ವಿನಾಯಕ ಚತುರ್ಥಿಗೆ ವಿಘ್ನವಾದ ವರುಣ!


Team Udayavani, Jul 25, 2023, 4:24 PM IST

ವಿನಾಯಕ ಚತುರ್ಥಿಗೆ ವಿಘ್ನವಾದ ವರುಣ!

ಚನ್ನರಾಯಪಟ್ಟಣ: ಪೂರ್ವ ಮುಂಗಾರಿನಲ್ಲಿ ವರಣ ಕೈಕೊಟ್ಟು ಆಷಾಢ ಮುಗಿದ ಮೇಲೆ ಸೋನೆ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ಆಗಿರುವ ಏರುಪೇರಿನಿಂದ ಗಣೇಶೋತ್ಸವ ಆಚರಣೆಗೂ ವಿಘ್ನ ಉಂಟಾಗುವ ಲಕ್ಷಣಗಳು ಗೋಚರವಾಗುತ್ತಿವೆ.

ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿರುವುದರಿಂದ ಗಣೇಶೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಮಾಡುವ ಬದಲಾಗಿ ಸರಳವಾಗಿ ಆಚರಣೆ ಮಾಡಲು ಈಗಾಗಲೆ ತಾಲೂಕಿನ ಹಲವು ಸಂಘ ಸಂಸ್ಥೆಗಳು ಲೆಕ್ಕಾಚಾರ ಮಾಡುತ್ತಿವೆ. ಇನ್ನು ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಬಗ್ಗೆಯೂ ಕೆಲ ದಾನಿಗಳು ಆಲೋಚನೆ ಮಾಡಿದ್ದು ಅದ್ಧೂರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ಸಂತ್ರಸ್ತರ ಬಾಳಿಗೆ ಬೆಳಕಾಗೋಣ: ಅರ್ಧ ದೇಶ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಗೆ ಮುಳುಗಿವೆ. ಇಂತಹ ವೇಳೆಯಲ್ಲಿ ನಾವು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ, ಸಾಂಪ್ರದಾ ಯಿಕವಾಗಿ ಚತು ರ್ಥಿ ಹಬ್ಬ ಆಚರಣೆ ಮಾಡೋಣ, ಸಂಭ್ರಮದಿಂದ ಹಬ್ಬ ಕ್ಕಾಗಿ ವೆಚ್ಚ ಮಾಡುವುದನ್ನು ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಸಂತ್ರಸ್ತರ ಬಾಳಿಗೆ ಬೆಳಕಾಗುವುದು ಉತ್ತಮ ಎಂಬುದನ್ನು ಅರಿತಿರುವ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಈಗಾಗಲೇ ನೆರೆ ಸಂತ್ರಸ್ತರ ಬಗ್ಗೆ ಕೊಂಚ ಆಲೋಚನೆ ಮಾಡುತ್ತಿದ್ದಾರೆ.

ತಿಂಗಳಿನಿಂದ ಬಿಸಿಲಿಲ್ಲ: ಕಳೆದ ತಿಂಗಳಿನಿಂದ ಸೂರ್ಯ ಮರೆಯಾಗಿದ್ದು ಗಣಪತಿ ಮೂರ್ತಿ ತಯಾರಿಕರಿಗೆ ಆಂತಕ ಸೃಷ್ಟಿಯಾಗಿದೆ. ಅರೆ ಮಲೆನಾಡಿನ ವಾತಾವರಣ ಸಂಪೂರ್ಣವಾಗಿ ಮಲೆನಾಡಿನ ವಾತಾವರಣದಂ ತಾ ಗಿದೆ. ಇದರಿಂದಾಗಿ ಜೇಡಿ ಮಣ್ಣಿನಿಂದ ತಯಾ ರಾಗಿ ರುವ ಮೂರ್ತಿಗಳು ಒಣಗುತ್ತಿಲ್ಲ. ಶೀಥದ ವಾತಾ ವರಣದಲ್ಲಿ ಬೀಸುತ್ತಿರುವ ತಣ್ಣನೆ ಗಾಳಿಯಿಂದ ಮಣ್ಣಿನ ಗಣಪನ ಮೂರ್ತಿ ಬಿರುಕು ಬಿಡುತ್ತಿವೆ. ಗಾಳಿಯಿಂದ ರಕ್ಷಣೆ ಪಡೆಯಲು ಮೂರ್ತಿಗೆ ಹೊದಿಕೆ ಹಾಕಿ ಒಣಗಿ ಸುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಹಣಕೊಟ್ಟು ಮಣ್ಣು ತರಬೇಕಿದೆ: ಕಳೆದ ಐದು ವರ್ಷದಿಂದ ಜೇಡಿ ಮಣ್ಣಿಗೂ ಹಣ ಕೊಡಬೇಕಿದೆ. 100 ಕೆ.ಜಿ. ಮಣ್ಣಿಗೆ ನಾಲ್ಕರಿಂದ ಐದು ಸಾವಿರ ನೀಡಬೇಕಿದೆ. ಈ ಹಿಂದೆ ಜೇಡಿ ಮಣ್ಣುಗಳು ದೊರೆ ಯುತ್ತಿದ್ದ ಗ್ರಾಮದ ಕೆರೆಗಳಿಗೆ ತೆರಳಿ ತರಲಾಗುತ್ತಿತ್ತು. ಇತ್ತೀಚಿನ ದಿವಸಗಳಲ್ಲಿ ಗ್ರಾಮಸ್ಥರು ಅದಕ್ಕೆ ಅವಕಾಶ ನೀಡದೆ ಇರುವುದರಿಂದ ಹಣ ಕೊಟ್ಟು ಮಣ್ಣು ತರಬೇಕಿದೆ ಎಂದು ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದ ಹರೀಶ ದುಬಾರಿ ಬೆಲೆಗೆ ಕಂಗಾಲಾಗಿದ್ದಾರೆ.

ಊರಿಗೊಂದು ಗಣಪ: ಗಣೇಶ ಮೂರ್ತಿ ಕೊರತೆ ಕಾಡುತ್ತಿರುವುದು ಹಾಗೂ ದೇಶದಲ್ಲಿ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ ಇರುವುದರಿಂದ ಊರಿಗೆ ಒಂದೇ ಗಣಪ ಮೂರ್ತಿ ಸ್ಥಾಪನೆ ಬಗ್ಗೆ ಚಿಂತನೆ ಮಾಡ ಬೇಕಾಗಿದೆ. ಗಲ್ಲಿ ಗಲ್ಲಿಯಲ್ಲೂ ಸ್ಥಾಪನೆ ಗೊಳ್ಳು ತ್ತಿರುವ ಮೂರ್ತಿ ಸಂಖ್ಯೆ ತಗ್ಗಿಸಿ ಒಂದೇ ಕಡೆ ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸುವುದರಿಂದ ಸಮಾ ಜವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯ ವಾಗುತ್ತದೆ. ಜೊತೆಗೆ ವ್ಯವಸ್ಥಿತ ಆಡಳಿತ ನಿರ್ವಹಣೆಗೂ ಅನುಕೂಲ ಎನ್ನುವ ಮಾತು ಗಳು ತಾಲೂಕಿನ ಕೆಲ ಗ್ರಾಮದಲ್ಲಿ ಕೇಳಿ ಬರುತ್ತಿವೆ.

ಪರಿಸರ ಸ್ನೇಹಿಗೆ ಮಾರು ಹೋಗುತ್ತಿದ್ದಾರೆ: ರಾಸಯನಿಕ ಬಣ್ಣ ಲೇಪಿತ ಮೂರ್ತಿ ಹಾಗೂ ನಿಷೇಧಿತ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎಂಬ ಆಲೋಚನೆ ಹೊಂದಿರುವ ಭಕ್ತರು ಈಗಾ ಗಲೇ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿ ಷ್ಠಾಪನೆಗೆ ಮುಂದಾಗಿದ್ದು ಮೂರ್ತಿ ತಯಾರಿಕೆ ಮಾಡು ವವರಿ ಗೆ ಮುಂಗಡ ಹಣ ನೀಡಿ ಪರಿಸರ ಸ್ನೇಹಿ ಹಬ್ಬ ಆಚ ರಣೆಗೆ ಮುಂದಾಗುತ್ತಿರುವುದು ಶ್ಲಾಘನೀಯ ಸಂಗತಿ.

ಮಳೆಯಿಂದ ಮೂರ್ತಿ ಕೊರತೆ ಸಾಧ್ಯತೆ: ಸೋನೆ ಮಳೆಯಿಂದ ಹಲವು ರಾಜ್ಯದ ಕೆಲ ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿವೆ. ಇನ್ನು ಉತ್ತರ ಭಾರತದಲ್ಲಿ ಮಹಾಮಳೆಗೆ ಸಾಕಷ್ಟು ರಾಜ್ಯಗಳು ಸಂಪೂರ್ಣ ಜಲಾವೃತ್ತ ಗೊಂಡಿರು ವುದರಿಂದ ವಿಘ್ನೇಶ್ವರ ಮೂರ್ತಿ ಹೆಚ್ಚು ತಯಾರಿಕೆ ಆಗಿಲ್ಲ. ಇದರಿಂದಾಗಿ ಮಹಾ ನಗರದಲ್ಲಿ ಜೇಡಿ ಮಣ್ಣಿನ ಗಣಪ ಮೂರ್ತಿ ಕೊರತೆ ಆಗುವ ಲಕ್ಷಣಗಳು ಗೋಚರಿಸುತ್ತಿದ್ದು ಅನೇಕ ಮಂದಿ ಅನ್ಯ ಮಾರ್ಗವಿಲ್ಲದೆ ಗಣೇಶ ಭಾವ ಚಿತ್ರದ ಮೊರೆ ಹೋಗಬೇಕಾಗಲಿದೆ.

ನೆರವಿನ ಹಸ್ತ ನೀಡಿ ಗಣೇಶ್‌ ಹಬ್ಬ ಸಂಭ್ರಮಿಸಿ: ಪುರಸಭೆ ವ್ಯಾಪ್ತಿ 23 ವಾರ್ಡ್‌ನಲ್ಲಿ ಇರುವ ನೂರಾರು ರಸ್ತೆಗಳಲ್ಲಿ ಪ್ರತಿ ರಸ್ತೆ, ಕೇರಿ, ಬೀದಿ ಹೀಗೆ ಸಾವಿರಾರು ವಿನಾ ಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡ ಲಾಗುತ್ತಿದೆ. ಆದರೆ, ಈ ಸಾಲಿನಲ್ಲಿ ಇದನ್ನು ತ್ಯಜಿಸಿ ಪ್ರತಿ ವಾರ್ಡ್‌ ಗೆ ಒಂದೇ ಮೂರ್ತಿ ಸ್ಥಾಪನೆ ಮಾಡುವ ಕಡೆ ಸಾರ್ವಜನಿಕರು ಚಿಂತನೆ ಮಾಡಬೇಕಿದೆ. ಗಣೇಶ ಮೂರ್ತಿ ಸ್ಥಾಪನೆಗೆ ವೆಚ್ಚ ಮಾಡುವ ಹಣವನ್ನು ಉತ್ತರ ಭಾರತದಲ್ಲಿನ ನೆರೆ ಸಂತ್ರಸ್ತ ಗ್ರಾಮಗಳಿಗೆ ಇಲ್ಲವೆ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಆಲೋಚನೆ ಮಾಡಬೇಕಿದೆ.

ಪ್ರಸಕ್ತ ವರ್ಷ ಹೆಚ್ಚು ಮಂದಿ ಗಣಪ ಮೂರ್ತಿ ಬೇಕೆಂದು ಮುಂಗಡವಾಗಿ ಮೂರ್ತಿಯನ್ನು ಕಾಯ್ದಿರಿಸಿಲ್ಲ. ಹಾಗಾಗಿ ಕಡಿಮೆ ಮೂರ್ತಿಯನ್ನು ತಯಾರು ಮಾಡಿದ್ದೇವೆ. ಕಳೆದ ಒಂದು ತಿಂಗಳಿನಿಂದ ವಾತಾವರಣ ಶೀಥವಾಗಿದೆ ಮೂರ್ತಿ ತಯಾರಿಕೆಗೆ ಸೂಕ್ತ ವಾತಾವರಣವಿಲ್ಲ. ●ವಸಂತ, ಜೇಡಿ ಮಣ್ಣಿನ ಗಣಪ ಮೂರ್ತಿ ತಯಾರಕ.

-ಶಾಮಸುಂದರ್‌ ಕೆ ಅಣ್ಣೇನಹಳ್ಳಿ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.