ತಂತ್ರಜ್ಞಾನ ಅಳವಡಿಸಿ ಕನ್ನಡ ಉಳಿಸಿ-ಬೆಳೆಸಿ; ಟಿ.ಎಸ್. ನಾಗಾಭರಣ
ಇಂಗ್ಲಿಷ್ ಭಾಷಾ ವ್ಯಾಮೋಹ ದಿಂದ ಕನ್ನಡಕ್ಕೆ ಧಕ್ಕೆ ಎದುರಾಗಿದೆ.
Team Udayavani, Mar 31, 2022, 5:48 PM IST
ಹಾಸನ: ಭವಿಷ್ಯದಲ್ಲಿ ಕನ್ನಡದ ಉಳಿವಿಗೆ ತಂತ್ರಜ್ಞಾನ ದೊಂದಿಗೆ ಕನ್ನಡ ಜೋಡಣೆ ಕೆಲಸ ಆಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.
ಹಾಸನದ ಹೊರ ವಲಯ ಬೂವನಹಳ್ಳಿಯಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿರುವ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಯ ಆಸ್ಮಿತೆ ಉಳಿಯಬೇಕಾದರೆ ನೆನಪು ಗಳನ್ನು ಅಳಿಸಿ ಹಾಕುತ್ತಿರುವ ಯಾಂತ್ರಿಕ ಬದುಕಿನ ವಿರುದ್ಧ ಹೋರಾಡುತ್ತಲೇ ನಮ್ಮತನ ಹೆಚ್ಚು ಮಾಡಿ ಕೊಳ್ಳಬೇಕು. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ಬದುಕನ್ನು ಆವರಿಸುತ್ತದೆ. ಅಂತಹ ಸಂದರ್ಭದಲ್ಲಿ ಮಾನವೀಯತೆ, ಕಲೆ, ಸಾಹಿತ್ಯ, ನೃತ್ಯ, ನಾಟಕ, ಸಿನಿಮಾ ಸೇರಿದಂತೆ ಅಂತರ್ ಸಂಬಂಧಿ ವಿಷಯ ಗಳನ್ನು ಕನ್ನಡದ ಪರವಾದ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡದ ಕಲಿಕೆ, ಬಳಕೆ ನಿರಂತರವಾಗಿರಲಿ: ಹಾಸನ ಜಿಲ್ಲೆಯು ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಹಲವು ಬಾರಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಅಂತಹ ದೊಡ್ಡ ಪಟ್ಟಿಯೇ ಇದೆ. ಅಂತಹ ಪಟ್ಟಿಗೆ ಇಂದಿನ ಯುವ ಜನರು ಸೇರಬೇಕು. ಅ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಹಿತ್ಯಾ ಭಿರುಚಿ ಬೆಳಸಬೇಕು. ನಿರಂತರ ಕನ್ನಡದ ಕಲಿಕೆ ಮತ್ತು ಬಳಕೆ ನಮ್ಮ ಕಾಯಕವಾಗಬೇಕು. ಆಗ ಮಾತ್ರ ಕನ್ನಡ ಬೆಳೆಯುತ್ತದೆ ಎಂದರು.
ಕನ್ನಡದಲ್ಲೇ ವ್ಯವಹರಿಸಿ: ಸಾಹಿತ್ಯ ಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ, 2500 ವರ್ಷಗಳ ಇತಿಹಾಸ ವನ್ನು ಕನ್ನಡ ಹೊಂದಿರುವುದು ಕನ್ನಡಿಗರಾದ ನಮಗೆ ಹೆಮ್ಮೆ. ಕನ್ನಡ ಉಳಿಯಬೇಕಾದರೆ ಬಳಸಬೇಕು. ಆ ನಿಟ್ಟಿ ನಲ್ಲಿ ಪರಭಾಷೆಯವರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ಕನ್ನಡದ ಆಸ್ಮಿತೆ ಎತ್ತಿ ಹಿಡಿಯಬೇಕು ಎಂದರು.
ಭಾಷ ಅಭಿಮಾನವಿರಲಿ: ಜಿಪಂ ಸಿಇಒ ಕಾಂತರಾಜ್ ಅವರು ಮಾತನಾಡಿ, ಇಂಗ್ಲಿಷ್ ಭಾಷಾ ವ್ಯಾಮೋಹ ದಿಂದ ಕನ್ನಡಕ್ಕೆ ಧಕ್ಕೆ ಎದುರಾಗಿದೆ. ಕನ್ನಡಿಗರು ಕೀಳ ರಮೆ ಬಿಟ್ಟು ಕನ್ನಡದಲ್ಲಿಯೇ ಮಾತನಾಡಿ, ಭಾಷಾಭಿ ಮಾನ ಮೆರೆಯಬೇಕು ಎಂದರು.
ಬೂವನಹಳ್ಳಿಹಿರಿಮೆ: ಬೂವನಹಳ್ಳಿಯ ಮುಖಂಡ, ಮಾಜಿ ಶಾಸಕ ಬಿ.ವಿ.ಕರೀಗೌಡ ಅವರು ಮಾತನಾಡಿ, ಇಬ್ಬರು ಶಾಸಕರನ್ನು ಕೊಟ್ಟ ರಾಜಕೀಯ ಪ್ರಭಾವದ, ಶಿಕ್ಷಣಕ್ಕೆ ಕೊಡುಗೆ ನೀಡಿದ ಬೂವನಹಳ್ಳಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆ ಹೆಮ್ಮೆ. ಸಮ್ಮೇಳನವು ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಇತಿಹಾಸ ನಿರ್ಮಾಣ: ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್,ಮಲ್ಲೇಶಗೌಡ ಅವರು ಪ್ರಾಸ್ತಾವಿನ ನುಡಿಗಳನ್ನಾಡಿ, ಗ್ರಾಮೀಣ ಪ್ರದೇಶಕ್ಕೆ ಕಸಾಪ ಕೊಂಡೊ ಯ್ಯುವುದಾಗಿ ಚುನಾವಣೆ ವೇಳೆ ಹೇಳಿದ್ದಕ್ಕೆ ಪೂರಕ ವಾಗಿ ಈಗ ಬೂವನಹಳ್ಳಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಪರಿಷತ್ತಿನ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ ಎಂದು ಹೇಳಿದರು.
ನಿಕಟಪೂರ್ವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮೇಟಿಕೆರೆ ಹಿರಿಯಣ್ಣ, ಕೆಆರ್‌ಡಿಸಿಎಲ್ ಉಪಾಧ್ಯಕ್ಷ ಜಿವಿಟಿ ಬಸವರಾಜು ಅವರು ಮಾತನಾಡಿದರು. ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ ದರು. ಜಿಲ್ಲಾಕಸಾಪ ಗೌರವಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಅವರು ಸ್ವಾಗತಿಸಿದರು. ಮತೋರ್ವ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪರಿಚಯ ನೀಡಿದರು.
ಕಸಾಪ ನಿಕಟಪೂರ್ವ ಜಿಲ್ಲಾಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಯರಾಮ್,ಜಿಪಂ ಮಾಜಿ ಅಧ್ಯಕ್ಷ ಸ್ವಾಮಿಗೌಡ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚ.ನಾ ಅಶೋಕ್. ಜಿಲ್ಲಾ ಕಸಾಪ ಕೋಶಾದ್ಯಕ್ಷ ಬಿ.ಎನ್.ಜಯರಾಂ, ಆರ್. ಶಂಕರ್, ಕೆ.ಟಿ. ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು. ಎಚ್.ಕೆ. ಲಕ್ಷ್ಮಿನಾರಾಯಣ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.