ಶಾಂತಿಗ್ರಾಮ ತಾಲೂಕು ಹಾಸನಕ್ಕೆ  ಬಯಸದೇ ಬಂದ ಭಾಗ್ಯ


Team Udayavani, Mar 4, 2019, 8:59 AM IST

shanti-grama.jpg

ಹಾಸನ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲೆಗೆ ಹಲವಾರು ಯೋಜನೆಗಳು ಮಂಜೂರಾಗಿವೆ. ಬಹಳ ವರ್ಷಗಳಿಂದ ಜನರ ಬೇಡಿಕೆಗಳಿಗೆ ಸ್ಪಂದಿಸಿ ಸರ್ಕಾರ ಯೋಜನೆ ಮಂಜೂರಾತಿ ನೀಡುವುದು ಸಹಜ. ಆದರೆ ಹಾಸನ ತಾಲೂಕಿನ ಹೋಬಳಿ ಕೇಂದ್ರ ಶಾಂತಿಗ್ರಾಮ ತಾಲೂಕು ಕೇಂದ್ರವಾಗಬೇಕೆಂದು ಇದುವರೆಗೂ ಯಾರೊಬ್ಬರೂ ಕೇಳಿರಲಿಲ್ಲ.

ಅನಿರೀಕ್ಷಿತವಾಗಿ ಶಾಂತಿಗ್ರಾಮ ತಾಲೂಕು ರಚನೆಗೆ ಸರ್ಕಾರ ಎರಡು ದಿನಗಳ ಹಿಂದೆಯಷ್ಟೇ ಅನುಮೋದನೆ ನೀಡಿದೆ. ಶಾಂತಿಗ್ರಾಮ ತಾಲೂಕು ರಚನೆ ಹಾಸನ ಜಿಲ್ಲೆಗೆ ಬಯಸದೆ ಬಂದ ಭಾಗ್ಯ ಎನ್ನಲಡ್ಡಿಯಿಲ್ಲ. ಜಿಲ್ಲೆಯಲ್ಲಿ ದೊಡ್ಡ ಹೋಬಳಿಗಳಾಗಿರುವ ಬಾಣಾವರ, ಜಾವಗಲ್‌, ರಾಮನಾಥಪುರ, ಕೊಣನೂರು, ಹಳ್ಳಿ ಮೈಸೂರು, ಶ್ರವಣಬೆಳಗೊಳ ತಾಲೂಕುಗಳಾಗಿದ್ದರೆ ಯಾರೂ ಅಚ್ಚರಿ ಪಡುತ್ತಿರಲಿಲ್ಲ. ಆದರೆ ತಾಲೂಕುಗಳ ಪುನಾರಚನೆ ಯಾವುದೇ ಆಯೋಗ, ಸಮಿತಿಯ ಶಿಫಾರಸ್ಸೂ ಇಲ್ಲದೆ, ಜನರು ಬೇಡಿಕೆಯನ್ನೂ ಮಂಡಿಸದಿದ್ದರೂ ಕೇವಲ 6,997 ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರವಾಗಿರುವ ಶಾಂತಿಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ .ಡಿ.ರೇವಣ್ಣ ಅವರ ಒತ್ತಾಸೆಯೇ ಕಾರಣ. ರೇವಣ್ಣ ಅವರಹೊರತುಪಡಿಸಿ ಬೇರ್ಯಾರೂ ಶಾಂತಿಗ್ರಾಮ ತಾಲೂಕು ರಚನೆಯಾಗುತ್ತದೆಯೆಂದು ನಿರೀಕ್ಷಿಸಿರಲಿಲ್ಲ. ಅಂತೂ ಅನಿರೀಕ್ಷಿತ ವರ ಶಾಂತಿಗ್ರಾಮದ ಜನರಿಗೆ ಸಿಕ್ಕಿದೆ. 

ಮಾದರಿ ತಾಲೂಕಾಗುವ ನಿರೀಕ್ಷೆ: ಹಾಸನ ಜಿಲ್ಲಾ ಕೇಂದ್ರದಿಂದ 14 ಕಿ.ಮೀ.ದೂರದಲ್ಲಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ಶಾಂತಿಗ್ರಾಮದ ಮಧ್ಯೆ ಹಾದು ಹೋಗಿದೆ. ಈಗಾಗಲೇ ಶಾಂತಿಗ್ರಾಮದಲ್ಲಿ ಕಂದಾಯ ಇಲಾಖೆಯ ಹೋಬಳಿ ಕಚೇರಿ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, 82 ಹಳ್ಳಿಗಳ ವ್ಯಾಪ್ತಿಯನ್ನು ಹೊಂದಿದೆ. ಪೊಲೀಸ್‌ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪದವಿ ಪುರ್ವ ಕಾಲೇಜು, ಬಸ್‌ ನಿಲ್ದಾಣ ಇದೆ. 19 ಸದಸ್ಯರನನ್ನೊಳಗೊಂಡ ಗ್ರಾಮ ಪಂಚಾಯತಿ ಕೇಂದ್ರವಾಗಿರುವ ಶಾಂತಿಗ್ರಾಮದ ಸಮೀಪ ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್‌ನ ಕೇಂದ್ರ ಸ್ಥಾನ, ಜಿಲ್ಲಾ ಪೊಲೀಸ್‌ ತರಬೇತಿ ಶಾಲೆ, ಕೃಷಿ ವಿಜ್ಞಾನ ಕಾಲೇಜು ಇದೆ. ಇನ್ನು ಮುಂದೆ ಶಾಂತಿಗ್ರಾಮ ತಾಲೂಕು ಕೇಂದ್ರವಾಗುವುದರಿಂದ 15 ಕ್ಕೂ ಹೆಚ್ಚು ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಬೇಕಾಗಿದ್ದು, ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಸರ್ಕಾರಿ ಜಮೀನಿದ್ದು, ಮಾದರಿ ತಾಲೂಕು ಕೇಂದ್ರವಾಗಿ ರೂಪುಗೊಳ್ಳುವ ಅವಕಾಶವಿದೆ.

ಹಾಸನದ ಒತ್ತಡ ಕಡಿಮೆಯಾಗಲಿದೆ: ಹಾಸನ ತಾಲೂಕಿಗೆ ಈಗದುದ್ದ, ಶಾಂತಿಗ್ರಾಮ ಹೋಬಳಿ ಸೇರಿದ್ದು, 5 ಹೋಬಳಿಗಳನ್ನು ಹೊಂದಿದ್ದ ಹಾಸನ ತಾಲೂಕು ಕಚೇರಿಗೆ ಹೆಚ್ಚಿನ ಒತ್ತಡವಿತ್ತು. ಹಾಸನ ನಗರ ದಿನೇ ದಿನೇ ಬೆಳೆಯುತ್ತಿರುವುದರಿಂದ ಹಾಸನ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಆಗುತ್ತಿರಲಿಲ್ಲ. ಹಾಗೆಯೇ ದೊಡ್ಡ ತಾಲೂಕಾಗಿದ್ದ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯೂ ಶಾಂತಿಗ್ರಾಮಕ್ಕೆ ಸೇರಿದರೆ ಚನ್ನರಾಯಪಟ್ಟಣ ತಾಲೂಕು ಕಚೇರಿ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿರುವುದರಿಂದ ಹಾಸನ ಹೊರ ವಲಯದ ಉಪ ನಗರವಾಗಿ ಬೆಳೆಯುವ ಅವಕಾಶವಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಹೊಸ ತಾಲೂಕು ರಚನೆಯಾಗುತ್ತಿದ್ದು, ಹಾಸನ 9 ತಾಲೂಕುಗಳನ್ನು ಹೊಂದಿದ ಜಿಲ್ಲೆಯಾಗಲಿದೆ. 

ಹೊಸ ತಾಲೂಕಿನ ವ್ಯಾಪ್ತಿ ಏನು?
ಹಾಸನ ತಾಲೂಕಿನ ದುದ್ದ ಹೋಬಳಿ, ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸೇರುವುದು ಖಚಿತವಾಗಿದೆ. ಈ ಎರಡು ಹೋಬಳಿಗಳು ಶಾಂತಿಗ್ರಾಮಕ್ಕೆ ಸಮೀಪದಲ್ಲಿವೆ. ಹೋಬಳಿ ಕೇಂದ್ರದಷ್ಟೇ ಮಹತ್ವದ್ದಾಗಿರುವ ಶಾಂತಿಗ್ರಾಮ ಹೋಬಳಿಯಲ್ಲಿರುವ ದೊಡ್ಡ ಗ್ರಾಮ ಮೊಸಳೆ ಹೊಸಹಳ್ಳಿಗೆ ಹೋಬಳಿ ಕೇಂದ್ರದ ಸ್ಥಾನಮಾನ ನೀಡಿ ಶಾಂತಿಗ್ರಾಮ ತಾಲೂಕಿಗೆ ಸೇರಿಸಿದರೆ ನಾಲ್ಕು ಹೋಬಳಿಗಳಾಗುತ್ತವೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಈಗ ಮೂರು ತಾಲೂಕುಗಳ ಹೋಬಳಿಗಳು ಸೇರಿವೆ. ಹೊಳೆನರಸೀಪುರ ತಾಲೂಕಿನ ಕಸಬಾ, ಹಳೆಕೋಟೆ, ಹಾಸನ ತಾಲೂಕಿನ ದುದ್ದ, ಶಾಂತಿಗ್ರಾಮ, ಚನ್ನರಾಯಪಟ್ಟಣ ತಾಲೂಕಿನ ದಂಡಿಗನ ಹಳ್ಳಿ ಹೋಬಳಿಗಳು ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿಯಲ್ಲಿವೆ. ಶಾಂತಿಗ್ರಾಮ ಹೊಸ ತಾಲೂಕಾದರೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಎರಡು ತಾಲೂಕುಗಳು ಸೇರುತ್ತವೆ. ತಾಲೂಕುವಾರು ಹೆಚ್ಚು ಅನುದಾನವೂ ಬರುತ್ತದೆ. ಆಡಳಿತಾತ್ಮಕ
ಗೊಂದಲಗಳಿಗೂ ತೆರೆ ಬೀಳಲಿದೆ ಎಂಬ ಉದ್ದೇಶದಿಂದಲೇ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಜಿಲ್ಲಾಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಶಾಂತಿಗ್ರಾಮ ತಾಲೂಕು ರಚನೆಗೆ ಮಂಜೂರಾತಿ ಪಡೆದಿದ್ದಾರೆ.

ಅಧಿಕಾರ ಇದ್ದಾಗ ಅವಕಾಶ ಬಳಸಿಕೊಳ್ಳಬೇಕು: ರೇವಣ್ಣ  ಅಧಿಕಾರ ಇದ್ದಾಗ ಹಿಂದೆ, ಮುಂದೆ ನೋಡದೇ ಅವಕಾಶ ಬಳಸಿಕೊಳ್ಳಬೇಕು. ಇದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ. ರೇವಣ್ಣ ಅವರು ಶಾಂತಿಗ್ರಾಮ ಹೊಸ ತಾಲೂಕು ರಚನೆಯ ಬಗ್ಗೆ ನೀಡಿದ ಪ್ರತಿಕ್ರಿಯೆ. ಹೊಸ ತಾಲೂಕು ರಚನೆಯ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಜನರಿಗೆ ಅನುಕೂಲವಾಗಬೇಕು. ಆ ನಿಟ್ಟಿನಲ್ಲಿ ಹೊಸ ತಾಲೂಕಿಗೆ ಹೋಬಳಿಗಳ ಸೇರ್ಪಡೆಯ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಶಾಂತಿಗ್ರಾಮ ವೇಗವಾಗಿ ಬೆಳೆಯುತ್ತಿದೆ. ಈಗಾಗಲೇ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಕೇಂದ್ರ, ಶಾಂತಿಗ್ರಾಮ ಸಮೀಪವೇ ಇದೆ. ಕೃಷಿ ಕಾಲೇಜೂ ಇದೆ. ಹೊಸ ಜೈಲು ಶಾಂತಿಗ್ರಾಮ ಸಮೀಪವೇ ನಿರ್ಮಾಣವಾಗಲಿದೆ. ಶಾಂತಿ ಗ್ರಾಮಕ್ಕೆ ಹೇಮಾವತಿ ನದಿಯಿಂದಲೇ ಕುಡಿಯುವ ನೀರು ಪೂರೈಕೆ ಕಾಮಗಾರಿ ಆರಂಭವಾಗಿದೆ. ಶಾಂತಿಗ್ರಾಮದಕೆರೆಗೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಿಂದ ನೀರು ತುಂಬಿಸ ಲಾಗುವುದು. ಹಾಗಾಗಿ ಹೊಸ ತಾಲೂಕು ಕೇಂದ್ರ ಇನ್ನು 5 ವರ್ಷದೊಳಗೆ ಪಟ್ಟಣದ ರೂಪ ಪಡೆಯಲಿದೆ ಎಂದು ಎಚ್‌.ಡಿ. ರೇವಣ್ಣ ಅವರು ಹೇಳಿದರು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.