ಶಾಲೆಗೆ ನೀಡಿದ ಸ್ಥಳ ಹಿಂಪಡೆಯಲು ಯತ್ನ: ಪ್ರತಿಭಟನೆ
Team Udayavani, Oct 14, 2021, 6:21 PM IST
ಸಕಲೇಶಪುರ: ಕುಟುಂಬದ ಹಿರಿಯರು ದಾನ ನೀಡಿರುವ ಶಾಲಾ ಜಾಗವನ್ನು ಪುನಃ ಹಿಂಪಡೆ ಯಲು ಯತ್ನಿಸುತ್ತಿರುವ ಮಾಜಿ ಶಾಸಕ ಬಿ.ಆರ್ ಗುರುದೇವ್ ರವರಿಗೆ ಶಾಲೆಯ ಒಂದಿಂಚು ಜಾಗವನ್ನು ಯಾವುದೆ ಕಾರಣಕ್ಕೂ ಬಿಟ್ಟುಕೊಡು ವುದಿಲ್ಲ ಎಂದು ಹಿರಿಯ ಹೋರಾಟಗಾರ ಬಾಳ್ಳುಗೋಪಾಲ್ ಹೇಳಿದರು. ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಬಿ. ಸಿದ್ದಣ್ಣಯ್ಯ ಪ್ರೌಡಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಬಾಳ್ಳುಪೇಟೆಯಲ್ಲಿ ಆಯೋ ಜಿಸಲಾಗಿದ್ದ ಶಾಲೆಯ ಜಾಗವನ್ನು ಉಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಗಾಗಿ ಭೂಮಿ ದಾನ: 1970 ರ ದಶಕ ದಲ್ಲಿ ಬಾಳ್ಳುಪೇಟೆ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ಪ್ರೌಡಶಾಲೆ ಇಲ್ಲದ್ದನ್ನು ಗಮನಿಸಿದ್ದ ಅಂದಿನ ಸಮಾಜ ಸೇವಕರಾದ ಬಿ.ಜಿ ಗುರುಪ್ಪ ಗೌಡ 1971ರಲ್ಲಿ ಪ್ರೌಡಶಾಲೆ ಸ್ಥಾಪನೆಗೆ ಗ್ರಾಮ ದಲ್ಲಿ ಸುಮಾರು 4.39ಗುಂಟೆ ಜಮೀನನ್ನು ದಾನವಾಗಿ ನೀಡಿದ್ದು ದಾನವಾಗಿ ನೀಡಿದ ಜಾಗ ದಲ್ಲಿ ಮತ್ತೂರ್ವ ಸಮಾಜಸೇವಕ ಸಿದ್ದಣ್ಣಯ್ಯ ಎಂಬುವವರು ಶಾಲಾ ಕಟ್ಟಡ ಕಟ್ಟಿಸಿದ್ದರು. ಅಂದಿನಿಂದ ಗ್ರಾಮಸ್ಥರು 15 ಜನರ ಟ್ರÓr… ರಚಿಸಿಕೊಂಡು ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಶಾಲೆ ಮುನ್ನೆಡೆಸುತ್ತಿದ್ದಾರೆ.
ಇದರಿಂದಾಗಿ ಈ ಭಾಗದ ಸಾವಿರಾರು ವಿದ್ಯಾರ್ಥಿಗಳ ಬದುಕು ಬದಲಿಸಿದೆ, ಸಿದ್ದಣ್ಣಯ್ಯ ಶಾಲೆ ಇರುವ ಕಾರಣಕ್ಕೆ ಸರ್ಕಾರವು ಈ ಭಾಗದಲ್ಲಿ ಪ್ರೌಡಶಾಲೆ ಮಂಜೂರು ಮಾಡಿಲ್ಲ. ಆದರೆ, ಬಿ.ಜಿ ಗುರಪ್ಪಗೌಡ ದಾನ ನೀಡಿದ ಜಮೀನನ್ನು ಈಗ ಅವರ ಪುತ್ರರಾದ ಮಾಜಿ ಶಾಸಕ ಬಿ.ಆರ್ ಗುರುದೇವ್ ವಾಪಸ್ ಬಿಟ್ಟುಕೊಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಟ್ರÓr… ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮಾಜಿ ಶಾಸಕ ಉಪಟಳ: ವಿಷಯ ಕೋರ್ಟ್ ನಲ್ಲಿದ್ದರೂ ನ್ಯಾಯಾಲಯಕ್ಕೆ ಕಳೆದ ಕೆಲವು ದಿನಗಳ ಹಿಂದೆ ರಜೆ ಇರುವುದನ್ನು ಗಮನಿಸಿದ ಮಾಜಿ ಶಾಸಕರು ಹತ್ತಾರು ಕೂಲಿ ಕಾರ್ಮಿಕ ರಿಂದ ಶಾಲೆಯ ಸುತ್ತಲಿನ ಜಾಗವನ್ನು ಅತಿ ಕ್ರಮಿಸಿ ಹಾನಿಮಾಡಿದ್ದಾರೆ. ಗ್ರಾಪಂನಿಂದ ಯಾವುದೇ ಅನುಮತಿ ಪಡೆಯದೆ ಶಾಲೆಯ ಸುತ್ತಲೂ ಬೃಹತ್ ಬೇಲಿ ನಿರ್ಮಿಸಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ನೂರಾರು ಬೆಲೆಬಾಳುವ ಮರಗಳನ್ನು ಕಡಿದಿದ್ದಾರೆ.
ಅಕ್ರಮವಾಗಿ ಬೇಲಿ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯಾಗಲಿ, ಸ್ಥಳೀಯ ಆಡಳಿತವಾಗಲಿ ಯಾವುದೆ ಕ್ರಮ ಕೈಗೊಂಡಿಲ್ಲ. ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು ಯಾವುದೆ ಕಾರಣಕ್ಕೂ ಶಾಲೆಯ ಜಾಗವನ್ನು ನಾವು ಬಿಟ್ಟು ಕೊಡುವುದಿಲ್ಲ. ಶಾಲೆಯ ಜಾಗವನ್ನು ಹಿಂಪಡೆ ಯುವರೆಗೂ ನಿರಂತರ ಹೋರಾಟ ಮಾಡಲಾ ಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಾಲ್ಕಿತ್ತ ಕಾರ್ಮಿಕರು: ಪ್ರತಿಭಟನೆ ಅಂಗವಾಗಿ ಬಾಳ್ಳುಪೇಟೆ ವೃತ್ತದಿಂದ ಶಾಲೆಯ ವಿದ್ಯಾರ್ಥಿ ಗಳು, ಹಳೇ ವಿದ್ಯಾರ್ಥಿಗಳು, ಸಾರ್ವಜನಿಕರು ಬಿ.ಸಿದ್ದಣ್ಣಯ್ಯ ಪ್ರೌಡಶಾಲೆಯವರೆಗೆ ಮೆರ ವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಬೇಲಿ ಕಾಮಗಾರಿ ನಡೆಸುತ್ತಿದ್ದವರ ವಿರುದ್ಧ ಪ್ರತಿಭಟ ನಕಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ಥಳದಿಂದ ಕಾಲ್ಕಿತ್ತರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಮಾಜಿ ಶಾಸಕ ಗುರುದೇವ್ ರವರ ಪತ್ನಿ ಜ್ಯೋತಿ ಆಗಮಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಬಾಳ್ಳುಪೇಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಭಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಬೇಲಿ ಕಾಮಗಾರಿ ನಡೆಸಲು ಯಾವುದೆ ಅನುಮತಿ ಪಡೆಯದಿದ್ದು ಕಂಡು ಬಂದ ಹಿನ್ನೆಲೆ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಇರುವು ದರಿಂದ ಗ್ರಾಪಂ ಅನುಮತಿ ಸಿಗುವವರೆಗೂ ಕಾಮಗಾರಿ ಮಾಡದಂತೆ ಪೋಲಿಸರು ಸೂಚಿ ಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಠಾಣೆ ಪಿಎಸ್‌ಐ ಬಸವರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ:- ದಿವಂಗತ ತಾಯಿಯ ಮೂರ್ತಿಗೆ ನಿತ್ಯವು ಪುತ್ರಿಯ ನಮನ
ಸ್ಥಳಕ್ಕೆ ಡಿವೆ.ಎಸ್‌ಪಿ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಬಿ.ಡಿ ಬಸವಣ್ಣ, ಬಿ.ಎನ್ ಬಸವಣ್ಣ, ರೋಹಿತ್ ಕಿತ್ತಲೆಮನೆ, ಗ್ರಾಪಂ ಅಧ್ಯಕ್ಷ ಎಚ್.ಎಂ ಸ್ವಾಮಿ, ಬೆಳಗೋಡು ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಉಮಾನಾಥ್, ಗ್ರಾಪಂ ಸದಸ್ಯರಾದ ರೋಹಿತ್, ಭರತ್ ಶಾಲೆ ಹಳೇ ವಿದ್ಯಾರ್ಥಿಗಳ ಮುಖಂಡರಾದ ಇಬ್ರಾಹಿಂ, ಬಿ. ಆರ್ ಪಾಲಾಕ್ಷ, ಕಿಶೋರ್ ಶೆಟ್ಟಿ, ಶರತ್ ಇತರರಿದ್ದರು. ಶಾಲೆ ಉಳಿಸಿ ಅಭಿಯಾನ ಆರಂಭ ಶಾಲಾ ಟ್ರಸ್ಟ್ ಅಧ್ಯಕ್ಷ ಶಾಂತರಾಜ್ ಮಾತನಾಡಿ, ಹಿರಿಯರು ದಾನ ನೀಡಿರುವ ಜಾಗವನ್ನು ಹಿಂಪಡೆಯಲು ಮುಂದಾಗಿರುವ ಗುರುದೇವ್‌ರವರಿಂದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿ ರುವ 250ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಲೆಯಲ್ಲಿದೆ.
ವಿದ್ಯಾರ್ಥಿಗಳಿಗೆ ಆಟವಾಡಲು ಮೈದಾನವಿಲ್ಲದಂತಾಗುತ್ತದೆ. ಆದ್ದರಿಂದ, ಶಾಲೆ ಉಳಿಸಿ ಎಂಬ ಹೋರಾಟವನ್ನು ಟ್ರಸ್ಟ್ ಸದಸ್ಯರು ಹಳೇವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರೊಂದಿಗೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಶಾಲೆಯ ಆಡಳಿತ ಮಂಡಳಿಯವರಿಗೆ ಹಲವು ಬಾರಿ ಜಾಗವನ್ನು ಶಾಲೆಯ ಹೆಸರಿಗೆನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿದರೂ ನೋಂದಣಿ ಮಾಡಿಸಿಕೊಂಡಿಲ್ಲ. ಶಾಲೆಗೆ ರಸ್ತೆ ನಿರ್ಮಾಣ ಮಾಡಿಸಿಕೊಡುತ್ತಿದ್ದೇವೆ. ನಮ್ಮ ಹೆಸರಿನಲ್ಲಿರುವ 1 ಎಕರೆಗೆ ಮಾತ್ರ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದೇವೆ. ಶಾಲೆಗೆ ಯಾವ ರೀತಿಯ ತೊಂದರೆ ಇಲ್ಲ, ನ್ಯಾಯಾಲಯ ನೀಡುವ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಜ್ಯೋತಿ ಗುರುದೇವ್, ಮಾಜಿ
ಶಾಸಕ ಗುರುದೇವ್ ಪತ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.