ಕಾಡಾನೆ ದಾಳಿ ತಡೆಗೆ ಅರಣ್ಯ ಇಲಾಖೆ ವಿಫಲ
Team Udayavani, Aug 23, 2021, 8:49 PM IST
ಸಕಲೇಶಪುರ: ತಾಲೂಕಿನ ವಿವಿಧೆಡೆ ಆನೆ ದಾಳಿ ಅವ್ಯಾಹತ ವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅದನ್ನುನಿಯಂತ್ರಿ ಸುವಲ್ಲಿ ವಿಫಲವಾಗುತ್ತಿದೆ.
ಇತ್ತೀಚೆಗಷ್ಟೇ ಮಠಸಾಗರ ಗ್ರಾಮದಲ್ಲಿ ಸಲಗ ಮೆಣಸಿನ ಬಳ್ಳಿ ಕಿತ್ತುಆರ್ಭಟಿಸಿದ್ದಲ್ಲದೆ ಮನೆಗೆ ನುಗ್ಗಲುಯತ್ನಿಸಿತ್ತು.ಇದಕ್ಕಿಂತಲೂ ಮುಂಚೆ ಇಂಥಅನೇಕ ಘಟನೆಗಳು ನಡೆದಿವೆ. ಆದರೆಇದರ ನಿಯಂತ್ರಣಕ್ಕೆ ಶಾಶ್ವತ ಎಂಬಂಥಸೂತ್ರವನ್ನು ಜಿಲ್ಲಾಡಳಿತ ಅಥವಾ ಅರಣ್ಯಇಲಾಖೆ ಮಾಡದಿರು ವುದು ಸ್ಥಳೀಯರಸಂಕಷ್ಟಕ್ಕೆ ಕಾರಣವಾಗಿದೆ.
ಸಿಟ್ಟಿಗೆದ್ದಕಾಡಾನೆಗಳುಕಾಫಿ ತೋಟ,ಬಾಳೆತೋಟ, ಅಡಿಕೆ ತೋಟಗಳನ್ನುಧ್ವಂಸ ಮಾಡಿ ರೈತರ ವಾರ್ಷಿಕ ಆದಾಯದ ಜತೆಗೆ ಆತನ ನಿತ್ಯ ಜೀವನಕ್ಕೂತೊಂದರೆ ನೀಡುತ್ತಿವೆ. ಮತೊಂದೆಡೆವಾರ್ಷಿಕವಾಗಿ ರೈತರು ಆನೆ ದಾಳಿಯಿಂದ ಅಸುನೀಗುತ್ತಿರುವ ಪ್ರಕರಣಗಳನ್ನೂ ತಳ್ಳಿ ಹಾಕುವಂತಿಲ್ಲ.
ಆನೆ ಮಾರ್ಗ ಪರಿಶೀಲನೆ: ಪ್ರತಿ ವರ್ಷಆನೆ ಯಾವ ಕಾಲದಲ್ಲಿ ಸಕಲೇಶಪುರಸೇರಿದಂತೆ ಜಿಲ್ಲೆಯಲ್ಲಿ ಲಗ್ಗೆ ಇಡುತ್ತವೆಎಂಬುದನ್ನು ಅರಣ್ಯ ಇಲಾಖೆಯು ಪತ್ತೆಮಾಡಿ, ಆನೆಗಳ ಹಿಂಡು ಯಾವಮಾರ್ಗದಲ್ಲಿ ಚಲಿಸಿ ಮತ್ತೆ ಯಾವಮಾರ್ಗದಲ್ಲಿ ಬರುತ್ತವೆ ಎಂಬುದನ್ನುಗುರುಸಿಕೊಂಡರೆ ಅನೆಗಳ ಹಿಂಡುಅದೇ ಮಾರ್ಗದಲ್ಲಿ ಮತ್ತೆ ಬರುವಸಂದರ್ಭವನ್ನು ಗುರುತಿಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಹಾಗೂನಿರ್ದಿಷ್ಟ ಪ್ರದೇಶದಲ್ಲಿ ಇರುವ ಗ್ರಾವುಗಳಿಗೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ. ಅಲ್ಲದೆ ಬೆಳೆಹಾನಿಮತ್ತು ಪ್ರಾಣ ಹಾನಿಯನ್ನೂತಡೆಯಬಹುದಾಗಿದೆ.
ಪರಿಹಾರ ನೀಡುವಲ್ಲಿ ವಿಳಂಬ:ಕಾಡಾನೆದಾಳಿಯಿಂದ ಅನೇಕ ಗ್ರಾಮಗಳಲ್ಲಿ ಬೆಳೆಹಾನಿ, ರೈತರ ಪ್ರಾಣಹಾನಿ ಸಂಭವಿಸಿದ್ದರೂ ಸಹ ಜಿಲ್ಲಾಡಳಿತ ಮತ್ತು ಅರಣ್ಯಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ಮೃತರ ಕುಟುಂಬಗಳಿಗೆಸಾಂತ್ವನ ನೀಡಿ ಹೋಗುತ್ತಾರೆಯೇಹೊರತು ಬಳಿಕ ಅವರಿಗೆ ಸರಿಯಾದರೀತಿಯಲ್ಲಿ ಪರಿಹಾರ ಸಿಕ್ಕಿದೆಯೇಎಂಬುದನ್ನು ನೋಡುವುದಿಲ್ಲ. ಇದರಿಂದ ರೈತಾಪಿ ಕುಟುಂಬಗಳು ಆರ್ಥಿಕನಷ್ಟವನ್ನು ಎದುರಿಸುವ ಜತೆಗೆ ಸೂಕ್ತಪರಿಹಾರವಿಲ್ಲದೆ ಸರ್ಕಾರಿ ಕಚೇರಿಗಳಿಗೆಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ ಸರ್ಕಾರಿ ಕಚೇರಿಗಳಿಗೂಹಣ ನೀಡಿ ಕೆಲಸ ಮಾಡಿಸಿಕೊಳ್ಳುವಪರಿಸ್ಥಿತಿ ಎದುರಾಗಿದೆ.ಇತರೆ ಪ್ರಾಣಿಗಳಿಂದಲೂ ತೊಡಕು:ಕಾಡಾನೆ ಒಂದೇ ದಾಳಿ ಮಾಡುವುದಿಲ್ಲ.ಚಿರತೆ, ಕರಡಿಯಂಥ ಪ್ರಾಣಿಗಳುಆಗಾಗ್ಗೆ ಗ್ರಾಮಗಳಿಗೆ ಲಗ್ಗೆಯಟ್ಟು ಜನರಲ್ಲಿ ಆತಂಕ ಮೂಡಿಸುತ್ತಿರುತ್ತವೆ. ಇದರಿಂದ ಅರಣ್ಯ ತೀರದ ಗ್ರಾಮಗಳಲ್ಲಿಸಾರ್ವಜನಿಕರು ಒಬ್ಬಂಟಿಯಾಗಿಒಡಾಟ ನಡೆಸಲು ಭಯಪಡುವಂತಾಗಿದೆ.
ಇನ್ನೂ ಇದೇ ಸಮಯವನ್ನುಲಾಭವಾಗಿಸಿಕೊಂಡು ಕಾಡಂಚಿನಲ್ಲಿವನ್ಯ ಮೃಗಗಳನ್ನು ಬೇಟೆಯಾಡುವಪ್ರವೃತ್ತಿಯೂ ಅಲ್ಲಲ್ಲಿಕಂಡು ಬರುತ್ತಿದೆ.ಆದರೂ ಮಾನವ – ಪ್ರಾಣಿಸಂಘರ್ಷದಲ್ಲಿ ಕಾಡು ಪ್ರಾಣಿಗಳ ರಕ್ಷಣೆಪಡೆಯುವಲ್ಲಿ ಸರ್ಕಾರದ ಇಲಾಖೆಗಳುಮತ್ತಷ್ಟು ಶ್ರಮವಹಿಸಿ ನಾಗರರಿಕರರಕ್ಷಣೆ ಮುಂದಾಗಬೇಕು ಎಂಬುದುಸ್ಥಳೀಯ ಗ್ರಾಮಸ್ಥರ ಅಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.