ಮಹಾ ಮಳೆಯಿಂದ ವಿನಾಯಕ ಚತುರ್ಥಿಗೆ ವಿಘ್ನ


Team Udayavani, Aug 27, 2019, 4:55 PM IST

hasan-tdy-1

ಚನ್ನರಾಯಪಟ್ಟಣದಲ್ಲಿ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಲಾವಿದ ಹರೀಶ್‌.

ಚನ್ನರಾಯಪಟ್ಟಣ: ಪೂರ್ವ ಮುಂಗಾರಿನಲ್ಲಿ ವರುಣ ಕೈಕೊಟ್ಟು ಆಷಾಢ ಮುಗಿದ ಮೇಲೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿರುವುದು ಹಾಗೂ ವಾತಾ ವರಣದಲ್ಲಿ ಆಗಿರುವ ಏರು-ಪೇರಿನಿಂದ ಗಣೇಶೋತ್ಸವ ಆಚರಣೆಗೂ ವಿಘ್ನ ಉಂಟಾಗುವ ಲಕ್ಷಣಗಳು ಗೋಚರವಾಗುತ್ತಿವೆ.

ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹಾಗೂ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾ ಗಿರುವುದರಿಂದ ಗಣೇಶೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಮಾಡುವ ಬದಲಾಗಿ ಸರಳವಾಗಿ ಆಚರಣೆ ಮಾಡಲು ಈಗಾಗಲೇ ತಾಲೂಕಿನ ಹಲವು ಸಂಘ ಸಂಸ್ಥೆಗಳು ಲೆಕ್ಕಾಚಾರ ಮಾಡುತ್ತಿವೆ.

ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುತ್ತಿರುವ ದಾನಿಗಳು ಅದ್ದೂರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎಂದು ಗಣೇಶೋತ್ಸವ ಸಂಘಟಕರಿಗೆ ತಿಳಿ ಹೇಳುತ್ತಿದ್ದಾರೆ.

ಅರ್ಧರಾಜ್ಯ ಮಹಾ ಮಳೆಗೆ ಮುಳುಗಿದೆ ಇಂತಹ ವೇಳೆಯಲ್ಲಿ ನಾವು ಸಂಭ್ರಮಿಸುವುದಲ್ಲಿ ಅರ್ಥವಿಲ್ಲ ಸಾಂಪ್ರದಾಯಿಕವಾಗಿ ಚತುರ್ಥಿ ಹಬ್ಬ ಆಚರಣೆ ಮಾಡೋಣ. ಹಬ್ಬಕ್ಕಾಗಿ ವೆಚ್ಚ ಮಾಡುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಸಂತ್ರಸ್ತರ ಬಾಳಿಗೆ ಬೆಳಕಾಗುವುದು ಉತ್ತಮ ಎಂಬುದನ್ನು ಅರಿತಿರುವ ಹಲವು ಸಂಘ ಸಂಸ್ಥೆಗಳು ಈಗಾಗಲೇ ನೆರೆ ಸಂತ್ರಸ್ತರಿಗಾಗಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಧನ, ಉಪಯುಕ್ತ ಸಾಮಗ್ರಿಗಳ ಸಹಾಯ ಮಾಡುತ್ತಿವೆ.

ಎರಡ್ಮೂರು ತಿಂಗಳಿನಿಂದ ಬಿಸಿಲಿಲ್ಲ: ಕಳೆದ ಎರಡ್ಮೂರು ತಿಂಗಳಿನಿಂದ ಸೂರ್ಯ ಮರೆಯಾಗಿದ್ದು ಗಣಪತಿ ಮೂರ್ತಿ ತಯಾರಿಕರಿಗೆ ಆಂತಕ ಸೃಷ್ಟಿ ಯಾಗಿದೆ. ಅರೆ ಮಲೆನಾಡಿನ ವಾತಾವರಣ ಸಂಪೂರ್ಣವಾಗಿ ಮಲೆನಾಡಿನ ವಾತಾವರಣ ದಂತಾಗಿದೆ ಇದರಿಂದಾಗಿ ಜೇಡಿ ಮಣ್ಣಿನಿಂದ ತಯಾ ರಾಗಿರುವ ಮೂರ್ತಿಗಳು ಒಣಗುತ್ತಿಲ್ಲ. ಶೀತದ ವಾತಾವರಣದಲ್ಲಿ ಬೀಸುತ್ತಿರುವ ತಣ್ಣನೆ ಗಾಳಿಯಿಂದ ಮಣ್ಣಿನ ಗಣಪ ಮೂರ್ತಿ ಬಿರುಕು ಬಿಡುತ್ತಿವೆ. ಗಾಳಿ ಯಿಂದ ರಕ್ಷಣೆ ಪಡೆಯಲು ಮೂರ್ತಿಗೆ ಹೊದಿಕೆ ಹಾಕಿ ಒಣಗಿಸುತ್ತಿದ್ದೇವೆ. ತಿಂಗಳು ಕಳೆದರೂ ಜೇಡಿ ಮಣ್ಣಿನ ಮೂರ್ತಿಗಳು ಒಣಗುತ್ತಿಲ್ಲ ಎಂದು ಮೂರ್ತಿ ತಯಾರಕರು ಉದಯವಾಣಿಗೆ ತಿಳಿಸಿದ್ದಾರೆ.

ಹಣಕೊಟ್ಟು ಮಣ್ಣು ತರಬೇಕಿದೆ: ಕಳೆದ ಮೂರು ವರ್ಷದಿಂದ ಜೇಡಿ ಮಣ್ಣಿಗೂ ಹಣ ಕೊಡಬೇಕಿದೆ. 100 ಕೇಜಿ ಮಣ್ಣಿಗೆ ಮೂರರಿಂದ ನಾಲ್ಕು ಸಾವಿರ ನೀಡಬೇಕಿದೆ. ಈ ಹಿಂದೆ ಗ್ರಾಮದ ಕೆರೆಗಳಿಗೆ ತೆರಳಿ ಜೇಡಿ ಮಣ್ಣು ತರಲಾಗುತ್ತಿತ್ತು. ಇತ್ತೀಚಿನ ದಿವಸಗಳಲ್ಲಿ ಗ್ರಾಮಸ್ಥರು ಅದಕ್ಕೆ ಅವಕಾಶ ನೀಡದೇ ಇರುವುದ ರಿಂದ ಹಣ ಕೊಟ್ಟು ಮಣ್ಣು ತರಬೇಕಿದೆ ಎಂದು ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದ ಹರೀಶ ಮಾಹಿತಿ ನೀಡಿದರು.

ಗಣೇಶೋತ್ಸವದ ಬದಲು ನೆರವು ನೀಡಿ: ಪುರಸಭೆ ವ್ಯಾಪ್ತಿ 23 ವಾರ್ಡ್‌ಗಳಲ್ಲಿ ಇರುವ ನೂರಾರು ರಸ್ತೆಗಳಲ್ಲಿ ಪ್ರತಿ ರಸ್ತೆ, ಕೇರಿ, ಬೀದಿ ಹೀಗೆ ಸಾವಿರಾರು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡ ಲಾಗುತ್ತಿದೆ. ಆದರೆ ಈ ಸಾಲಿನಲ್ಲಿ ಇದನ್ನು ತ್ಯಜಿಸಿ ಪ್ರತಿ ವಾರ್ಡಿಗೆ ಒಂದೇ ಮೂರ್ತಿಯನ್ನು ಸ್ಥಾಪನೆ ಮಾಡುವ ಕಡೆ ಸಾರ್ವಜನಿಕರು ಚಿಂತನೆ ಮಾಡ ಬೇಕಿದೆ. ಗಣಪತಿ ಮೂರ್ತಿ ಸ್ಥಾಪನೆಗೆ ವೆಚ್ಚ ಮಾಡುವ ಹಣವನ್ನು ನೆರೆ ಸಂತ್ರಸ್ತ ಗ್ರಾಮಗಳಿಗೆ ಇಲ್ಲವೇ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಆಲೋಚನೆ ಮಾಡಬೇಕಿದೆ.

ಊರಿಗೊಂದು ಗಣಪ: ಗಣೇಶ ಮೂರ್ತಿ ಕೊರತೆ ಕಾಡುತ್ತಿರುವುದು ಹಾಗೂ ರಾಜದಲ್ಲಿ ಸಾವಿರಾರು ಕುಟುಂಬಗಳೂ ಸಂಕಷ್ಟದಲ್ಲಿ ಇರುವುದರಿಂದ ಊರಿಗೆ ಒಂದೇ ಗಣಪ ಮೂರ್ತಿ ಸ್ಥಾಪನೆ ಬಗ್ಗೆ ಚಿಂತನೆ ಆರಂಭಗೊಂಡಿವೆ. ಗಲ್ಲಿ ಗಲ್ಲಿಯಲ್ಲೂ ಸ್ಥಾಪನೆ ಗೊಳ್ಳುತ್ತಿರುವ ಮೂರ್ತಿ ಸಂಖ್ಯೆ ತಗ್ಗಿಸಿ ಒಂದೇ ಕಡೆ ಎಲ್ಲರೂ ಕೂಡಿ ಹಬ್ಬ ಆಚರಿಸುವುದರಿಂದ ಸಮಾಜ ವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ವ್ಯವಸ್ಥಿತ ಆಡಳಿತ ನಿರ್ವಹಣೆಗೂ ಅನುಕೂಲ ಎನ್ನುವ ಮಾತುಗಳು ತಾಲೂಕಿನ ಕೆಲ ಗ್ರಾಮದಲ್ಲಿ ಕೇಳಿ ಬರುತ್ತಿವೆ.

ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ: ರಾಸಾಯನಿಕ ಬಣ್ಣ ಲೇಪಿತ ಮೂರ್ತಿ ಹಾಗೂ ನಿಷೇಧಿತ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ಮೂರ್ತಿಯನ್ನು ಪ್ರತಿ ಷ್ಠಾಪನೆ ಮಾಡುವುದು ಬೇಡ ಎಂಬ ಆಲೋಚನೆ ಹೊಂದಿರುವ ಭಕ್ತರು ಈಗಾಗಲೇ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದು, ಮೂರ್ತಿ ತಯಾರಿಕೆ ಮಾಡುವವರಿಗೆ ಮುಂಗಡ ಹಣ ನೀಡಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗು ತ್ತಿರುವುದು ಶ್ಲಾಘನೀಯ ಸಂಗತಿ.

ಮಳೆಯಿಂದಾಗಿ ಮೂರ್ತಿಯ ಕೊರತೆ: ಮಹಾ ಮಳೆಯಿಂದ ಹಲವು ಜಿಲ್ಲೆಗಳು ಸಂಪುರ್ಣ ಜಲಾವೃತ್ತ ಗೊಂಡಿರುವುದರಿಂದ ವಿಘ್ನೇಶ್ವರ ಮೂರ್ತಿ ಹೆಚ್ಚು ತಯಾರಿಕೆಯಾಗಿಲ್ಲ ಇದರಿಂದಾಗಿ ಮಹಾ ನಗರದಲ್ಲಿ ಜೇಡಿ ಮಣ್ಣಿನ ಗಣಪ ಮೂರ್ತಿ ಕೊರತೆ ಆಗುವ ಲಕ್ಷಣಗಳು ಗೋಚರಿಸುತ್ತಿದೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.