗೊಬ್ಬರ,ಕೀಟನಾಶಕ, ಕಾರ್ಮಿಕರ ಕೂಲಿ ಹಣ ಹೆಚ್ಚಿರುವುದರಿಂದ ರೈತರು ಬೇಸಾಯವೇ ಬೇಡಪ್ಪ ಎನ್ನುವ ಸ್ಥಿತಿಗೆ ತಲುಪಿದ್ದಾರೆ.
2020-21ನೇ ಸಾಲಿನ ಮುಂಗಾರು ಹಂಗಾಮಿ ನಲ್ಲಿ ತಾಲೂಕಿನಲ್ಲಿ 14,370 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆಹೊಂದಿತ್ತು.ಆದರೆ, ತಾಲೂಕಿನಲ್ಲಿಉತ್ತಮ ಮಳೆ ಆಗಿದ್ದರಿಂದ ರೈತರು16,716ಹೆಕ್ಟೇರ್‌ಪ್ರದೇಶ ದಲ್ಲಿ ಬಿತ್ತನೆ ಮಾಡಿದ್ದರಿಂದ ಶೇ.116 ಹೆಚ್ಚಾಗಿದೆ.
ನಿಲ್ಲದ ಮಳೆ: ತಾಲೂಕಿನ ಮಲೆನಾಡು, ಅರೆ ಮಲೆನಾಡು ಭಾಗದಲ್ಲಿ ಸೆಪ್ಟೆಂಬರ್ ವೇಳೆಗೆ ಮಳೆ ಪ್ರಮಾಣ ಇಳಿಮುಖವಾಗುತ್ತದೆ. ಆದರೆ, ಈಬಾರಿ ಅಕ್ಟೋಬರ್ ಕಳೆಯುತ್ತಾ ಬಂದರೂ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆಗಾಗ ಮಳೆ, ಮೋಡ ಮುಸುಕಿದ ವಾತಾವರಣ ಇರುವ ಕಾರಣ, ಜೋಳ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿ ತೇವಾಂಶ ಹೆಚ್ಚಿದ್ದು, ಕಾಲಿಡಲುಆಗದಂತ ಪರಿಸ್ಥಿತಿ ಇದೆ. ಇದರಿಂದ ಬಹುತೇಕ ರೈತರು ಬೆಳೆ ಕಟಾವು ಮಾಡದಲಾಗದೇ ಜಮೀನಿನಲ್ಲೇ ಬಿಟ್ಟಿದ್ದಾರೆ.
ಸರ್ಕಾರದ ಆದೇಶದಂತೆ ಕೃಷಿ ಇಲಾಖೆಯು ಕಂದಾಯ ಅಧಿಕಾರಿಗಳ ಜೊತೆಯಲ್ಲಿ ಬೆಳೆಪರಿಶೀಲನೆ ನಡೆಸಿ, 635 ಹೆಕ್ಟೇರ್ ಪ್ರದೇಶದಲ್ಲಿಶೇ.33 ಮುಸುಕಿನ ಜೋಳ ನಷ್ಟವಾಗಿದೆ ಎಂದುವರದಿ ನೀಡಿದೆ. ಕೇವಲ 43 ಲಕ್ಷ ರೂ. ಪರಿಹಾರಕ್ಕೆ ಪ್ರಸ್ತಾಪನೆ ಸಲ್ಲಿಸಿದೆ.ಆದರೆ,ವಾಸ್ತಾವ ಪರಿಸ್ಥಿತಿಯೇ ಬೇರೆ ಆಗಿದೆ.
ಇತ್ತೀಚಿಗೆ ಬಿದ್ದ ಧಾರಾಕಾರ ಮಳೆಯಿಂದ ಕಟಾವಿಗೆ ಬಂದ ಜೋಳ ಸಂಪೂರ್ಣ ನೆಲಕಚ್ಚಿದೆ. ಮೊದಲೇ ಶಿಲೀಂಧ್ರಬಾಧೆಯಿಂದ ಹಾಳಾಗಿದ್ದ ಜೋಳ, ಮಳೆಗೆ ಹಾಳಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರೀ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕೃಷಿಕರು ದಿಕ್ಕುಕಾಣದ ಸ್ಥಿತಿಯಲ್ಲಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ರೈತರುಅಂಗಮಾರಿ ಬಾಧೆಯಿಂದ ಆಲೂಗಡ್ಡೆ ಬಿಟ್ಟು ಮುಸುಕಿನಜೋಳದ ಕಡೆ ಮನಸ್ಸು ಮಾಡಿದ್ದಾರೆ.ಆದರೆ,ಜೋಳಬೆಳೆಯಲುಹೆಚ್ಚುವೆಚ್ಚವಾಗುತ್ತದೆ. ಇದರ ಜೊತೆಗೆ ಮಳೆಯು ಸಂಕಷ್ಟಕ್ಕೆ ಸಿಲುಕಿಸಿದೆ. ಮಲೆನಾಡು, ಅರೆಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಗೆ ಬೆಳೆ ನೀರಿನಲ್ಲಿ ಮುಳುಗಿದೆ. ಕೃಷಿ ಇಲಾಖೆ ಅಧಿಕಾರಿಗಳು ನೆಪ ಮಾತ್ರಕ್ಕೆ ಬೆಳೆ ಸಮೀಕ್ಷೆ ನಡೆಸಿ,ಕೇವಲ 635ಹೆಕ್ಟೇರ್ ಪ್ರದೇಶದಲ್ಲಿ ಕೇವಲ ಶೇ.33 ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ದೂರಿದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮುಸುಕಿನ ಜೋಳದ ಬೆಳೆ ತಮ್ಮನ್ನು ಕೈಹಿಡಿಯುತ್ತದೆ ಎಂದು ನಂಬಿದ್ದ ರೈತರಿಗೆ ಈಗ ದಾರಿ ಕಾಣದಂತಾಗಿದೆ.
ಕಂದಾಯ ಮತ್ತು ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ನಿಜಕ್ಕೂ ಅವೈಜ್ಞಾನಿಕವಾಗಿದೆ. ತಕ್ಷಣವೇ ಸೂಕ್ತ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿನೀಡಬೇಕು. ಶೀಘ್ರ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು, ಇಲ್ಲವಾದರೆ ಹೋರಾಟ ಅನಿವಾರ್ಯ. –ಭೋಗಮಲ್ಲೇಶ್,ಅಧ್ಯಕ್ಷರು, ತಾಲೂಕು ರೈತ ಸಂಘ.
ತಾಲೂಕಿನಲ್ಲಿ ಶೇ.33ಕ್ಕಿಂತ ಹೆಚ್ಚು ಮುಸುಕಿನ ಜೋಳದ ಬೆಳೆ ಹಾನಿಯಾಗಿದೆ. ಈಗಾಗಲೇ 684 ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, 4 ಸಾವಿರ ರೈತರಿಗೆ ಪರಿಹಾರ ಒದಗಿಸಲು ಇಲಾಖೆಯ ವೆಬ್ ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದೇವೆ. ಪ್ರತಿ ಹೆಕ್ಟೇರ್‌ಗೆ 6800 ರೂ. ಪರಿಹಾರ ಕೊಡಲಾಗುತ್ತದೆ. ತಾಲೂಕಿನಕಸಬಾ, ಹಳೇಬೀಡು,ಹಗರೆ, ಮಾದಿಹಳ್ಳಿ, ಬಿಕ್ಕೋಡು ಹೋಬಳಿಯಲ್ಲಿ 200ರಿಂದ 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಶೀಘ್ರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. – ಪರಮೇಶ್, ಸಹಾಯಕ ಕೃಷಿ ನಿರ್ದೇಶಕ. ಬೇಲೂರು.
-ಡಿ.ಬಿ.ಮೋಹನ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.