ದೇವರ ಪೂಜೆ ಬಾಡೂಟಕ್ಕೆ ಜಗಳ: ಯುವಕನ ಕೊಲೆ
Team Udayavani, Jan 19, 2022, 1:27 PM IST
ಹಾಸನ: ದೇವರ ಪೂಜೆಯ ಬಾಡೂಟಕ್ಕೆ ಆಹ್ವಾನಿಸಲಿಲ್ಲವೆಂದು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಅರಸೀಕೆರೆ ತಾಲೂಕು ಪುರ್ಲೆಹಳ್ಳಿಯಲ್ಲಿ ನಡೆದಿದೆ.
ಗಲಾಟೆ: ಪುರ್ಲೆಹಳ್ಳಿ ಗ್ರಾಮದ ಶರತ್ (29) ಕೊಲೆಯಾದ ಯುವಕ. ಪುರ್ಲೆ ಹಳ್ಳಿಯ ಗಿರೀಶ್ ಮತ್ತು ಶರತ್ ಎಂಬವರ ಮನೆಯವರು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚೌಡೇಶ್ವರಿ ದೇಗುಲದಲ್ಲಿ ಭಾನುವಾರ ಪೂಜೆ ಮಾಡಿಸಿ ಬಾಡೂಟ ಹಾಕಿದ್ದರು. ಆದರೆ, ನಮ್ಮನ್ನು ಊಟಕ್ಕೆ ಕರೆದಿಲ್ಲ. ಕರೆದಿದ್ದರೆ ನಾವೂ ಹೋಗುತ್ತಿದ್ದೆವು ಎಂದುಗಿರೀಶ್ ಸಂಬಂಧಿಕರೂ ಆದ ನಟರಾಜು ಕುಟುಂಬದವರು ಭಾನುವಾರ ರಾತ್ರಿ ಜಗಳ ತೆಗೆದಿದ್ದರು.
ಈ ವೇಳೆ ಗ್ರಾಮದ ಹಿರಿಯರು ಜಗಳವನ್ನು ಬಿಡಿಸಿ ಬುದ್ಧಿವಾದ ಹೇಳಿಕಳುಹಿಸಿದ್ದರು. ಘಟನೆಯಿಂದ ಸಿಟ್ಟಿಗೆದ್ದಿದ್ದ ಕೆಂಡಾಮಂಡಲವಾಗಿದ್ದ ನಟರಾಜು ಇತರರು ಗಿರೀಶ್ ಮತ್ತು ಶರತ್ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.
ಪ್ರಕರಣ ದಾಖಲು: ನಟರಾಜು ಧನಪಾಲ್, ಅರ್ಜುನ್, ಮಂಜುನಾಥ ಮತ್ತಿತರರು ಹಲ್ಲೆನಡೆಸಿದ್ದು, ಹಲ್ಲೆಯಿಂದ ಗಾಯಗೊಂಡಿದ್ದಶರತ್, ರಾಖೇಶ್ ಯೋಗೇಶ್ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶರತ್ (28) ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.
ಅರಸೀಕೆರೆ ತಾಲೂಕು ಬಾಣಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.