ಸಕಲೇಶಪುರ: ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ
15-20 ಕಾಡಾನೆಯಿಂದ ಜಮೀನಿನಲ್ಲಿ ದಾಂಧಲೆ ಕೆರೆಗೆ ಇಳಿದ ಪರಿಣಾಮ ಮೀನುಗಳೂ ಸಾವು: ಲಕ್ಷಾಂತರ ರೂ.ನಷ್ಟ
Team Udayavani, Oct 20, 2021, 3:54 PM IST
ಸಕಲೇಶಪುರ: ಕಾಡಾನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿ ರುವು ದಲ್ಲ ದೆ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಾಳ್ಳುಪೇಟೆ ಸಮೀಪದ ಚಿಕ್ಕನಾಯಕ ನಹಳ್ಳಿ ಗ್ರಾಮದ ಸುರೇಶ್ ಎಂಬವರ ಸುಮಾರು 2 ಎಕರೆ ಭತ್ತದ ಗದ್ದೆಯಲ್ಲಿ ಸೋಮವಾರ ರಾತ್ರಿ ಸುಮಾರು 15ರಿಂದ 20 ಕಾಡಾನೆ ದಾಂಧಲೆ ನಡೆಸಿ ಗದ್ದೆಯನ್ನು ಸಂಪೂರ್ಣ ನಾಶ ಪಡಿಸಿದೆ.
ಇದಿಷ್ಟು ಸಾಲದಂತೆ ಕೆರೆಯಲ್ಲಿ ಕಾಡಾನೆಗಳು ಮೋಜುಮಸ್ತಿಗೆ ಇಳಿದ ಪರಿಣಾಮ ಕೆರೆಯಲ್ಲಿ ಸಾಕಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ಮೀನು ಮೃತಪಟ್ಟಿವೆ. ಮೀನುಗಳ ಸಾವಿನಿಂದ ಸುಮಾರು 8 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದ್ದು ರೈತ ಸುರೇಶ್ ಆತಂಕಕ್ಕೀಡಾಗಿದ್ದಾರೆ.
ಆತಂಕ: ಸ್ಥಳಕ್ಕೆ ಭೇಟಿ ನೀಡಿದ್ದ ಕಾಡಾನೆ ಹಾವಳಿ ಹೋರಾಟ ಸಂತ್ರಸ್ತರ ಸಮಿತಿ ಮುಖಂಡ ಯಡೆಹಳ್ಳಿ ಮಂಜುನಾಥ್, ಕಳೆದ 15ವರ್ಷಗಳಿಂದ ಕಾಡಾನೆಗಳ ಸಮಸ್ಯೆ ಬಗೆಹರಿಸುವಂತೆ ಹೋರಾಟ ಮಾಡಿದರೂ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಸಂಘಟನೆಗಳು ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿದ್ದು ಯಾರೂ ಗಮನಹರಿಸುತ್ತಿಲ್ಲ. ಹಗಲಿಡಿ ಕಷ್ಟಪಟ್ಟು ದುಡಿಯುವ ರೈತರು ಬೆಳಗ್ಗೆ ತೋಟಗಳಿಗೆ ಬರುವಷ್ಟರಲ್ಲಿ ಜಮೀನುಗಳು ಕಾಡಾನೆಗಳಿಂದ ಹಾನಿ ಗೀಡಾ ಗುತ್ತಿರುವುದು ಆತಂಕ ತಂದಿದೆ ಎಂದರು.
ಪರಿಹಾರ ಕಂಡು ಹಿಡಿಯಿರಿ: ರೈತರಿಗೆ ಕನಿಷ್ಠ ಸಾಂತ್ವನ ಹಾಗೂ ಪರಿಹಾರ ನೀಡುವಲ್ಲಿಯೂ ತಾಲೂಕು ಆಡಳಿತ ವಿಫಲಗೊಂಡಿದೆ. ಈ ಹಿನ್ನೆಲೆ ಸ್ಥಳದಲ್ಲೇ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಎಂಬ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಕಾಡಾನೆ ಹಾವಳಿ ಇರುವ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಮುಂದಾಗಬೇಕಾಗಿದೆ.
ರೈತರು ಕಾಡಾನೆಗಳ ಕಾಟದಿಂದ ಕೃಷಿ ತೊರೆಯುತ್ತಿರುವುದು ಅಲ್ಲದೆ ಹಲವು ರೈತರು ಸಾಲಗಾರರಾಗಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿರುವುದು ಆತಂಕಕಾರಿ. ಈ ಹಿನ್ನೆಲೆಯಲ್ಲಿ ಜಿÇÉಾಧಿಕಾರಿಗಳು ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದರು. ನೆರವು ನೀಡಿ: ಕಾಡಾನೆ ಹಾವಳಿಯಿಂದ ನಷ್ಟಕ್ಕೀಡಾದ ರೈತ ಚಿಕ್ಕನಾಯಕನಹಳ್ಳಿ ಸುರೇಶ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಕಾಡಾನೆಗಳ ಸಮಸ್ಯೆ ವಿಪರೀತವಾಗಿದ್ದು ತನ್ನ 2 ಎಕರೆ ಗದ್ದೆಯಲ್ಲಿ ದಾಂಧಲೆ ಮಾಡಿ ಬೆಳೆ ನಾಶಪಡಿಸಿವೆ. ಅಲ್ಲದೇ ಕೆರೆಯಲ್ಲಿ ಸಾಕಿದ್ದ ಸುಮಾರು 10 ಸಾವಿರ ಕ್ಯಾಟ್ ಲಾಕ್ ಮೀನುಗಳನ್ನು ಕಾಡಾನೆಗಳು ತುಳಿದು ಹಾಕಿದ್ದು ತಾಲೂಕು ಆಡಳಿತ ಇತ್ತ ಗಮನಹರಿಸಿ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದರು. ರೈತ ಸೋಮಶೇಖರ್, ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.