ತಾಲೂಕಿನಲ್ಲಿ ಮಿತಿ ಮೀರಿದ ಮಾದಕ ವಸ್ತು ಮಾರಾಟ ದಂಧೆ
ಗಾಂಜಾ ವ್ಯಸನಕ್ಕೆ ದಾಸರಾಗುತ್ತಿರುವ ಯುವ ಜನರು , ಸಾರ್ವಜನಿಕರು ದೂರು ನೀಡಿದರೂ ಪ್ರಯೋಜನವಿಲ್ಲ
Team Udayavani, Jul 9, 2019, 12:31 PM IST
ಮಾದಕ ವಸ್ತುಗಳ ಸೇವನೆ ತಾಣವಾಗಿರುವ ಪಾಳು ಬಿದ್ದಿರುವ ರೈತ ತರಬೇತಿ ಕೇಂದ್ರ.
ಅರಕಲಗೂಡು: ತಾಲೂಕಿನಲ್ಲಿ ಮಾದಕ ವಸ್ತು ಮಾರಾಟ ದಂಧೆ ಮಿತಿ ಮೀರಿದ್ದು, ಪೊಲೀಸ್ ಇಲಾಖೆ ಮೌನವಹಿಸಿದೆ.
ಅರಕಲಗೂಡು ತಾಲೂಕಿನಲ್ಲಿ ಮಾದಕ ವಸ್ತುಗಳ ಸೇವನೆಗೆ ಯುವಕರು ಬಲಿಯಾಗುತ್ತಿರುವ ಸಂಖ್ಯೆ ಅಧಿಕವಾಗಿದೆ. ಪಟ್ಟಣದ ತಾಲೂಕು ಕ್ರೀಡಾಂಗಣ, ಶಾಲಾ ಮೈದಾನ, ಸಂಜೆ ಸಮಯದಲ್ಲಿ ಸರ್ಕಾರಿ ಕಚೇರಿಗಳ ಕಾಂಪೌಂಡ್, ಸ್ಮಶಾನ, ಕೃಷಿ ಪಾಠಶಾಲೆ ಕಟ್ಟಡ ಹಾಗೂ ಬಸ್ ನಿಲ್ದಾಣಗಳು ಮಾದಕ ವಸ್ತುಗಳ ಸೇವನೆಯ ತಾಣಗಳಾಗಿವೆ.
ಈ ಸ್ಥಳಗಳಲ್ಲಿ ಮತ್ತಿನಿಂದ ತೂರಾಡುವ ವ್ಯಕ್ತಿಗಳನ್ನು ಸಾರ್ವಜನಿಕರು ಪ್ರಶ್ನೆ ಮಾಡಲು ಮುಂದಾದರೆ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಎಲ್ಲಾ ಬೆಳವಣಿಗೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಇದರಿಂದ ಮುಗ್ಧ ಮನಸ್ಸುಗಳನ್ನ ರಕ್ಷಿಸುವವರು ಯಾರು, ಈ ದಂಧೆ ನಡೆಸುತ್ತಿರುವ ತಂಡಗಳನ್ನ ಮಟ್ಟಹಾಕಲು ಯಾರೂ ಮುಂದಾಗದಿ ರುವುದು ಆತಂಕ ಸೃಷ್ಟಿಯಾಗಿದೆ.
ಗಾಂಜಾ ದಂಧೆಯ ಐವರ ಬಂಧನ: ತಾಲೂಕಿನಲ್ಲಿ ಗಂಜಾ ಮಾರಾಟ ರಾಜರೋಷವಾಗಿ ನಡೆಯುತ್ತಿದೆ ಎಂಬುದಕ್ಕೆ ತಾಲೂಕಿನ ಮಲ್ಲಿಪಟ್ಟಣ ಹೋಬಳಿ, ಅಬ್ಬೂರು ಮಾಚಗೌಡನಹಳ್ಳಿ ಗ್ರಾಮದಲ್ಲಿ ಜು.2 ರಂದು ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಅಡ್ಡೆಯ ಮೇಲೆ ಪೋಲೀಸರು ದಾಳಿ ನಡೆಸಿ ಸುಮಾರು 23 ಕೇಜಿ ಗಾಂಜಾ ವಶಪಡಿಸಿಕೊಂಡು ಐವರನ್ನು ಬಂಧಿಸಿ ದ್ದಾರೆ. ಆದರೆ ಈ ಗ್ರಾಮದಲ್ಲಿ ಇದೇ ಮೊದಲೇನಲ್ಲ, ಕಳೆದ 4-5 ತಿಂಗಳ ಹಿಂದೆ ಇದೇ ಗ್ರಾಮದ ಬಾಸೀದ್ ಎಂಬುವವನ ಮನೆಯ ಮೇಲೆ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದರೂ ಗಾಂಜಾ ಮಾರಾಟ ದಂಧೆ ನಿರಾತಂಕವಾಗಿ ನಡೆಯುತ್ತಿದೆ.
ಒಡಿಶಾ ರಾಜ್ಯದ ಸಂಬಂಧ: ಅಬ್ಬೂರು ಮಾಚ ಗೌಡನಹಳ್ಳಿ ಗ್ರಾಮದಲ್ಲಿ 2 ಬಾರಿ ಪೊಲೀಸರ ಕಾರ್ಯಾ ಚರಣೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳು ಒಡಿಶಾ ರಾಜ್ಯದವ ರಾಗಿದ್ದು, ಗಾಂಜಾವನ್ನ ಆ ರಾಜ್ಯದಿಂದಲೇ ತಂದು ಈ ಗ್ರಾಮದ ಕೆಲ ಕುಟುಂಬಗಳೊಂದಿಗೆ ವ್ಯಾಪಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜು.2 ರಂದು ಪೊಲೀಸರು ಬಂಧಿಸಿದ ಆರೋಪಿಗಳು ಒಡಿಶಾ ರಾಜ್ಯದ ಕಾಲಿಮೆಲ್ಲಾ ತಾಲೂಕು ಮಲಕನಗಿರಿ ಜಿಲ್ಲೆಯ ಎಂ.ವಿ. 90 ಗ್ರಾಮದ ನಿಬಾಸ್ ಸುಷ್ಮಾ ಸರ್ಕಾರ್, ಹಾಗೂ ರೇಖಾಮಂಡಲ್ ಬಾಪನ್‌ಪಲ್ಲಿ ಎಂ.ಪಿ.ವಿ. 67ರ ನಿವಾಸಿಗಳನ್ನ ಬಂಧಿಸಿದ್ದಾರೆ. ಇವರು ಅಬ್ಬೂರು ಮಾಚಗೌಡನಹಳ್ಳಿ ನಿವಾಸಿ ಇನಾಯತ್ ಮತ್ತು ನೂರ್ ಅಹಮದ್ ಮನೆಗೆ ತಂದು ಹಸ್ತಾಂತರ ಮಾಡುವ ಸಮಯದಲ್ಲಿ ಬಂಧಿಸ ಲಾಗಿದೆ. ಆದರೂ ಗಾಂಜಾ ಮಾರಾಟ ದಂಧೆ ನಡೆ ಯುತ್ತಿದೆ ಎಂದರೆ, ಪೊಲೀಸ್ ಆಡಳಿತದ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಅನುಮಾನ ಹುಟ್ಟಿಸುತ್ತದೆ.
ಕೊಡಗು, ಮಂಗಳೂರಿನಿಂದಲೂ ಮಾದಕ ವಸ್ತು ಗಳು ರವಾನೆಯಾಗುತ್ತಿದೆ ಎಂಬ ವಿಷಯ ಸಾರ್ವ ಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಇಂತಹ ಜಾಲಗಳನ್ನು ಬಗ್ಗು ಬಡಿಯದಿದ್ದರೆ ಯುವ ಪೀಳಿಗೆ ಈ ದಂಧೆಯಲ್ಲಿ ಸಿಲುಕಿ ನರಳಬೇಕಾಗುತ್ತದೆ.
● ಅರಕಲಗೂಡು ಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.