ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ
Team Udayavani, Apr 26, 2021, 3:16 PM IST
ಚನ್ನರಾಯಪಟ್ಟಣ: ಕೊರೊನಾ 2ನೇ ಅಲೆಗೆತಾಲೂಕಿನಲ್ಲಿ 30ಕ್ಕೂ ಮಂದಿ ಮೃತಪಟ್ಟಿರುವುದರಿಂದ ಸ್ವಯಂ ಪ್ರೇರಣೆಯಿಂದಜನತೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಲುಮುಂದಾಗುತ್ತಿದ್ದಾರೆ. ಈ ನಡುವೆ ಸರ್ಕಾರಿಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಾಗಿದ್ದು ಜನಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿತಾಲೂಕಿನ ಹೋಬಳಿ ಕೇಂದ್ರ ಹಾಗೂ ಇತರಕಡೆ ಇರುವ ಎಲ್ಲಾ ಸಮುದಾಯ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಹಾಕಲಾಗುತ್ತಿದೆ. ಆದರೆ, ಕಳೆದ 5-6ದಿನಗಳಿಂದ ಲಸಿಕೆ ಕೊರತೆ ಉಂಟಾಗಿದ್ದುಆಸ್ಪತ್ರೆಗೆ ಆಗಮಿಸುವ ಜನತೆ ಲಸಿಕೆಪಡೆಯದೆ ಸರ್ಕಾರಕ್ಕೆ ಹಿಡಿಶಾಪಹಾಕಿಕೊಂಡು ಮನೆಗೆ ಮರಳುತ್ತಿದ್ದಾರೆ.
ತಾತ್ಸಾರ ತೋರಿದ್ದರು: ಮೊದಲು ತಾತ್ಸಾರ:ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆಸರ್ಕಾರ ಸಾಕಷ್ಟು ಮನವಿ ಮಾಡಿದರೂಜನತೆ ತಾತ್ಸಾರ ತೋರುತ್ತಿದ್ದರು. ಸಾಮಾಜಿಕಜಾಲಾ ತಾಣಗಳಲ್ಲಿ ಕಿಡಿಗೇಡಿಗಳುಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿಲಸಿಕೆ ಪಡೆದರೆ ಅಡ್ಡಪರಿಣಾಮ ಉಂಟಾಗಿಮೃತರಾಗುವ ಸಂಭವವೂ ಇದೆ ಎಂದಿದ್ದರು.
ಇದರಿಂದ ಸರ್ಕಾರ ನಿರೀಕ್ಷಿಸಿದಷ್ಟು ಮಂದಿಆಸ್ಪತ್ರೆಗೆ ಆಗಮಿಸಿ ಕೊರೊನಾ ಲಸಿಕೆಪಡೆಯಲಿಲ್ಲ, ಇನ್ನು ಕೊರೊನಾ ವಾರಿಯರ್Õಗಳೂ ಲಸಿಕೆ ಪಡೆಯಲು ತಾತ್ಸಾರತೋರುತ್ತಿದ್ದರು.
ಎಲ್ಲೆಲ್ಲಿ ಎಷ್ಟು ಮಂದಿಗೆ?: ಶ್ರವಣಬೆಳಗೊಳಹೋಬಳಿ ಕೇಂದ್ರದಲ್ಲಿನ ಸಮುದಾಯಆರೋಗ್ಯ ಕೇಂದ್ರದಲ್ಲಿ ಈ ಹಿಂದೆ 20 ರಿಂದ50 ಮಂದಿ ಪಡೆಯುತ್ತಿದ್ದರು. ಕಳೆದ 3-4ದಿನದಿಂದ 50 ರಿಂದ 70 ಮಂದಿ ಲಸಿಕೆಪಡೆಯುತ್ತಿದ್ದಾರೆ. ಹಿರೀಸಾವೆ ಆಸ್ಪತ್ರೆಯಲ್ಲಿನಿತ್ಯ 50 ರಿಂದ 60 ಮಂದಿ ಪಡೆಯುತ್ತಿದ್ದರು.ಈಗ 70 ರಿಂದ 90 ಮಂದಿಪಡೆಯುತ್ತಿದ್ದಾರೆ.
ತೋಟಿಯಲ್ಲಿ ಈ ಹಿಂದೆ15 ರಿಂದ 25 ಮಂದಿ ಪಡೆಯುತ್ತಿದ್ದರು.ಈಗ 30 ರಿಂದ 40 ಮಂದಿಪಡೆಯುತ್ತಿದ್ದಾರೆ. ದಿಡಗದಲ್ಲಿ ಈ ಹಿಂದೆ 35ರಿಂದ 50 ಈಗ 50 ರಿಂದ 90.ಚನ್ನರಾಯಪಟ್ಟಣದಲ್ಲಿ 80 ರಿಂದ 100ಮಂದಿ ಪಡೆಯುತ್ತಿದ್ದರು ಈಗ 120 ಕ್ಕೂಹೆಚ್ಚು ಮಂದಿ ಪಡೆಯುತ್ತಿದ್ದಾರೆ.
ಮೇ 1ರ ನಂತರ ಮತ್ತಷ್ಟು ಸಮಸ್ಯೆ:ಸರ್ಕಾರ ಈಗಾಗಲೇ 18 ವರ್ಷಮೇಲ್ಪಟ್ಟವರಿಗೂ ಲಸಿಕೆ ಹಾಕುವ ಭರವಸೆನೀಡಿದ್ದು ಮೇ 1ರ ನಂತರ ಚಾಲನೆನೀಡಲಾಗುವುದು ಎಂದು ಹೇಳಿದೆ.ಈಗಾಗಲೇ ಸಾಕಷ್ಟು ಸಮಸ್ಯೆಎದುರಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿಮೇ 1ರ ನಂತರ ಸಮಸ್ಯೆ ಮತ್ತಷ್ಟುಬಿಗಡಾಯಿಸಲಿದೆ.
ಅಷ್ಟರೊಳಗೆ ಜಿಲ್ಲಾಡಳಿತಹಾಗೂ ತಾಲೂಕು ಆಡಳಿತ ಸಭೆ ಮಾಡಿಸರ್ಕಾರಕ್ಕೆ ವರದಿ ನೀಡಿ ಅಗತ್ಯಕ್ಕೆಅನುಗುಣವಾಗಿ ಲಸಿಕೆ ಸರಬರಾಜಿಗೆಬೇಡಿಕೆ ಇಡದೆ ಹೋದರೆ ಮತ್ತಷ್ಟುತೊಂದರೆ ಎದುರಿಸಲು ಸಿದ್ಧರಾಗಬೇಕಿದೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.