ಸಕಲೇಶಪುರ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

ಕೆರೆ ಅಭಿವೃದ್ಧಿಪಡಿಸಿದರೂ ಸಾರ್ವಜನಿಕರಿಗೆ ಕೂರಲು ಆಸನ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ

Team Udayavani, Apr 23, 2019, 3:30 PM IST

hasan 4

● ಸುಧೀರ್‌ ಎಸ್‌.ಎಲ್

ಸಕಲೇಶಪುರ: ಪಟ್ಟಣದ ಜನರ ಕನಸಿನ ಕೂಸಾದ ದೊಡ್ಡಕೆರೆ ನಿತ್ಯ ನೂರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಈ ಸುಂದರ ಕೆರೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 193ರಲ್ಲಿ ಸುಮಾರು 5.25 ಎಕರೆಯಷ್ಟು ಪ್ರದೇಶದಲ್ಲಿ ಸರ್ಕಾರಿ ಕೆರೆ ಹಲವು ವರ್ಷಗಳ ಕಾಲ ಹಾಳು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ರಾಜ್ಯ ಸಮನ್ವಯ ಅಧಿಕಾರಿ ಬೈಕೆರೆ ನಾಗೇಶ್‌ ವಿಶೇಷ ಆಸಕ್ತಿ ವಹಿಸಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಸುಮಾರು 1.5ಕೋಟಿಗೂ ಹೆಚ್ಚು ಅನುದಾನವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಮಾಡಿಸಿದ್ದರು.

ಹೂಳು ತೆಗೆಯಲು ಸುಮಾರು ಎರಡು ವರ್ಷಗಳ ಕಾಲ ತೆಗೆದುಕೊಂಡ ಗುತ್ತಿಗೆದಾರರು ಕಳೆದ 2ವರ್ಷಗಳ ಹಿಂದೆ ಕಾಮಗಾರಿ ಮುಗಿಸುವಲ್ಲಿ ಯಶಸ್ವಿಯಾಗಿದ್ದು, ಅಂತಿಮವಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರು ಕಾಮಗಾರಿಯನ್ನು ಉದ್ಘಾಟಿಸಿದ್ದರು. ಕೆರೆಯ ಸುತ್ತಲು ವಾಕಿಂಗ್‌ ಪಾತ್‌ ಮಾಡಲಾಗಿದ್ದು ನಿತ್ಯ ನೂರಾರು ಜನ ವಾಕಿಂಗ್‌ ಮಾಡಲು ಇಲ್ಲಿಗೆ ಬರುತ್ತಿದ್ದಾರೆ.

ಕೆರೆಗೆ ಶೌಚಾಲಯದ ನೀರು: ಕೆರೆಯ ಕೊನೆ ಭಾಗ ದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲ ಯದಿಂದ ಕಲುಷಿತ ನೀರನ್ನು ನೇರವಾಗಿ ಕೆರೆಗೆ ಬಿಡುತ್ತಿರುವುದರಿಂದ ಕೆರೆಯ ನೀರು ಮಲಿನ ಗೊಂಡು ಗಬ್ಬು ವಾಸನೆ ಬರುತ್ತಿದ್ದು, ವಾಕಿಂಗ್‌ ಮಾಡಲು ಬರುವವರು ಮೂಗು ಮುಚ್ಚಿಕೊಂಡು ವಾಕಿಂಗ್‌ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೊದ ಲಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯದ ಕಲುಷಿತ ನೀರನ್ನು ಬೇರೆಡೆಗೆ ಬಿಡಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.

ಕೆರೆಯ ಸುತ್ತ ಗಿಡಗೆಂಟೆ: ಕೆರೆ ಆವರಣದ ಸುತ್ತಲು ಗಿಡಗುಂಟೆಗಳು ಕಾಡಿನಂತೆ ಬೆಳೆದಿದ್ದು,ಇದನ್ನು ತೆಗೆ ಯಲು ಯಾರು ಮುಂದಾಗಿಲ್ಲ. ಈ ಹಿಂದೆ ರೋಟರಿ ಸಂಸ್ಥೆಯವರು ಒಮ್ಮೆ ಇಲ್ಲಿರುವ ಗಿಡ ಗುಂಟೆಗಳನ್ನು ತೆಗೆಸಿದ್ದು ನಂತರ ಇದರ ಉಸ್ತುವಾರಿಯನ್ನು ಯಾರೂ ವಹಿಸಿಕೊಂಡಿಲ್ಲ. ಇಲ್ಲಿರುವ ಹೈಮಾಸ್ಟ್‌ ದೀಪ ಹಾಳಾಗಿರುವ ಕಾರಣ ಕತ್ತಲಾದ ನಂತರ ವಾಕಿಂಗ್‌ ಮಾಡುವುದು ಅಸಾಧ್ಯವಾಗಿದೆ.

ಕೂರಲು ಬೆಂಚ್‌ಗಳಿಲ್ಲ: ಕೆರೆಯ ವಾಕಿಂಗ್‌ ಪಾತ್‌ ಸುತ್ತಲೂ ಬೆಂಚ್‌ಗಳನ್ನು ಅಳವಡಿಸಬೇಕಾಗಿದ್ದು ಬೆಂಚ್‌ಗಳು ಇಲ್ಲದೆ ವಿಶ್ರಾಂತಿ ಪಡೆಯಲು ಕೆರೆ ಸಮೀಪದ ಕಟ್ಟೆಯಲ್ಲಿ ಕೂರಬೇಕಾಗಿದೆ.

ಮಕ್ಕಳ ಆಟಿಕೆಗಳಿಲ್ಲ: ಮಕ್ಕಳ ಮನೋರಂಜನೆಗಾಗಿ ಮಿನಿ ಪಾರ್ಕ್‌ ಮಾಡಲು ಜಾಗ ಬಿಡಲಾಗಿದೆ. ಆದರೆ ಈ ಜಾಗದಲ್ಲಿ ಮಕ್ಕಳ ಆಟದ ವಸ್ತುಗಳನ್ನು ಸಹ ಹಾಕಿರುವುದಿಲ್ಲ. ಕೂಡಲೇ ಇಲ್ಲಿ ಮಕ್ಕಳಿಗಾಗಿ ಮಿನಿ ಪಾರ್ಕ್‌ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

ಬೋಟಿಂಗ್‌ ವ್ಯವಸ್ಥೆ ಮಾಡಿ: ಹೊರ ಊರು ಗಳಿಂದಲೂ ಸಹ ಇಲ್ಲಿನ ಜನ ಇಲ್ಲಿಗೆ ಬರುತ್ತಿದ್ದು ಬೋಟಿಂಗ್‌ ವ್ಯವಸ್ಥೆ ಮಾಡಿದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಲ್ಲಿ ಅನುಮಾನವಿಲ್ಲ. ಬೋಟಿಂಗ್‌ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಲ್ಲಿ ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಸಹಾಯವಾಗುವುದು. ಈ ಹಿಂದೆ ನೀರಾವರಿ ಇಲಾಖೆ ವಶದಲ್ಲಿದ್ದ ಕೆರೆಯನ್ನು ಪುರಸಭೆಯ ಸುರ್ಪದಿಗೆ ನೀಡಲಾಗಿದೆ. ಕೆರೆ ಇನ್ನಾದರೂ ಅಭಿವೃದ್ಧಿ ಯಾಗುವುದೇ ಎಂದು ಕಾದು ನೋಡಬೇಕಾಗಿದೆ.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.