ಸಂತೇಶಿವರ: ಹಾಲು ಉತ್ಪಾದಕರ ಪ್ರತಿಭಟನೆ
Team Udayavani, Jun 8, 2020, 7:54 AM IST
ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಸಂತೇಶಿವರ ಗೇಟ್‌ನ ಹಾಲು ಉತ್ಪಾದಕರ ಸಹಕಾರ ಸಂಘದ ಬಾಗಿಲಿಗೆ ಬೀಗ ಹಾಕಿ ಕಳೆದ ಮೂರು ದಿನದಿಂದ ಹಾಲು ಪಡೆಯದೇ ತಲೆ ಮರೆಸಿಕೊಂಡಿರುವ ಕಾರ್ಯದರ್ಶಿ ಚಕ್ರಪಾಣಿ ವಿರುದ್ಧ ಉತ್ಪಾದಕರು ಹಾಗೂ ತಾಲೂಕು ರೈತ ಸಂಘದ ಸದಸ್ಯರು ಧರಣಿ ನಡೆಸಿದರು.
ಸಂಘದಲ್ಲಿ 200ಕ್ಕೂ ಹೆಚ್ಚು ಸದಸ್ಯರಿದ್ದು, ಪ್ರತಿ ನಿತ್ಯ 2,650ರಿಂದ 2,750 ಲೀ. ಹಾಲು ಉತ್ಪಾದನೆಯಾಗು ತ್ತಿದೆ. ಆದರೆ ಮೂರು ದಿನದಿಂದ ಸಂಘದ ಬಾಗಿಲಿಗೆ ಬೀಗ ಹಾಕಿರುವ ಪರಿಣಾಮ 8 ಸಾವಿರ ಲೀ. ಹಾಲು ಹಾಳಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂತೇಶಿವರ, ರಾಂಪುರ, ದೇವಲಾಪುರ, ನರೇನಹಳ್ಳಿ, ಹೊಸಹಳ್ಳಿ, ನವಿಲೇಗೇಟ್, ಹೊಸೂರು ಹಾಗೂ ನಾಗೇನ ಹಳ್ಳಿ ಸೇರಿದಂತೆ ಎಂಟು ಗ್ರಾಮದಿಂದ ನೂರಾರು ಮಂದಿ ಹಾಲು ಹಾಕುತ್ತಿದ್ದಾರೆ.
ರಾಂಪುರ ಗ್ರಾಮದ ಚಕ್ರಪಾಣಿ ಈ ಸಂಘದ ಕಾರ್ಯದರ್ಶಿಯಾಗಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಹಾಲು ಅಳೆಯುವ ವಿಚಾರದಲ್ಲಿ ಕಾರ್ಯದರ್ಶಿ ಹಾಗೂ ಉತ್ಪಾದಕರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು ಎಂದು ಪ್ರತಿಭಟನಾಕಾರರು ದೂರಿದರು. 15 ವರ್ಷದಿಂದ ಸಂತೇಶಿವರ ಹಾಗೂ ರಾಂಪುರ ಗ್ರಾಮಗಳಲ್ಲಿಯೇ ಹಾಲನ್ನು ಅಳೆದು ಖಾಸಗಿ ವಾಹನದ ಮೂಲಕ ಸಂಘಕ್ಕೆ ತರಲಾಗುತಿತ್ತು.
ಆದರೆ ಇತ್ತೀಚೆಗೆ ಸಂಘದ ಕಾರ್ಯದರ್ಶಿ ಸಂತೇಶಿವರ ಗ್ರಾಮದ ಉತ್ಪಾದಕರು ನೇರ ಸಂಘಕ್ಕೆ ತಂದು ಹಾಲನ್ನು ಹಾಕುವಂತೆ ತಾಕೀತು ಮಾಡುತ್ತಿದ್ದರು ಎಂದು ಆಪಾದಿಸಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ರಂಗಶೆಟ್ಟಿ, ನಿರ್ದೇಶಕರಾದ ಗುರುಮೂರ್ತಿ, ರಾಮೇಗೌಡ, ರಾಮಶೆಟ್ಟಿ, ಮರುಳಪ್ಪಶೆಟ್ಟಿ, ಧರಣಿಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.