108 ಕಲಶಗಳಲ್ಲಿ 32 ಎನ್‌ಆರ್‌ಐಗಳಿಗೆ ಮೀಸಲು


Team Udayavani, Feb 12, 2018, 12:36 PM IST

108-kalasha.jpg

ಹಾಸನ: ಮಹಾಮಸ್ತಕಾಭಿಷೇಕದ ಪ್ರಥಮ ದಿನ ಶ್ರೀ ಬಾಹುಬಲಿ ಮೂರ್ತಿಗೆ 108 ಕಲಶಗಳಿಂದ ಅಭಿಷೇಕ ನಡೆಯುತ್ತದೆ. ಆ ಕಲಶಗಳಿಗೆ ಭಾರೀ ಬೇಡಿಕೆಯೂ ಇರುತ್ತದೆ. ಈ ಬಾರಿ ಫೆ.17 ರಂದು ನಡೆಯುವ ಪ್ರಥಮ ದಿನದ ಅಭಿಷೇಕದ 108 ಕಲಶಗಳ ಪೈಕಿ 32 ಕಲಶಗಳು ಅನಿವಾಸಿ ಭಾರತೀಯರಿಗೆ ಮೀಸಲಾಗಿವೆ.

ಇನ್ನುಳಿದ 76 ಕಲಶಗಳು ದಾನಿಗಳಿಗೆ ವಿಲೇವಾರಿಯಾಗಲಿವೆ. ಪ್ರಥಮ ದಿನದ 32 ಕಲಶಗಳ ಜತೆಗೆ ಫೆ.21 ರಂದು ಅನಿವಾಸಿ ಭಾರತೀಯರಿಗೆ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ. 2006ರ ಮಹಾಮಸ್ತ ಕಾಭಿಷೇಕದಲ್ಲಿ ಪ್ರಥಮ ದಿನದ ಪ್ರಥಮ ಕಲಶ 1.8 ಕೋಟಿ ರೂ.ಗೆ ಹರಾಜಾಗಿತ್ತು. ರಾಜಸ್ಥಾನದ ಕಿಶನ್‌ಗಢದ ಆರ್‌.ಕೆ.ಮಾರ್ಬಲ್ಸ್‌ನ ಮಾಲೀಕರು ಪ್ರಥಮ ಕಲಶವನ್ನು ಖರೀದಿಸಿದ್ದರು.

ಪ್ರಥಮ ಅಭಿಷೇಕದ ಕಲಶವನ್ನು ಅಭಿಷೇಕದ ಮುನ್ನಾದಿನ ಹರಾಜು ಮಾಡುವುದರಿಂದ ಈ ಬಾರಿಯ ಕಲಶವನ್ನು ಖರೀದಿಸುವವರು ಯಾರು ಎಂಬ ಕುತೂಹಲಕ್ಕೆ ಫೆ.16ರಂದು ತೆರೆ ಬೀಳಲಿದೆ. ಸದ್ಯದ ಮಾಹಿತಿ ಪ್ರಕಾರ ರಾಜಸ್ಥಾನದ ಆರ್‌.ಕೆ.ಮಾರ್ಬಲ್ಸ್‌ ಮಾಲೀಕರೇ ಪ್ರಥಮ ಕಲಶ ಖರೀದಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಇನ್ನುಳಿದ ಕಲಶಗಳೂ ಲಕ್ಷಾಂತರ ರೂ.ಗಳಿಗೆ ವಿಲೇವಾರಿಯಾಗುತ್ತವೆ.

ಪ್ರಥಮ ದಿನದ ಕಲಶಗಳ ವಿಲೇವಾರಿಯ ವಿವರವನ್ನು ಶ್ರವಣಬೆಳಗೊಳದ ಜೈನಮಠ ಗೌಪ್ಯವಾಗಿಟ್ಟಿರುತ್ತದೆ. ಕಲಶಗಳ ವಿಲೇವಾರಿಯಾದ ಮೊತ್ತ ಜೈನಮಠಕ್ಕೆ ಸೇರುತ್ತದೆ. ಮಠವು ಆ ಮೊತ್ತವನ್ನು ಜನಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುತ್ತದೆ. 2006ರ ಮಹಾಮಸ್ತಕಾಭಿಷೇಕದಲ್ಲಿ ಕಲಶಗಳಿಂದ ಸಂಗ್ರಹವಾದ ಮೊತ್ತವನ್ನು ಶ್ರವಣಬೆಳಗೊಳದ ಪ್ರಾಕೃತ ನಗರದಲ್ಲಿ 100 ಹಾಸಿಗೆಗಳ ಮಕ್ಕಳ ಆಸ್ಪತ್ರೆಗೆ ವಿನಿಯೋಗಿಸಲಾಗಿತ್ತು.

ಈ ಬಾರಿಯ ಮಹಾಮಸ್ತಕಾಭಿಷೇಕದಲ್ಲಿ ಕಲಶಗಳ ವಿಲೇವಾರಿಯಿಂದ ಸಂಗ್ರಹವಾಗುವ ಮೊತ್ತವನ್ನು 200 ಹಾಸಿಗೆಗಳ ಜನರಲ್‌ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲು ಶ್ರೀಮಠ ಉದ್ದೇಶಿಸಿದೆ. ಕಲಶಗಳ ವಿಲೇವಾರಿಯ ಜತೆಗೆ ದಾನಿಗಳು ಮಠಕ್ಕೆ ನೀಡುವ ದೇಣಿಗೆಯಿಂದ ಬಾಹುಬಲಿ ಇಂಜಿನಿಯರಿಂಗ್‌ ಕಾಲೇಜಿನ ಸ್ನಾತಕೋತ್ತರ ಪದವಿ ತರಗತಿಗಳ ಕೊಠಡಿ ನಿರ್ಮಾಣಕ್ಕೆ ಬಳಸಲೂ ಶ್ರೀ ಮಠ ಯೋಜಿಸಿದೆ.

ಫೆ.17ರಂದು 108 ಕಲಶಗಳಿಂದ ಮಾತ್ರ ಅಭಿಷೇಕ ನಡೆದರೆ, ಇನ್ನುಳಿದ 8 ದಿನ ಅಂದರೆ ಫೆ.25ರ ವರೆಗೆ ಪ್ರತಿ ದಿನ 1,008 ಕಲಶಗಳಿಂದ ಅಭಿಷೇಕ ನಡೆಯುತ್ತದೆ. ಈ ಕಲಶಗಳೂ ಕನಿಷ್ಠ 5 ಸಾವಿರ ರೂ.ಗಳಿಂದ ಲಕ್ಷಾಂತರ ರೂ.ಗಳಿಗೆ ಮಾರಾಟವಾಗುತ್ತದೆ. 

ಪ್ರಥಮ ದಿನ ಸಾರ್ವಜನಿಕರಿಗೆ ದರ್ಶನವಿಲ್ಲ: ಇದುವರೆಗಿನ ಮಾಹಿತಿ ಪ್ರಕಾರ ಶ್ರೀ ಬಾಹುಬಲಿ ಮೂರ್ತಿಗೆ ಫೆ.17ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಪ್ರಥಮ ದಿನದ ಅಭಿಷೇಕದ ದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.

ಅಂದು ಜೈನ ಮುನಿಗಳು, ಅವರ ಸಹಾಯಕರು, ಮಾತೆಯರು ಮತ್ತು ಅವರ ಸಹಾಯಕರು, ಕಲಶ ಖರೀದಿಸಿದವರು ಮತ್ತು ಅವರೊಂದಿಗೆ ಇಬ್ಬರು, ಕರ್ತವ್ಯಕ್ಕೆ ನಿಗದಿ ಯಾಗಿರುವ ಅಧಿಕಾರಿ ಗಳು ಮತ್ತು ಸಿಬ್ಬಂದಿ ಹಾಗೂ ಪೂರ್ವಾನು ಮತಿ ಪಡೆದ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಧರ್ಮ ದರ್ಶನಕ್ಕೂ ಅವಕಾಶ ನೀಡಬೇಕೆಂಬ ಒತ್ತಾಯವಿದೆ. ಆದರೆ ಶ್ರೀ ಮಠದವರು ಇನ್ನೂ ಸಮ್ಮತಿ ನೀಡಿಲ್ಲ. ಏಕೆಂದರೆ ಅಟ್ಟಣಿಗೆಯಲ್ಲಿ ಗರಿಷ್ಠ 5,500 ಜನರಿಗೆ ಮಾತ್ರ ಮಹಾಮಸ್ತಕಾಭಿಷೇಕ ವೀಕ್ಷಿಸಲು ಅವಕಾಶವಿದೆ. ಹಾಗಾಗಿ ಸುರಕ್ಷತೆ ದೃಷ್ಠಿಯಿಂದ ಹೆಚ್ಚು ಜನರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಸರ್ಕಾರದ ಹಣ ಮಠಕ್ಕಿಲ್ಲ: ಮಹಾಮಸ್ತಕಾಭಿಷೇಕಕ್ಕೆ ಸರ್ಕಾರ 175 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ 75 ಕೋಟಿ ರೂ. ತಾತ್ಕಾಲಿಕ ಉಪ ನಗರ ನಿರ್ಮಾಣಕ್ಕೆ, 12 ಕೋಟಿ ರೂ. ಅಟ್ಟಣಿಗೆ ನಿರ್ಮಾಣಕ್ಕೆ, 21 ಕೋಟಿ ರೂ. ಪ್ರಾಕೃತ ವಿ.ವಿ. ಕಟ್ಟಡಗಳ ನಿರ್ಮಾಣಕ್ಕೆ, 3 ಕೋಟಿ ರೂ. ಅತಿಗಣ್ಯರ ಅತಿಥಿಗೃಹ ನಿರ್ಮಾಣಕ್ಕೆ ಹೀಗೆ ಮೂಲ ಸೌಕರ್ಯಗಳಿಗೆ ವೆಚ್ಚವಾಗಿದೆ.

ಇನ್ನುಳಿದ ಇಲಾಖೆಗಳೂ ಮೂಲ ಸೌಕರ್ಯಕ್ಕೆ  ಅನುದಾನ ಖರ್ಚು ಮಾಡಿವೆ. ಸರ್ಕಾರದ ಅನುದಾನ ಮಠಕ್ಕೆ ಬಂದಿಲ್ಲ. ಮಠ ಬಯಸುವುದೂ ಇಲ್ಲ. ಮಹಾಮಸ್ತಕಾಭಿಷೇಕಕ್ಕೆ ಆಗಮಿಸಿರುವ ಮುನಿಗಳು, ಮಾತಾಜಿಯವರ ಸೌಕರ್ಯ, ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಶ್ರವಣಬೆಳಗೊಳಕ್ಕೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗಳಿಗೆ ಉಚಿತ ಭೋಜನ ಹಾಗೂ ಮಠದಿಂದ ಹಮ್ಮಿಕೊಳ್ಳುವ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಶ್ರೀ ಮಠವೇ ವೆಚ್ಚ ಮಾಡುತ್ತದೆ.

ಹಾಗಾಗಿ ದಾನಿಗಳಿಂದ ಬರುವ ದೇಣಿಗೆ, ಕಲಶಗಳ ವಿಲೇವಾರಿಯಿಂದ ಸಂಗ್ರಹವಾಗುವ ಮೊತ್ತದಲ್ಲಿಯೇ ಶ್ರೀ ಮಠ ಈ ವೆಚ್ಚಗಳನ್ನು ಮಾಡುತ್ತದೆ ಎಂದು ಶ್ರೀ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಸದಸ್ಯ ಟಿ.ವೈ.ರಾಜೇಂದ್ರಕುಮಾರ್‌ ಸ್ಪಷ್ಟಪಡಿಸಿದರು.

* ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

SOMANNA-2

Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

ಯಾರು, ಯಾರನ್ನು, ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ

CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.