ಸರ್ಕಾರಿ ಇಲಾಖೆಗಳಲ್ಲಿ ಸರ್ವರ್‌ ಸಮಸ್ಯೆ


Team Udayavani, Apr 29, 2023, 4:14 PM IST

ಸರ್ಕಾರಿ ಇಲಾಖೆಗಳಲ್ಲಿ ಸರ್ವರ್‌ ಸಮಸ್ಯೆ

ಚನ್ನರಾಯಪಟ್ಟಣ: ಈ ಬಾರಿಯ ವಿಧಾನಸಭಾ ಚುನಾವಣೆ ಬಿಸಿ ಸರ್ಕಾರಿ ಕಾರ್ಯಕ್ರಮ ಮತ್ತು ರಾಜಕೀಯ ಮುಖಂಡರಿಗೆ ಮಾತ್ರ ಸೀಮಿತವಾಗುತ್ತಿಲ್ಲ ಬದಲಾಗಿ ಸರ್ಕಾರಿ ವೈಬ್‌ಸೈಟ್‌ಗಳಿಗೂ ತಟ್ಟುತ್ತಿದೆ.

ವಿಧಾನಸಭಾ ಚುನಾವಣೆ ಘೋಷಣೆ ಆದಾಗಿನಿಂದ ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಆದರೆ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡ ದಿವಸದಿಂದ ಬಹುತೇಕ ಎಲ್ಲಾ ಇಲಾಖೆ ವೈಬ್‌ ಸೈಟ್‌ಗಳು, ಮೊಬೈಲ್‌ ಆ್ಯಪ್‌ಗ್ಳು ಬೇಗ ತಮ್ಮ ಮುಖ ಪುಟ ತೆರೆಯದೆ ಅಲ್ಲೇ ಸುತ್ತುವ ಮೂಲಕ ಸರ್ವರ್‌ ಡೌನ್‌ ಸಮಸ್ಯೆ ಎದುರಿಸುತ್ತಿವೆ. ಇದರಿಂದ ಸಾರ್ವಜನಿಕರು, ರೈತರು ಹಾಗೂ ಕೆಲ ಇಲಾಖೆ ಕಚೇರಿಯಲ್ಲಿ ಫ‌ಲಾ ನುಭವಿಗಳು ದಿನಪೂರ್ತಿ ಕಾಯುವಂತಾಗಿದೆ.

ಜನರ ಪರದಾಟ: ಮಗುವನ್ನು ಶಾಲೆಗೆ ಸೇರಿಸಲು ಆಧಾರ್‌ ತಿದ್ದುಪಡಿ, ಮಗುವಿನ ಆದಾರ್‌ ನೋಂದಣಿ, ಜನನ ದೃಡೀಕರಣ ಪತ್ರ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ ಮಾಡಿಸಲು ಹಲವು ಮಂದಿ ಪೋಷಕರು ಬೆಳಗ್ಗೆ 6 ಗಂಟೆಗೆ ತಾಲೂಕು ಕಚೇರಿ ಮುಂದೆ ನಿಲ್ಲುವಂತಾಗಿದೆ. ಇದಲ್ಲದೆ ಈ ಬಿಲ್‌ ಪಾವತಿ ಮಾಡುವ ಅನೇಕ ಮಂದಿ ಸೆಸ್ಕ್, ಪುರ ಸಭೆ ಕಂದಾಯ, ಬಿಎಸ್‌ಎನ್‌ಎಲ್‌ ಸೇರಿದಂತೆ ಇತರ ಬಿಲ್‌ಗ‌ಳನ್ನು ತಮ್ಮ ಮೊಬೈಲ್‌ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಆದರೆ, ಸರ್ವರ್‌ ಡೌನ್‌ ಆಗಿರುವ ಪರಿಣಾಮ ಅನ್ಯ ಮಾರ್ಗವಿಲ್ಲದೆ ಸಂಬಂಧ ಪಟ್ಟ ಇಲಾಖೆಗೆ ತೆರಳಿ ಬಿಲ್‌ ಕಟ್ಟುವಂತಾಗಿದೆ.

ಸರ್ಕಾರಿ ಸಿಬ್ಬಂದಿ ಹೆಣಗಾಟ: ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬೇಕಿರುವ ಅನೇಕ ಮಂದಿ ನಿರುದ್ಯೋಗ ವಿದ್ಯಾವಂತ ಯುವಕರು ಮುಂಜಾನೆ ಅಂತರ್ಜಾಲ ಕೇಂದ್ರದ ಮುಂದೆ ನಿಲ್ಲುವಂತಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ಗೆ ರೈತರು ನೀಡಿರುವ ಅರ್ಜಿಗಳು ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ದಾಖಲು ಮಾಡಬೇಕಿದ್ದು ನೆಟ್‌ವರ್ಕ್‌ ನಿಧಾನ ಆಗುತ್ತಿದೆ. ಇದರಿಂದ ಕೃಷಿ ಇಲಾಖೆ ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಇನ್ನು ಹೋಬಳಿ ಕೇಂದ್ರದಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಅಂತರ್ಜಾಲ ನಿಷ್ಕ್ರಿ ಯ ಸಮಸ್ಯೆ ಹೆಚ್ಚಾಗಿದೆ. ಇದುವರೆಗೆ ಪಡೆದಿರುವ ಅರ್ಜಿಯನ್ನು ವೆಬ್‌ಗ ನೋಂದಾವಣಿ ಮಾಡಲಾಗದೆ ಪರದಾಡುತ್ತಿದ್ದಾರೆ.

ನೈಪಥ್ಯಕ್ಕೆ ಸರಿದ ವೆಬ್‌ಗಳು: ಒಂದೆಡೆ ಭಾರತೀಯ ದೂರ ಸಂಚಾರ ನಿಮಗದ ನೆಟ್‌ವರ್ಕ್‌ ಸಮಸ್ಯೆ, ಇನ್ನೊಂದೆಡೆ ಚುನಾವಣಾ ಕೆಲಸ ಕಾರ್ಯಗಳಲ್ಲಿ ಮಗ್ನವಾಗಿರುವ ಅಧಿಕಾರಿಗಳ ನಡೆಯಿಂದ ಸರ್ಕಾರದ ವೆಬ್‌ಸೈಟ್‌ಗಳು ನೈಪಥ್ಯಕ್ಕೆ ಸರಿದಿವೆ. ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆಹಾರ ಮತ್ತು ನಾಗರಿಕ ಸೇವೆಗಳ ಇಲಾಖೆ, ಸೆಸ್ಕ್, ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹೀಗೆ ಹತ್ತಾರು ಇಲಾಕೆಯ ಅಧಿಕೃತ ವೈಬ್‌ಸೈಟ್‌ಗಳು ಸರ್ವರ್‌ ಸಮಸ್ಯೆಯಿಂದಾಗಿ ಬಳಲುತ್ತಿವೆ. ಮೊತ್ತೂಂದೆಡೆ ಟೆಲಿಕಾಂ ಸಂಸ್ಥೆಗಳು ಎಡವಟ್ಟಿನಿಂದಾಗಿ ಬಹುತೇಕ ಸರ್ಕಾರಿ ಬ್ರೌಸರ್‌ìಗಳ ಲಿಂಕ್‌ಗಳೆ ತೆರೆ ದುಕೊಳ್ಳುತ್ತಿಲ್ಲ.

ಜಾಗೃತಿ ಆ್ಯಪ್‌ನದ್ದೂ ಸಮಸ್ಯೆ: ವಿಧಾನಸಭಾ ಚುನಾವಣೆ ಹಿನ್ನೆಲೆ ಕಡ್ಡಾಯ ಮತದಾನ ಜಾಗೃತಿ ಮೂಡಿಸಲು ವೈಬ್‌ಸೈಟ್‌ಗಳು ಮತ್ತು ಆ್ಯಪ್‌ ಗಳನ್ನು ಹೆಚ್ಚು ಉಪಯೋಗ ಮಾಡುತ್ತಿದ್ದು, ಏಕಕಾಲಕ್ಕೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಸಹಾಯಕ ಚುನಾವಣಾಧಿಕಾರಿಗಳು ಇದನ್ನು ಉಪಯೋಗಿಸುತ್ತಿರುವುದರಿಂದ ಜಾಗೃತಿ ಆ್ಯಪ್‌ ಮತ್ತು ಸೈಟ್‌ಗಳು ಸ್ಲೋ ಆಗುತ್ತಿದೆ. ಕೆಲಸದ ಒತ್ತಡ ಸಮಯದಲ್ಲಿ ನೆಟ್‌ವರ್ಕ್‌ ನಿಧಾನ ಆಗುತ್ತಿರುವುದರಿಂದ ಚುನಾವಣಾ ಸಿಬ್ಬಂದಿಗಳಿ ಗೂ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ.

ಪಿಂಚಣೆ, ವೇತನಕ್ಕೂ ಕತ್ತರಿ: ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಪಡೆಯುವ ಫ‌ಲಾನುಭವಿಗಳು, ವೃದ್ಧಾಪ್ಯವೇತನ, ವಿಧವಾ ವೇತನ, ದಿವ್ಯಾಂಗ ವೇತನ, ನಿವೃತ್ತಿ ನೌಕರರ ವೇತನ, ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವೇತನಗಳಿ ಗೂ ಆನ್‌ ಲೈನಲ್ಲಿ ಪಟ್ಟಿ ಸಲ್ಲಿಸಬೇಕಿದೆ. ಇದರೊಂದಿಗೆ ಸೇವೆಗೆ ಹಾಜರಾಗಿರುವ ಬಗ್ಗೆಯು ಆನ್‌ಲೈನ್‌ನಲ್ಲಿ ಹಾಜರಾತಿ ಸಲ್ಲಿಸುವುದು ಕಡ್ಡಾಯ. ಆದರೆ, ವೈಬ್‌ಸೈಟ್‌ಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಎಲ್ಲಾ ಕಾರ್ಯಗಳು ಮತ್ತೆ ಕಡತಗಳಿಗೆ ಜೋತು ಬೀಳುವ ಸ್ಥಿತಿ ಸೃಷ್ಟಿಯಾಗಿರುವುದು ವಿಪರ್ಯಾಸವೇ ಸರಿ.

ಚುನಾವಣೆ ಪೂರ್ಣಗೊಳ್ಳುವ ತನಕ ಸರ್ಕಾರದ ವೆಬ್‌ಸೈಟ್‌ಗಳ ದರ್ಶನ ಅಪರೂಪ, ಅಲ್ಲಿವರೆಗೆ ಪಿಂಚಣಿ ಸರ್ಕಾರಿ ಸೇವೆ ಪಡೆಯುವವರು ಯಾತನೆ ಹೇಳತೀರದು. ರಾತ್ರಿ ವೇಳೆ ಪಡಿತರ ವಿತರಣೆ: ತಾಲೂಕಿನಲ್ಲಿ ಪಡಿತರ ಆಹಾರ ಪಡೆಯಬೇಕೆಂದರೆ ಆಹಾರ ಮತ್ತು ನಾಗರಿಕ ಸೌಲಭ್ಯಗಳ ಇಲಾಖೆ ವೆಬ್‌ ಸೈಟ್‌ಗೆ ಪಡಿತರದಾರರು ಹೆಬ್ಬೆಟ್ಟು ನೀಡಬೇಕು. ಗ್ರಾಮೀಣ ಭಾಗದಲ್ಲಿ ಅಂತರ್ಜಾಲದ ಸಮಸ್ಯೆ ಹೆಚ್ಚಾಗಿರುವು ದಲ್ಲದೆ ಸರ್ಕಾರಿ ವೆಬ್‌ಸೈಟ್‌ ಸಕಾಲಕ್ಕೆ ತೆರೆದುಕೊಳ್ಳದೆ ಇರುವುದರಿಂದ ರಾತ್ರಿ 9 ಗಂಟೆ ಮೇಲೆ ನ್ಯಾಯಾಬೆಲೆ ಅಂಗಡಿ ಮಾಲಿಕರು ಹೆಬ್ಬೆಟ್ಟು ತೆಗೆದುಕೊಂಡು ಪಡಿತರ ಆಹಾರ ವಿತರಣೆ ಮಾಡುತ್ತಿದ್ದಾರೆ.

ನಿವೇಶನ, ಕೃಷಿ ಭೂಮಿ ಮಾರಾಟ ಮಾರುವವರು ತಮ್ಮ ಭೂಮಿ ಪಹಣಿ ಪಡೆಯಲು ದಿನಗಟ್ಟಲೆ ಕಾಯ ವಂತಾಗಿದೆ. ಸೈಬರ್‌ ಸೆಂಟರ್‌ಗಳಲ್ಲಿ ಸರ್ಕಾರಿ ವೆಬ್‌ಸೈಟ್‌ ಓಪನ್‌ ಆಗುತ್ತಿಲ್ಲ. ಇನ್ನು ಉಪನೋಂದಾವಣಿ ಅಧಿ ಕಾರಿಗಳ ಕಚೇರಿಯಲ್ಲಿ ದಿನಕ್ಕೆ ನೂರಾರು ಕ್ರಯ ವಾಗುತ್ತಿತ್ತು. ಚುನಾವಣೆ ಘೋಷಣೆ ಯಾದ ಮೇಲೆ ಇಂಟರ್‌ ನೆಟ್‌ ಸಮ ಸ್ಯೆಯಿಂದ ನೋಂದಾವಣೆ ತಡವಾಗುತ್ತಿದೆ. -ಕೇಶವಮೂರ್ತಿ, ಪತ್ರಬರಹಗಾರ

ಶಾಮಸುಂದರ್‌ ಕೆ ಅಣ್ಣೇನಹಳ್ಳಿ

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

Alur-Agri

Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.