ಹಾಸನ: ಸಾಲ ತೀರಿಸಲಾಗದೆ ಸ್ನೇಹಿತನನ್ನು ಕೊಂದ ದಂಪತಿ
Team Udayavani, Jan 29, 2022, 1:32 PM IST
ಹಾಸನ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅರಕಲಗೂಡು ತಾಲೂಕು ಕೊಣನೂರಿನ ಲಾಡ್ಜ್ ಯೊಂದರಲ್ಲಿ ಯುವಕನೊಬ್ಬನ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಹಣಕಾಸಿನ ವಿಚಾರದಲ್ಲಿ ಪತಿ- ಪತ್ನಿ ಯುವಕನ ಹತ್ಯೆ ಸಂಚು ರೂಪಿಸಿರುವುದು ಬಯಲಾಗಿದೆ.
ಮೂಲತಃ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲೂಕು 6ನೇ ಹೊಸಕೋಟೆ ಗ್ರಾಮದ ದಿಲೀಪ್ ಮತ್ತು ಆತನ ಪತ್ನಿ ಸುಶ್ಮಿತಾ ಬೆಂಗಳೂರಿನಲ್ಲಿ ನೆಲಸಿ ದ್ದರು. ಅದೇ ಹೊಸಕೋಟೆ ಗ್ರಾಮದವನು ಹಾಗೂ ದಿಲೀಪ್‌ನ ಸ್ನೇಹಿತನೂ ಆಗಿದ್ದ ಹರೀಶ್‌ನಿಂದ ದಿಲೀಪ್ ಮತ್ತು ಸುಶ್ಮಿತಾ ತನ್ನ ಮಗಳ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹಣದ ತುರ್ತು ಇದ್ದುದ್ದರಿಂದ 1 ಲಕ್ಷ ಸಾಲ ಪಡೆದಿದ್ದು, ವಾಪಸ್ ಕೊಡುವಂತೆ ಹರೀಶ್ ಒತ್ತಾಯ ಮಾಡುತ್ತಿದ್ದರಿಂದ ಸಾಲ ಕೊಡಲಾಗದೆ ಆತನನ್ನು ಕೊಲೆ ಮಾಡಲು ದಂಪತಿ ಯೋಜನೆ ರೂಪಿಸಿದ್ದರು.
ಹರೀಶ್‌ಗೆ ಹಣ ನೀಡುವುದಾಗಿ ಸುಶ್ಮಿತಾ ಜ.18 ರಂದು 4 ಗಂಟೆಗೆ ಕೊಣನೂರಿನ ಬಿಎಸ್‌ಪಿ ಲಾಡ್ಜ್ಗೆ ಬಂದು ನಾನು ಬೆಂಗಳೂರಿನಿಂದ ಕೊಣನೂರಿನ ಸಮೀಪದ ದೇಗುಲದಲ್ಲಿ ಪೂಜೆಗೆ ಬಂದಿದ್ದೇನೆ. ಇನ್ನು ಕೆಲ ಹೊತ್ತಿನಲ್ಲೇ ನನ್ನ ಗಂಡ ಬರುತ್ತಾರೆ. ಇಂದು ತಂಗಿದ್ದು ನಾಳೆ ಹೋಗುತ್ತೇವೆ ಎಂದು ಹೇಳಿ ಲಾಡ್ಜ್ನಲ್ಲಿ ಕೊಠಡಿ ಪಡೆದುಕೊಂಡಿದ್ದಳು. ಕೊಠಡಿ ಪಡೆದ ಕೆಲ ಸಮಯ ನಂತರ ಸುಶ್ಮಿತಾ ಕೊಠಡಿಯಿಂದ ಹೊರಹೋಗಿದ್ದಳು. ಆ ಸಂದರ್ಭದಲ್ಲಿ ಸುಶ್ಮಿತಾಳ ಗಂಡದಿಲೀಪ್ ಆತನ ಸಹೋದರ ಲಕ್ಷ್ಮಣ್ ಅದೇ ಲಾಡ್ಜ್ ನಲ್ಲಿ ಮತ್ತೂಂದು ಕೊಠಡಿ ಪಡೆದುಕೊಂಡು ತಂಗಿದ್ದರು. ಕೊಠಡಿಯಿಂದ ಹೊರ ಹೋಗಿದ್ದ ಸುಶ್ಮಿತಾ ಕೆಲ ಹೊತ್ತಿನಲ್ಲಿ ಹರೀಶ್‌ಗೆ ಹಣ ಕೊಡುವುದಾಗಿ ನಂಬಿಸಿ ಆತನನ್ನು ಲಾಡ್ಜ್ ಗೆ ಕರೆದುಕೊಂಡು ಬಂದು ಇವರೇ ನನ್ನ ಗಂಡ ಎಂದು ಲಾಡ್ಜ್ನವರಿಗೆ ನಂಬಿಸಿ ಕೊಠಡಿಗೆ ಕರೆದುಕೊಂಡು ಹೋಗಿದ್ದಳು.
ಬೇರೆ ಕೊಠಡಿ ಪಡೆದುಕೊಂಡಿದ್ದ ದಿಲೀಪ್ ಮತ್ತು ಲಕ್ಷ್ಮಣ್ ತಮ್ಮ ಕೊಠಡಿಯಿಂದ ಸುಶ್ಮಿತಾ ಕೊಠಡಿಯ ಶೌಚಾಲಯಕ್ಕೆ ಸುಶ್ಮಿತಾ ಮತ್ತು ಹರೀಶ್ ಬರುವ ಮೊದಲೇ ಸೇರಿಕೊಂಡಿದ್ದರು. ಕೊಠಡಿಗೆ ಬಂದ ಹರೀಶ್ ನನ್ನು ಕೂರಿಸಿಕೊಂಡು ಸಾಂದರ್ಭಿಕವಾಗಿ ಮಾತ ನಾಡಿಸುತ್ತಿದ್ದ ಸುಶ್ಮಿತಾ ಮೊದಲೇ ತಂದಿಟ್ಟು ಕೊಂಡಿದ್ದ ಕಾರದ ಪುಡಿಯನ್ನು ದಿಢೀರನೇ ಹರೀಶನಿಗೆ ಎರಚಿ ದ್ದಾಳೆ. ಹರೀಶ್ ಕೂಗಿಕೊಳ್ಳುತ್ತಿದ್ದಂತೆ ಶೌಚಾಲಯದಿಂದ ಮಚ್ಚು, ಚಾಕುಗಳೊಂದಿಗೆ ಹೊರ ಬಂದ ದಿಲೀಪ್ ಮತ್ತು ಲಕ್ಷ್ಮಣ್ ಹರೀಶ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ತಕ್ಷಣವೇ ದಿಲೀಪ್ ತನ್ನ ಪತ್ನಿಸುಶ್ಮಿತಾಳೊಂದಿಗೆ ಕೊಠಡಿಯಿಂದ ಓಡಿ ಹೋಗಿದ್ದಾನೆ. ಹರೀಶ್‌ನ ಕೂಗಾಟ ಕೇಳಿ ಲಾಡ್ಜ್ ಮಾಲೀಕ ಬಂದು ಕೊಠಡಿಯ ಚಿಲಕ ಹಾಕಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ . ಪೊಲೀಸರು ಲಕ್ಷ್ಮಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹರೀಶ್ ಮತ್ತು ಸುಶ್ಮಿತಾ ನಡುವೆ ಅಕ್ರಮ ಸಂಬಂಧವಿತ್ತು. ಊರಿನವರಿಗೂತಿಳಿದು ಬುದ್ಧಿ ಹೇಳಿದ್ದರು ಎಂದಿದ್ದ. ಆದರೆ, ಅರಕಲ ಗೂಡು ಇನ್‌ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಪೊಲೀಸರ ತಂಡವು ತನಿಖೆ ನಡೆಸಿದಾಗ ಹರೀಶ್‌ಗೆ ಕೊಡಬೇಕಾ ಗಿದ್ದ ಒಂದು ಲಕ್ಷ ರೂ. ಸಾಲ ಕೊಡಲಾಗದೆ ಸಂಚು ರೂಪಿಸಿದ್ದ ಮಾಹಿತಿ ಬಯಲಾಗಿದೆ. ಈಗ ಪೊಲೀಸರು ದಿಲೀಪ್ ಮತ್ತು ಸುಶ್ಮಿತಾಳನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
ಒಂದು ಲಕ್ಷ ಸಾಲ, ಒಂದು ಕೊಲೆ : ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅರಕಲಗೂಡು ತಾಲೂಕು ಕೊಣನೂರು ಬಸ್ ನಿಲ್ದಾಣದ ಎದುರು ಬಿಎಸ್‌ಪಿ ಲಾಡ್ಜ್ ನ ಕೊಠಡಿಯೊಂದರಲ್ಲಿ ಜ.18 ರಂದು ಸಂಜೆ ಹರೀಶ್ ಎಂಬಾತನ ಹತ್ಯೆ ನಡೆದಿತ್ತು. ಹತ್ಯೆ ನಡೆದ ವಿಷಯ ತಿಳಿದ ತಕ್ಷಣ ಕೊಠಡಿಯಲ್ಲಿಯೇ ಲಕ್ಷ್ಮಣ್ ಎಂಬ ಆರೋಪಿ ಸಿಕ್ಕಿ ಬಿದ್ದಿದ್ದ. ಆತ ನೀಡಿದ್ದ ಹೇಳಿಕೆಯಂತೆ ಲಕ್ಷ್ಮಣನ ಅತ್ತಿಗೆ ಸುಶ್ಮಿತಾಳೊಂದಿಗೆ ಹರೀಶ್ ಅನೈತಿಕ ಸಂಬಂಧ ಹೊಂದಿದ್ದ. ಆ ಹಿನ್ನೆಲೆಯಲ್ಲಿ ಹರೀಶ್‌ನನ್ನು ಕೊಲೆ ಮಾಡಲಾಗಿತ್ತು ಎಂದು ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ತನಿಖೆ ವೇಳೆ ಒಂದು ಲಕ್ಷ ರೂ. ಸಾಲ ವಾಪಸ್ ಕೊಡಲಾಗದೆ ದಂಪತಿ ಯುವಕನನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.