Sakleshpura: ಅಂತಿಮವಾಗದ ಜಾತ್ರಾ ಮಹೋತ್ಸವ ಸ್ಥಳ
Team Udayavani, Feb 15, 2024, 5:05 PM IST
ಸಕಲೇಶಪುರ: ಸಕಲೇಶ್ವರಸ್ವಾಮಿ ರಥೋತ್ಸವಕ್ಕೆ ಕೇವಲ 2 ವಾರಗಳು ಮಾತ್ರ ಬಾಕಿಯಿದ್ದು, ರಥೋತ್ಸವದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಜಾಗವನ್ನು ಅಂತಿಮಗೊಳಿಸುವಲ್ಲಿ ಪುರಸಭಾ ಆಡಳಿತ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮತ್ತೂಮ್ಮೆ ಹೈಕೋರ್ಟ್‌ನಲ್ಲಿ ದಾವೆ: ಜಿಲ್ಲೆ, ರಾಜ್ಯದಲ್ಲಿ ಹೆಸರುವಾಸಿಯಾದ ಸಕಲೇಶ್ವರಸ್ವಾಮಿರವರ ರಥೋತ್ಸವದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವ ಸಾಂಪ್ರಾದಾಯಿಕವಾಗಿ ಸುಭಾಷ್ ಮೈದಾನದ ಪಕ್ಕದಲ್ಲಿರುವ ಜಾತ್ರಾ ಮೈದಾನದಲ್ಲಿ ಪ್ರತಿ ವರ್ಷ ನಡೆಯುತಿತ್ತು. ಆದರೆ, ಪುರಸಭೆ ಹಾಗೂ ಆಡಳಿತದ ನಿರ್ಲಕ್ಷ್ಯದಿಂದ ಹಲವು ವರ್ಷಗಳ ಕಾಲ ನ್ಯಾಯಾಲಯದಲ್ಲಿದ್ದ ಜಾತ್ರಾ ಮೈದಾನದ ಪ್ರಕರಣ ಖಾಸಗಿ ವ್ಯಕ್ತಿಯೊಬ್ಬರ ಪರವಾಗಿ ತೀರ್ಪು ಬಂದಿದ್ದರಿಂದ ಜಾತ್ರಾ ಮೈದಾನದ ಮಾಲೀಕತ್ವ ಪುರಸಭೆಯಿಂದ ತಪ್ಪಿ ಹೋಗಿದ್ದು, ಇದೀಗ ಇದರ ವಿರುದ್ಧ ಮತ್ತೂಮ್ಮೆ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಈ ಪ್ರಕರಣ ಸದ್ಯಕ್ಕೆ ಬಗೆಹರಿಯುವುದು ಅನುಮಾನವಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದ ಸಮೀಪ ಜಾಗವಿಲ್ಲದಂತಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಸುಭಾಷ್ ಮೈದಾನದ ಒಂದು ಭಾಗದಲ್ಲಿ ಜಾತ್ರೆ ನಡೆಸಲು ಪುರಸಭೆಯ ಆಡಳಿತದೊಂದಿಗೆ ತೀರ್ಮಾನಿಸಿದ್ದರು. ಅಲ್ಲದೇ, ಪ್ರತಿ ವರ್ಷ ಜಾತ್ರೆಗೆ ಹೆಚ್ಚಿನ ಮೊತ್ತಕ್ಕೆ ಬಹಿರಂಗ ಹರಾಜು ಆಗವುದರಿಂದ ವಿವಿಧ ಮನೋರಂಜನೆ ಅಮ್ಯೂಸ್‌ಮೆಂಟ್‌ಗಳ ದರವು ಹೆಚ್ಚುತ್ತಿತ್ತು. ಇದರಿಂದ ಬಡವರು, ಜನಸಾಮಾ ನ್ಯರಿಗೆ ಅನಾನುಕೂಲವಾಗುತ್ತಿತ್ತು.
ಪರ್ಯಾಯ ಜಾಗವಿಲ್ಲ: ಶಾಸಕರು ಮನೋರಂಜನೆ ಅಮ್ಯೂಸ್‌ಮೆಂಟ್‌ಗಳಿಗೆ 50 ರೂ. ಗಳಷ್ಟೇ ದರ ನಿಗದಿ ಮಾಡಿ ಜಾತ್ರೆ ಮಾಡಲು ಬೇರೆಡೆ ಸರಿಯಾದ ಜಾಗವಿಲ್ಲದ ಕಾರಣ ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸಲು ಇ.ಪ್ರೊಕ್ಯೂರ್‌ವೆುಂಟ್ ಮುಖಾಂತರ ಟೆಂಡರ್ ನಡೆಸಲು ತೀರ್ಮಾನ ಕೈಗೊಂಡರು. ಆದರೆ, ಸುಭಾಷ್ ಮೈದಾನ ಯುವಜನ ಕ್ರೀಡಾ ಇಲಾಖೆಯಡಿ ಬರುವುದರಿಂದ ಇ ಪುರಸಭೆ ವತಿಯಿಂದ ಇಲ್ಲಿ ಜಾತ್ರೆ ಮಾಡಲು ಅವಕಾಶವಿರುವು ದಿಲ್ಲ. ಅಲ್ಲದೇ, ಸುಭಾಷ್ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಸಹ ಕ್ರೀಡಾಪಟುಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಜಾತ್ರೆ ನಡೆಸಲು ಪರ್ಯಾಯ ಜಾಗವಿಲ್ಲಂದತಾಗಿದೆ. ಇ ಪ್ರೊಕ್ಯೂರ್‌ವೆುಂಟ್ ಮುಖಾಂತರ ಟೆಂಡರ್ ಪ್ರಕ್ರಿಯೆ ನಡೆಸಲು ಪುರಸಭೆ ಮುಂದಾಗಿದ್ದು, ಆದರೆ ಪುರಸಭೆಯವರು ಟೆಂಡರ್‌ನಲ್ಲಿ ಜಾತ್ರೆ ನಡೆಸುವ ಸ್ಥಳದ ಕುರಿತು ಯಾವುದೇ ಮಾಹಿತಿ ಕೊಡದೇ ಟೆಂಡರ್ ಕರೆದಿದ್ದಾರೆ.
ಜಾತ್ರೆ ಎಲ್ಲಿ ನಡೆಯುತ್ತದೆಂಬ ಬಗ್ಗೆ ಗೊಂದಲ: ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸಲು ಕೆಲವರು ವಿರೋಧ ಮಾಡಿದ್ದರಿಂದ ಜಾತ್ರೆ ಎಲ್ಲಿ ನಡೆಸುವುದು ಎಂಬುದರ ಬಗ್ಗೆ ಪುರಸಭೆಯ ಆಡಳಿತ ತೀರ್ಮಾ ನಿಸಿಲ್ಲ. ಪುರಸಭೆ ಆಡಳಿತ ಪ್ರಸ್ತುತ ಉಪವಿಭಾಗಾಧಿಕಾರಿ, ಶಾಸಕರು, ಮುಖ್ಯಾಧಿಕಾರಿ ಬಳಿಯಿದ್ದು, ಅಧ್ಯಕ್ಷರ ಆಯ್ಕೆಗೆ ಸರ್ಕಾರ ಮೀಸಲಾತಿ ನಿಗದಿ ಮಾಡದ ಕಾರಣ ಸದಸ್ಯರಿಗೆ ಅಧಿಕಾರ ಇದ್ದು ಇಲ್ಲದಂತಾಗಿದೆ.
ಅಪಸ್ವರ: ಕೆಲ ಪುರಸಭಾ ಸದಸ್ಯರು ಖಾಸಗಿ ಜಾಗದಲ್ಲಿ ಜಾತ್ರೆಗೆ ಅನುಮತಿ ಕೊಡಬೇಕೆಂದು ಉಪವಿಭಾಗಾ ಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಆದರೆ, ಖಾಸಗಿ ಜಾಗಕ್ಕೆ ಬಾಡಿಗೆ ಹಣ ನೀಡುವುದಕ್ಕೆ ಸಾರ್ವಜನಿಕರಿಂದ ಅಪಸ್ವರ ಕೇಳಿ ಬಂದಿದೆ. ಉಪವಿಭಾಗಾಧಿಕಾರಿಗಳು ಎಪಿಎಂಸಿ ಆವರಣದಲ್ಲಿ ಜಾತ್ರೆ ನಡೆಸಲು ಆಸಕ್ತಿ ತೋರಿದ್ದು, ಇನ್ನು ಕೆಲವು ಸದಸ್ಯರು ಖಾಸಗಿ ಜಾಗದಲ್ಲಿ ಜಾತ್ರೆ ನಡೆಸಲು ಆಸಕ್ತಿ ತೋರುತ್ತಿದ್ದು, ಶಾಸಕರು ಸುಭಾಷ್ ಮೈದಾನದ ಒಂದು ಭಾಗದಲ್ಲಿ ಜಾತ್ರೆ ನಡೆಸಲು ಆಸಕ್ತಿ ತೋರಿದ್ದಾರೆ.
ಒಮ್ಮತದ ತೀರ್ಮಾನ ಕೈಗೊಂಡು ಅಂತಿಮಗೊಳಿಸಲಿ: ಕೆಲವರು ಹೊಳೆಮಲ್ಲೇಶ್ವರ ದೇವಸ್ಥಾನದ ಸಮೀಪದ ಹೇಮಾವತಿ ನದಿ ದಂಡೆಯಲ್ಲಿ ತೀರ್ಥಹಳ್ಳಿಯಲ್ಲಿ ನಡೆಯುವ ಜಾತ್ರೆಯಂತೆ ನಡೆಸಬೇಕೆಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಹೇಮಾವತಿ ನದಿ ದಂಡೆಯಲ್ಲಿ ಜಾತ್ರೆ ಮಾಡಿದರೆ ಹೆದ್ದಾರಿಯಲ್ಲಿ ತಿರುಗಾಡುವ ಅನ್ಯ ಊರಿನ ಜನರು ಜಾತ್ರೆಗೆ ಬರುವುದರಲ್ಲಿ ಅನುಮಾನವಿಲ್ಲ. ಹೊಳೆಮಲ್ಲೇಶ್ವರ ದೇವಸ್ಥಾನದ ವತಿಯಿಂದ ಪ್ರತಿವರ್ಷ ನಡೆಯುವ ಶಿವರಾತ್ರಿ ಮಹೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳು ಆಗಮಿಸುತ್ತಾರೆ.
ಇದೇ ರೀತಿ ಜಾತ್ರಾ ಮಹೋತ್ಸವವನ್ನು ಇಲ್ಲಿ ನಡೆಸಿದರೆ ಬಹಳ ಚೆನ್ನಾಗಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೂಡಲೇ ಶಾಸಕರು, ಉಪವಿಭಾಗಾಧಿಕಾರಿಗಳು ಒಟ್ಟಿಗೆ ಕುಳಿತು ಒಮ್ಮತದ ತೀರ್ಮಾನಕ್ಕೆ ಬಂದು ಜಾತ್ರೆ ನಡೆಯುವ ಜಾಗವನ್ನು ಅಂತಿಮಗೊಳಿಸಬೇಕಾಗಿದೆ. ಜಾತ್ರೆಯಿಂದ ಬರುವ ಆದಾಯವನ್ನು ಸುಭಾಷ್ ಮೈದಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಮ್ಯೂಸ್ ಮೆಂಟ್‌ಗಳಿಗೆ ಕೇವಲ 50 ರೂ. ದರ ನಿಗದಿ ಮಾಡಿದ್ದು, ಇದು ಜನಸಾಮಾನ್ಯರಿಗೆ ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸಲು ಎಲ್ಲರೂ ಸಹಕರಿಸಬೇಕು. – ಸಿಮೆಂಟ್ ಮಂಜು, ಶಾಸಕರು
ಎಪಿಎಂಸಿ ಜಾಗ ಸರ್ಕಾರದ ಸ್ವತ್ತಾಗಿರು ವುದರಿಂದ ಸದರಿ ಜಾಗದಲ್ಲಿ ಜಾತ್ರಾ ಮಹೋತ್ಸವ ನಡೆಸಬಹುದಾಗಿದೆ. ಒಟ್ಟಾರೆ ಜಾತ್ರಾ ಮಹೋತ್ಸವ ನಡೆಸಲು ಸೂಕ್ತ ಜಾಗದ ಕುರಿತು ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಡಾ.ಶ್ರುತಿ, ಉಪವಿಭಾಗಾಧಿಕಾರಿ
ಸುಭಾಷ್ ಮೈದಾನ ದಲ್ಲಿ ಜಾತ್ರೆ ನಡೆ ಸುವುದು ಸರಿಯಲ್ಲ, ಕ್ರೀಡಾಪಟು ಗಳಿಗೆ ಕ್ರೀಡಾಭ್ಯಾಸ ಮಾಡಲು ಸೂಕ್ತ ಸ್ಥಳವಿಲ್ಲದಂತಾಗಿದೆ. ಪುರಸಭೆಯ ಆಡಳಿತ ಜಾತ್ರೆಯನ್ನು ನಡೆಸಲು ಸೂಕ್ತ ಜಾಗ ಹುಡುಕಬೇಕು. -ದಿನೇಶ್, ಕ್ರೀಡಾಪಟು
– ಸುಧೀರ್ ಎಸ್.ಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.