6 ಸಾವಿರ ಪಡಿತರದಾರರಿಗಿಲ್ಲ ಅನ್ನಭ್ಯಾಗದ ಹಣ
Team Udayavani, Jul 20, 2023, 1:55 PM IST
ಚನ್ನರಾಯಪಟ್ಟಣ: ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುವ ಫಲಾನುಭವಿಗಳಿಗೆ ತಲಾ 5 ಕಿಲೋ ಅಕ್ಕಿ ಬದಲು ರಾಜ್ಯ ಸರ್ಕಾರ 170 ರೂ. ಹಣವನ್ನು ಆಗಸ್ಟ್ ತಿಂಗಳಿನಿಂದ ಹಾಕಲು ನಿರ್ಧರಿಸಿದೆ. ಆದರೆ ತಾಲೂಕಿನಲ್ಲಿ 6110 ಕುಟುಂಬಕ್ಕೆ ಹಣ ಸಂದಾಯವಾಗುವುದು ಅನುಮಾನವಾಗಿದೆ.
ತಾಲೂಕಿನಲ್ಲಿ 72138 ಬಿಪಿಎಲ್ ಕುಟುಂಬ, 6172 ಎಪಿಎಲ್ ಕುಟುಂಬ ಹಾಗೂ 3926 ಕುಟುಂಬ ಅಂತ್ಯೋದಯ ಚೀಟಿ ಹೊಂದಿದ್ದಾರೆ.ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರು ವವರಿಗೆ ಸರ್ಕಾರ ಐದು ಕಿಲೋಗೆ ಅಕ್ಕಿಗೆ ಹಣ ಸಂದಾಯ ಮಾಡಲಿದೆ. ಆದರೆ ತಾಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಹೊಂದಿಲ್ಲ. ಕೆಲವರು ಖಾತೆ ಹೊಂದಿ ದ್ದರೂ ಅದು ನಿಷ್ಕ್ರಿಯವಾಗಿದೆ. ಇನ್ನು ಕೆಲವರು ಆಧಾರ್ ಲಿಂಕ್ ಮಾಡಿಸಿಲ್ಲ. ಐಎಫ್ಎಸ್ಸಿ ಕೋಡ್ ಸೇರಿದಂತೆ ಕೆಲ ಸಮಸ್ಯೆಗಳಿವೆ. ಹಾಗಾಗಿ ಅವರಿಗೆ ಸರ್ಕಾರದಿಂದ ಹಣ ಸಂದಾಯ ಅಗುವುದು ಅನುಮಾನವಾಗಿದೆ.
ನಾಲ್ಕು ಕೋಟಿ ಹಣ ಖಾತೆಗೆ: ತಾಲೂಕಿನಲ್ಲಿ 72138 ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬವಿದ್ದು 245375 ಮಂದಿಗೆ ನೇರ ನಗದು ವರ್ಗಾವಣೆಗೆ ಅರ್ಹರಿದ್ದಾರೆ. ಸರ್ಕಾರ ಘೋಷಣೆ ಮಾಡಿರು ವಂತೆ ಪ್ರತಿ ಸದಸ್ಯರಿಗೆ 170 ರೂ. ನಂತೆ ಮಾಸಿಕ 4,17 ಕೋಟಿ ರೂ. ಹಣ ನೇರವಾಗಿ ಪಡಿತರ ಚೀಟಿ ಹೊಂದಿ ರು ಮನೆ ಮಾಲಿಕರ ಖಾತೆ ಸಂದಾಯವಾಗಲಿದೆ.
ನೇರ ನಗದಿನಿಂದ ವಂಚಿತ: ತಾಲೂಕಿನಲ್ಲಿ 6110 ಕುಟುಂಬ ಅನ್ನಭಾಗ್ಯದಿಂದ ಹಣ ಪಡೆಯಲು ವಂಚಿತ ರಾಗುತ್ತಿದ್ದಾರೆ. ಈಗಾಗಲೆ ಆಹಾರ ಇಲಾಖೆ ನ್ಯಾಯಾಬೆಲೆ ಅಂಗಡಿ ಮಾಲಿಕರ ಸಭೆ ಮಾಡಿ ಬ್ಯಾಂಕ್ ಖಾತೆ ಮಾಡಿಸಿದವರು, ಆಧಾರ್ ಲಿಂಕ್ ಮಾಡಿಸದವರ ಪತ್ತೆ ಹಚ್ಚಿ ನ್ಯಾಯಾಬೆಲೆ ಅಂಗಡಿ ಮಾಲಿಕರ ಮೂಲಕ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಇನ್ನು ಹಲವು ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದಿಲ್ಲದೆ ಇಂಥವರ ಅನುಕೂಲಕ್ಕಾಗಿ ಅಂಚೆ ಕಚೇರಿಯಲ್ಲಿ ಹೊಸ ಖಾತೆ ತೆರೆಯಲು ಅವಕಾಶವಿದೆ. ಇದರ ಸದುಪ ಯೋಗ ಪಡೆದು ಕೊಳ್ಳಬೇಕಾದರೆ ಕೂಡಲೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು ಎಂದು ಇಲಾಖೆ ಸೂಚಿಸಿದೆ.
ಎಪಿಎಲ್‌ದಾರರಿಗೆ ಹಣ ಇಲ್ಲ: ತಾಲೂಕಿನಲ್ಲಿನ 6172 ಎಪಿಎಲ್ ಕುಟುಂಬವಿದೆ. ಸರ್ಕಾರ ನಿಗದಿ ಮಾಡಿರುವ ಹಣ ಪಾವತಿ ಮಾತಿ ನ್ಯಾಯಾಬೆಲೆ ಅಂಗಡಿಯಲ್ಲಿ ಪಡಿತರ ಆಹಾರ ಪಡೆಯುತ್ತಿದ್ದಾರೆ. ಎಪಿಎಲ್ ಪಡಿತರ ಚೀಟಿಯಲ್ಲಿ ಒಬ್ಬರು ಇದ್ದರೆ, ಐದು ಕೆ.ಜಿ. ಅಕ್ಕಿ ನೀಡುತ್ತಾರೆ. ಒಬ್ಬರಿಗಿಂತ ಹೆಚ್ಚು ಇದ್ದರೆ 10 ಕಿಲೋ ಮಾತ್ರ ಪಡಿತರ ಆಹಾರವನ್ನು ಹಣ ಕೊಟ್ಟು ಪಡೆಯಬಹುದಾಗಿದೆ. ಎಪಿಎಲ್ ಪಡಿತರ ಚೀತಿ ಹೊಂದಿರುವವರಿಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಹಣ ನೀಡುತ್ತಿಲ್ಲ.
ಡಬ್ಬಲ್ ಧಮಾಕ: ತಾಲೂಕಿನಲ್ಲಿ 3926 ಕುಟುಂಬದಿಂದ 16393 ಅಂತ್ಯೋದಯ ಪಡಿತರ ದಾರರಿ ದ್ದಾರೆ. ಇದರ ಮೂರು ಮಂದಿಗೆ ಕಡಿಮೆ ಇರುವ 4977 ಮಂದಿಗೆ 30 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ, ಅವರಿಗೆ ರಾಜ್ಯ ಸರ್ಕಾರದ ಅನ್ನಭಾಗ್ಯದ ಹಣ ದೊರೆಯುವುದಿಲ್ಲ, ಇನ್ನು ಅಂತ್ಯೋದಯ ಪಡಿತರ ಚೀಟಿ ಹೊಂದಿರು ಮೂರು ಯುನಿಟ್‌ಗಿಂತೆ ಹೆಚ್ಚು ಹೊಂದಿರು 11416 ಸದಸ್ಯರಿದ್ದು, ಅವರಿಗೆ 30 ಕಿಲೋ ಅಕ್ಕಿ ಜೊತೆ 170 ರೂ. ನಂತೆ 1,94,720 ರೂ ಹಣ ಬ್ಯಾಂಕ್ ಖಾತೆಗೆ ಮಾಸಿಕವಾಗಿ ಜಮೆಯಾಗಲಿದೆ. ಅನ್ನಭಾಗ್ಯ ಯೋಜನೆಯಿಂದ ರಾಜ್ಯ ಸರ್ಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತಿ ಇದರಲ್ಲಿ ತಾಲೂಕಿಗೆ ಬಿಪಿಎಲ್ ಹಾಗೂ ಅಂತ್ಯೋದಯ ಸೇರಿ ಒಟ್ಟು 41908470 ರೂ. ಮಾಸಿಕವಾಗಿ ಹಣ ಸಂದಾಯವಾಗಲಿದೆ.
ತಾಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಭಾಗ್ಯ ಯೋಜನೆಯಿಂದ ರಾಜ್ಯ ಸರ್ಕಾರ ನೇರನಗದು ವರ್ಗಾವಣೆಯಿಂದ ವಂಚಿತರಾಗುತ್ತಿದ್ದು ಅವರನ್ನು ಪತ್ತೆ ಹಚ್ಚಿ ಕಳೆದ 20 ದಿವಸದ ಹಿಂದೆಯೇ ಮಾಹಿತಿ ನೀಡಲಾಗಿದೆ. ಎಲ್ಲರೂ ಅಂಚೆ ಕಚೇರಿ ಅಥವಾ ಬ್ಯಾಂಕ್ ಖಾತೆ ಮಾಡಿಸಿಕೊಂಡಿರಬಹುದು. ● ಎಚ್.ಪಿ.ವಾಸು, ಶಿರಸ್ತೇದಾರ್ ಆಹಾರ ಮತ್ತು ನಾಗರಿಕ ಸೇವೆ ಇಲಾಖೆ.
-ಶಾಮಸುಂದರ್ ಕೆ. ಅಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.