ತಾಲೂಕಿನ ಅಭಿವೃದ್ಧಿಗೆ 620 ಕೋಟಿ ಅನುದಾನ ಬಿಡುಗಡೆ
Team Udayavani, Jun 29, 2019, 3:43 PM IST
ಬೇಲೂರು ತಾಲೂಕು ನಾರಾಯಣಪುರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಶಾಸಕ ಕೆ.ಎಸ್.ಲಿಂಗೇಶ್ ಉದ್ಘಾಟಿಸಿದರು.
ಬೇಲೂರು: ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ 620 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ತಾಲೂಕಾದ್ಯಂತ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲೂಕಿನ ನಾರಾಯಣಪುರ ಗ್ರಾಮ ಪಂಚಾ ಯಿತಿಯಲ್ಲಿ ನೂತನವಾಗಿ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೆಂದ್ರ ಉದ್ಘಾಟಿಸಿ ಮಾತ ನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮ ಪಂಚಾಯಿತಿಗಳ ಬಲವರ್ಧನೆಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು ಗ್ರಾಮೀಣ ಭಾಗದ ರಸ್ತೆ ಚರಂಡಿ ಕುಡಿಯುವ ನೀರು ಪೌರೈಕೆಗೆ ಹೆಚ್ಚಿನ ಆದ್ಯತೆ ನೀಡಿವೆ ಎಂದರು.
ತಿಳಿಯದೆ ದೂರುವುದು ಸರಿಯಲ್ಲ: ಕೆಲವರು ತಾಲೂಕು ಅಭಿವೃದ್ಧಿಯಾಗಿಲ್ಲ ಎಂದು ದೂರು ತ್ತಾರೆ, ಆದರೆ ಅಂಕಿ ಅಂಶಗಳನ್ನು ತಿಳಿಯದೆ ಮಾತ ನಾಡು ವುದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲ. ಸರ್ಕಾರ ತಾಲೂಕಿನ ಅಭಿವೃದ್ಧಿಗೆ 620 ಕೋಟಿ ರೂ. ಅನು ದಾನ ಬಿಡುಗಡೆಗೊಳಿಸಿದೆ ಅಲ್ಲದೆ ಲೋಕೋಪ ಯೋಗಿ ಇಲಾಖೆಯಿಂದ 236 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಗ್ರಾಮೀಣ ಭಾಗದಲ್ಲಿ ರಸ್ತೆ, ಸೇತುವೆ, ಕಟ್ಟಡಗಳು ನಿರ್ಮಾ ಣವಾಗುತ್ತಿವೆ ಎಂದು ತಿಳಿಸಿದರು.
ಹಳ್ಳಿಗಳ ಅಭಿವೃದ್ಧಿಗೆ ಪೂರಕ: ಗ್ರಾಪಂಗಳು ಗ್ರಾಮಿ ೕಣ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಪೂರಕ ವಾಗಿ ಕೆಲಸ ಮಾಡಬೇಕು. ಸರ್ಕಾರ ಎನ್.ಆರ್.ಐ.ಜಿ ಯೋಜನೆಯಲ್ಲಿ ಹಲವಾರು ಕಾಮಗಾರಿ ಮಾಡಲು ಅನುಮತಿ, ನೀಡಿದೆ ಅದರಂತೆ ರಾಜ್ಯ ಸರ್ಕಾರ ನರೇಗಾ ಯೋಜನೆಗೆ 790 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಯಾವ ಕಾಮಗಾರಿ ಅವಶ್ಯಕ ಎಂಬುದನ್ನು ತಿಳಿದು ಸದಸ್ಯರು ಚರ್ಚಿಸಿ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಿ ಎಂದು ಹೇಳಿದರು.
ಕಾಮಗಾರಿ ಪ್ರಗತಿಯಲ್ಲಿವೆ: ನಾರಾಯಣಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಾದ ಕೆಳೆಹಳ್ಳಿ, ದಾಸಗೋ ಡನಹಳ್ಳಿ, ಬೆಣ್ಣೂರು, ಹೊಸಮನೆ, ಬಂದಳ್ಳಿ, ಎರೆಹಳ್ಳಿ, ಚನ್ನಪುರ, ಕೊಡನಹಳ್ಳಿ ಕರಗಡ. ಶೆಟ್ಟಿಗೆರೆ, ಗ್ರಾಮಗಳ ರಸ್ತೆ ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಶಾಸಕರಿಗೆ ಮನವಿ: ತಾಪಂ ಸದಸ್ಯ ಮಂಜುನಾಥ್ ಮಾತನಾಡಿ, ನಾರಾಯಣಪುರ ಗ್ರಾಪಂನಲ್ಲಿ 17 ಸದಸ್ಯರಿದ್ದು ಪಂಚಾಯಿತಿ ಕಚೇರಿ ಶಿಥಿಲಗೊಂಡಿದ್ದು ಸದಸ್ಯ ರೆಲ್ಲ ಸೇರಿ ಹೊಸ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ. ಗ್ರಾಮಕ್ಕೆ ಸಮುದಾಯ ಭವನ, ಅಂಬೇಡ್ಕರ್‌ಭವನ, ಪಶುಆಸ್ಪತ್ರೆ, ಮೂರಾರ್ಜಿ ವಸತಿ ಶಾಲೆ ಅವಶ್ಯಕ ವಾಗಿದ್ದು ಶಾಸಕರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ನಾರಾಯಣಪುರ ಗ್ರಾಪಂ ಸದಸ್ಯ ದಯಾನಂದ ಮಾತನಾಡಿ, ಗ್ರಾಪಂ ಹೊಸ ಕಚೇರಿ ಸುತ್ತಾ ತಂತಿಬೇಲಿ, ಗ್ರಂಥಾಲಯ, ಕಟ್ಟಡ ಇನ್ನಿತರೆ ಕಾಮಗಾರಿಗಳು ಅವಶ್ಯಕವಾಗಿದ್ದು ಶಾಸಕರು ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಪಂಚಾಯಿತಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ರತ್ನ, ಸದಸ್ಯರಾದ ಈಶ್ವರ್, ಶಂಕರ್, ಪರಮೇಶ್, ಶಾಂತಕುಮಾರ್, ಜವರಮ್ಮ, ಚಂದ್ರಕಲಾ, ರೇಖಾ, ಪ್ರವೀಣ್‌ಕುಮಾರ್, ಸುಮಿತ್ರ, ಮಂಜುಳಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.