ತಿಂಗಳ ಮೊದಲ ದಿನವೇ ಶಿಕ್ಷಕ ವೇತನ ಬ್ಯಾಂಕ್ ಗೆ ಜಮಾ
Team Udayavani, Jan 2, 2022, 2:41 PM IST
ಅರಸೀಕೆರೆ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2022ನೇ ಸಾಲಿನಿಂದ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅರಸೀಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಾವಗಲ್ ಹೋಬಳಿ ನಿರ್ದೇಶಕ ಹಾಗೂ ಸಂಪನ್ಮೂಲ ವ್ಯಕ್ತಿ ಅಶೋಕ್ ಹೇಳಿದರು.
ಜಾವಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣಇಲಾಖೆ ಬೆಂಗಳೂರು, ಡಿಎಸ್‌ಇಆರ್‌ಟಿ , ಪ್ರಥಮ್ ಎನ್‌ಜಿಒ ಹಾಗೂ ಜಾವಗಲ್ ಕ್ಲಸ್ಟರ್ ಸಹಯೋಗದೊಂದಿಗೆ ಹೋಬಳಿಯ 4, 5ನೇ ತರಗತಿಯ ಬೋಧನಾ ಶಿಕ್ಷಕರಿಗೆ ಏರ್ಪಡಿಸಿದ ಓದು ಕರ್ನಾಟಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ಅಭಿವೃದ್ಧಿ ಪಡಿಸಲು ಈ ತರಬೇತಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಎಂದರು. ಶಿಕ್ಷಕರು ಬದಲಾವಣೆಗೆ ಹೊಂದಿಕೊಂಡು ಇಷ್ಟಪಟ್ಟು ಗುಣಮಟ್ಟ ಶಿಕ್ಷಣ ನೀಡಬಹುದು. ಓದು ಕರ್ನಾಟಕ ಕನ್ನಡ – ಗಣಿತ ವಿಷಯಗಳಿಗೆ ಸಂಬಂಧಿಸಿದ ಕಿಟ್‌ಗಳನ್ನು ಬಳಸಿ ಶಾಲಾ ಕೊಠಡಿಗಳಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಬಿಆರ್‌ಪಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚೇತನ್ ಮಾತನಾಡಿ, ಶಿಕ್ಷಣವೆಂದರೆ ಪರಿವರ್ತನೆ, ಅಪೇಕ್ಷಿತ ಬದಲಾವಣೆ, ಹೊಸತನವಾಗಿದೆ. 4, 5ನೇ ತರಗತಿ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಹಾಗೂ ಸರಳ ಗಣಿತ ವಿಷಯಗಳ ಬಗ್ಗೆ ಕೊಠಡಿಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಈ ತರಬೇತಿ ನೀಡಲಾಗುತ್ತಿದೆ ಎಂದರು.
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಹಾಗೂ ಮುಂದುವರಿದ ವಿದ್ಯಾರ್ಥಿಗಳಿದ್ದು ,ಆರಂಭಿಕ ಹಂತ -1, ಮುಂದುವರಿದ ಹಂತ -2 ಎಂಬ ವಿಭಿನ್ನ ಚಟುವಟಿಕೆಗಳಿರುತ್ತವೆ ಎಂದರುಪ್ರತಿ ಮಗುವಿಗೆ ಮೂಲ ಓದುವಿಕೆ , ಸರಳ ಪಠ್ಯಓದುವಿಕೆ ಅರ್ಥ ಗ್ರಹಿಕೆ ಸಾಧ್ಯತೆ , ಮಗುವು ಲಿಖೀತಮತ್ತು ಮೌಖೀಕ ರೂಪದಲ್ಲಿ ಸ್ವಂತ ಭಾವನೆಯನ್ನು ವ್ಯಕ್ತಪಡಿಸುವಂತೆ ಮಾಡುವುದು ಕಾರ್ಯಕ್ರಮದ ಮೂಲುದ್ದೇಶವಾಗಿದೆ ಎಂದು ತಿಳಿಸಿದರು.
ಮಗುವಿನ ಕಲಿಕ ಮಟ್ಟ ಗುರುತಿಸುವಿಕೆ, ಆ ಮಟ್ಟಕ್ಕೆ ತಕ್ಕ ಚಟುವಟಿಕೆ ಆಟಗಳ ವ್ಯವಸ್ಥೆ ಮಾಡುವುದು 60 ದಿನಗಳ ಬೋಧನಾ ಕಾರ್ಯಕ್ರಮ ತರಬೇತಿಯ ಮುಖ್ಯಾಂಶವಾಗಿದೆ ಎಂದರು.
ಜೆಎಸ್ ರವಿಶಂಕರ್, ಪೋಷಕ ವಾಸು ಮಾತನಾಡಿ, ತರಬೇತಿಯಲ್ಲಿ ಶಿಕ್ಷಕರುಕಡ್ಡಾಯವಾಗಿ ಭಾಗವಹಿಸಿ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಶಾಲಾ ಕೊಠಡಿಗಳಲ್ಲಿಪರಿಣಾಮಕಾರಿಯಾಗಿ ಕಲಿಸಿದಾಗ ತರಬೇತಿಯು ಸಾರ್ಥಕತೆ ಪಡೆದುಕೊಳ್ಳತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಜಾವಗಲ್ ಹೋಬಳಿಯ ಸಿಆರ್‌ಪಿಗಳಾದ ಮಾರುತಿ, ಜಗದೀಶ್, ಶಿವಕುಮಾರ್, ಗಂಗಾಧರ್, ಮಂಜುನಾಥ್ ಹಾಗೂ 50ಕ್ಕೂ ಹೆಚ್ಚು ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.