ರಣಘಟ್ಟ ಯೋಜನೆ ಕಾಮಗಾರಿ ಚುರುಕುಗೊಳಿಸಿ

Team Udayavani, Apr 25, 2022, 2:57 PM IST

Untitled-1

ಹಳೇಬೀಡು: ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕಾಮಗಾರಿಯನ್ನು ಶಾಸಕ ಕೆ.ಎಸ್‌.ಲಿಂಗೇಶ್‌ ವೀಕ್ಷಿಸಿದರು.

ಪಟ್ಟಣದ ಸಮೀಪದ ಪ್ರಸಾದಿಹಳ್ಳಿ ಬಳಿ ಪ್ರಾರಂಭವಾಗಿರುವ ದ್ವಾರ ಸಮುದ್ರ ಕೆರೆಗೆ ನೀರು ಹರಿಸುವ ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

128 ಕೋಟಿ ರೂ.ಯೋಜನೆ: ದಶಕಗಳ ಕನಸಾಗಿರುವ ಹಳೇಬೀಡು ಮಾದೀಹಳ್ಳಿ ಹೋಬಳಿ ಸೇರಿ ದಂತೆ ಸುಮಾರು 150ಕ್ಕೂ ಹೆಚ್ಚು ಗ್ರಾಮಗಳಿಗೆ ಅನೂಕೂಲ ಕಲ್ಪಿಸಿಕೊಡುವ ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಗಿದೆ. ಬೇ ಲೂರು ಕ್ಷೇತ್ರದ ಶಾಸಕರ ಪ್ರಯತ್ನ, ಇಚ್ಛಾಶಕ್ತಿ ಹಾಗೂ ರೈತರ, ಸ್ವಾಮೀಜಿಗಳ ಅವಿರತ ಹೋರಾಟದ ಫ‌ಲವಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಬಜೆ ಟ್‌ನಲ್ಲಿ 120ಕೋಟಿ ರೂ.ಹಣ ಮೀಸಲಿಟ್ಟರು. ಬಳಿಕ ಮಾಜಿ ಸಿಎಂ ಯಡಿಯೂರಪ್ಪನವರು ಅದಕ್ಕೆ ಮತ್ತಷ್ಟು 8 ಕೋಟಿ ಹಣ ಸೇರಿಸಿ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿದರು.

ಇದರ ಪ್ರತಿಫ‌ಲವಾಗಿ ಕಾಮಗಾರಿ ಪ್ರಾರಂಭವಾಗಿದ್ದು, ಈ ಕಾಮಗಾರಿ ಪ್ರತಿಯೊಂದು ಹಂತವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು.

ನಾಲ್ಕುವರೆ ಕಿ.ಮೀ.ಸುರಂಗ ಮಾರ್ಗ: ಪ್ರತಿಷ್ಠಿತ ಬಿಎಸ್‌ಆರ್‌ ಕಂಪನಿಗೆ 128 ಕೋಟಿ ರೂ.ವೆಚ್ಚದ ಕಾಮಗಾರಿ ಟೆಂಡರ್‌ ನೀಡಿದ್ದು, ದ್ವಾರಸಮುದ್ರ ಕೆರೆಗೆ ನೀರು ಹರಿಯಬೇಕಾದರೆ ಸುಮಾರು ನಾಲ್ಕುವರೆ ಕಿ. ಮೀ.ದೂರದವರೆಗೂ ಸುರಂಗ ಮಾರ್ಗ ಕೊರೆದು ನೀರು ಸರಾಗವಾಗಿ ಸಮತೋಲನ ಮಟ್ಟದಲ್ಲಿ ಹರಿಯುವಂತೆ ಮಾಡಬೇಕಾ ಗಿದ್ದು, ಎಲ್ಲ ರೀತಿಯ ಅತ್ಯಾಧುನಿಕ ಯಂತ್ರೋಪಕರಣಗಳ ಸಹಾಯದಿಂದ ಕಾಮಗಾರಿ ನಡೆಯುತಿದೆ. ಶೀರ್ಘ‌ವಾಗಿ ಪೂರ್ಣಗೊಂಡರೆ ಮೂರು ಹೋಬಳಿಗಳ ರೈತರ ಕನಸು ನನಸಾದಂತಾಗುತ್ತದೆ.

ಕಾಮಗಾರಿ ಚುರುಕಿಗೆ ಸೂಚನೆ: ಈಗಾಗಲೆ ಕಾಮಗಾರಿ ಪ್ರಾರಂಭವಾಗಿ 2 ತಿಂಗಳು ಕಳೆದಿವೆ. ಸುಮಾರು 40ರಿಂದ 50 ಮೀಟರ್‌ ಸುರಂಗ ಕೊರೆದಿದ್ದು, ಮೊದಲ ಹಂತದಲ್ಲಿ ಕಾಮಗಾ ರಿ ವೇಳೆ ಜೇಡಿ ಹಾಗೂ ಸಡಿಲ ಮಣ್ಣು ಸಿಗುತ್ತಿದ್ದು ಕಾಮಗಾರಿ ನಿಧಾನವಾಗಿದೆ. 100 ಮೀ.ಹೋದ ನಂತರದಲ್ಲಿ ಕಾಮಗಾರಿ ಚುರುಕುಗೊಳ್ಳುತ್ತದೆ ಎಂದು ಮುಖ್ಯ ಎಂಜೀನಿಯರ್‌ ಮಾಹಿತಿ ನೀಡಿದರು.

ನಿಗದಿತ ಸಮಯದಲ್ಲಿಯೇ ಕಾಮಗಾರಿ ಪೂರ್ಣಗೊಂಡು ದ್ವಾರಸಮುದ್ರ ಕೆರೆಗೆ ನೀರು ಹರಿಸಬೇಕು. ಹೀಗಾಗಿ ಯಾವುದೇ ಕಾರಣ ಹೇಳದೇ ಕಾಮಗಾರಿ ಚುರುಕುಗೊಳಿಸಬೇಕು. ನಾಲ್ಕು ಕಡೆ ಸುರಂಗ ಮಾರ್ಗ ಕೊರೆಯುವ ಕೆಲಸ ಶೀರ್ಘ‌ದಲ್ಲಿ ಪ್ರಾರಂಭಿಸಬೇಕು. ಮಳೆಗಾಲ, ಚಳಿಗಾಲದ ಕಾರಣ ಹೇಳದೇ ಭೂಮಿಯ ಮೇಲ್ಭಾಗದ ಕಾಮಗಾರಿ ಹಾಗೂ ಸುರಂಗದ ಕಾಮಗಾರಿ ಕೆಲಸ ನಿರಂತರವಾಗಿ ಸಾಗಬೇಕು ಎಂದು ಅಧಿಕಾರಿಗಳಿಗೆ ಹಾಗೂ ಕೆಲಸಗಾರರಿಗೆ ಸೂಚಿಸಿದರು.

ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣ: ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಕಾಮಗಾರಿಯನ್ನು 24 ತಿಂಗಳಲ್ಲಿ ಮುಗಿಸಿ ಬೇಲೂರಿನ ಯಗಚಿ ನದಿಯಿಂದ ವಿಶ್ವಪ್ರಸಿದ್ಧ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿರುವ ದ್ವಾರಸಮುದ್ರ ಕೆರೆಗೆ ನೀರು ಹರಿಸುವ ಕಾರ್ಯ ಪೂರ್ಣಗೊಳಿಸಬೇಕು. ಈ ಕಾಮಗಾರಿ ಪೂರ್ಣಗೊಂಡರೆ ಸುಮಾರು ಸಾವಿರಾರು ಹೆಕ್ಟೇರ್‌ ಜಮೀನಿಗೆ ನೀರು ಹರಿಸಿದಂತಾಗುತ್ತದೆ. ಜತೆಗೆ ಸಾವಿರಾ ರು ಕೊಳವೆ ಬಾಗಳಲ್ಲಿ ಅಂತರ್ಜಲ ಹೆಚ್ಚಿ ಲಕ್ಷಾಂತರ ರೈತರ ಬದುಕು ಹಸನಾಗುತ್ತದೆ. ಹೀಗಾಗಿ ನಿಗದಿತ ಕಾಲಮಾನದಲ್ಲಿಯೇ ಕಾಮಗಾರಿ ಮುಗಿಸಿದರೆ ರೈತರಿಗೆ ನಾನು ಕೊಟ್ಟ ಭರವಸೆ ಉಳಿಸಿಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ರಣಘಟ್ಟ ಕಾಮಗಾರಿಗೆ ವೀಕ್ಷಣೆಗೆ ಬರುತ್ತಿದ್ದೇನೆ ಎಂದು ಸುದ್ದಿ ಮಾಧ್ಯಮದವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ್‌, ಸೊಪ್ಪಿನಹಳ್ಳಿ ಶಿವಣ್ಣ, ಮಹೇಶ್‌, ದಿಲೀಪ್‌, ಕಾಂತರಾಜ್‌ , ಈಶ್ವರ್‌, ಪ್ರೇಮಣ್ಣ ಮುಂತಾದವರು ಹಾಜರಿದ್ದರು.

ಮಾಜಿ ಸಿಎಂ ಎಚ್‌ಡಿಕೆ, ಬಿಎಸ್‌ವೈ ಕೊಡುಗೆ ಸ್ಮರಣೆ : ಚುನಾವಣೆಗೂ ಮೊದಲು ನಾನು ರಣಘಟ್ಟ ಯೋಜನೆ ಜಾರಿ ಬಗ್ಗೆ ಮಾತು ಕೊಟ್ಟಿದ್ದೆ. ಹಾಗೆ ಶಾಸಕನಾದ ಮೂರೇ ತಿಂಗಳಲ್ಲಿ ಸರ್ಕಾರದ ಗಮನ ಸೆಳೆದು, ಒತ್ತಡ ಹೇರಿದಕ್ಕೆ ಯೋಜನೆಗೆ ಮಾಜಿ ಸಿಎಂ ಕುಮಾರಸ್ವಾಮಿ 120 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿರಿಸಿದರು. ಯಡಿಯೂರಪ್ಪನವರು ಅನುಮೋದನೆ ದೊರಕಿಸಿಕೊಟ್ಟರು. ಅದರ ಪ್ರತಿಫ‌ಲ ಇಂದು ರಣಘಟ್ಟ ಯೋಜನೆ ಕಾಮಗಾರಿ ಆರಂಭವಾಗಿದೆ. ಶೀಘ್ರದಲ್ಲೇ ಜನತೆ ಈ ಯೋಜನೆ ಲಾಭ ಪಡೆಯಲಿದ್ದಾರೆ. – ಕೆ.ಎಸ್‌.ಲಿಂಗೇಶ್‌ ಬೇಲೂರು ಶಾಸಕ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

1-sswewqewq

Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.