ಬಿಸಿಲ ಝಳಕ್ಕೆ ಜೈನ ಕಾಶಿ ಯಾತ್ರಿಗಳ ಸಂಖ್ಯೆ ಕ್ಷೀಣ
Team Udayavani, Apr 25, 2023, 4:44 PM IST
ಚನ್ನರಾಯಪಟ್ಟಣ: ವಿಶ್ವ ವಿಖ್ಯಾತ ಶ್ರವಣಬೆಳಗೊಳದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು ಬಿಕೋ ಎನ್ನುತ್ತಿದೆ. ಪ್ರವಾಸಿ ತಾಣದಲ್ಲಿ ಜನರಿಲ್ಲದೆ ಬಣಗುಡುತ್ತಿರುವುದಕ್ಕೆ ಬಿಸಿಲ ಧಗೆಯೇ ಕಾರಣ ಎಂಬುದು ಸ್ಥಳೀಯರ ಮಾತು.
ಬೇಸಿಗೆ ಆರಂಭವಾದಾಗಿನಿಂದ ಬಿಸಿಲ ತಾಪ ಕನಿಷ್ಠ 25 ರಿಂದ ಗರಿಷ್ಠ 37 ಡಿಗ್ರಿವರೆಗೆ ಏರಿದೆ. ಈಗಲೂ ಅಷ್ಟೇ ಪ್ರಮಾಣದ ಬಿಸಿಲ ಪ್ರಖರತೆ ಮುಂದುವರೆದಿದೆ. ಹಾಗಾಗಿ ವೈರಾಗ್ಯ ಮೂರ್ತಿ ದರ್ಶನ ಪಡೆಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಪ್ರತಿ ನಿತ್ಯ ಐದಾರು ಸಾವಿರ ಮಂದಿ ಪ್ರವಾಸಿಗರು ಜೈನ ಕಾಶಿಗೆ ಭೇಟಿ ನೀಡಿ ಚಂದ್ರಗಿರಿ ಮತ್ತು ಇಂದ್ರಗಿರಿ ಎರಡೂ ಬೆಟ್ಟವನ್ನು ಏರುತ್ತಿದ್ದರು. ಪ್ರಸಕ್ತ ವರ್ಷ ಬಿಸಿಲ ಝಳ ಹೆಚ್ಚಿದ್ದು ದಿನೇ ದಿನೇ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ.
ತಾಪಮಾನ ಏರಿಕೆ: ಮಾರ್ಚ್ ಮೊದಲ ವಾರದಿಂದ ಪ್ರಾರಂಭವಾದ ಬೇಸಿಗೆ ಏಪ್ರಿಲ್ ಕೊನೆ ವಾರದ ಸಮೀಪಿಸುತ್ತಿದ್ದರು ಬಿಸಿಲ ತಾಪಮಾನ ಕಡೆ ಮೆ ಯಾಗಿಲ್ಲ. ಯುಗಾದಿ ಹಬ್ಬದ ಸಮಯದಲ್ಲಿ ವರುಣ ಕೃಪೆ ತೋರುತ್ತಾರೆ. ಅಂದು ಕೊಂಚ ಮಟ್ಟಿಗೆ ತಾಪಮಾನ ಕಡಿಮೆಯಾಗಬಹುದು ಎಂದುಕೊಂಡರೆ ಏಪ್ರಿಲ್ ತಿಂಗಳು ಅಂತ್ಯ ಆಗುತ್ತಿದ್ದರು ಮಳೆರಾಯನ ಕೃಪೆ ಇಲ್ಲದೆ ಬಂಡೆಗಳು ಬೆಂಕಿಯ ಚಂಡುಗಳಾಗುತ್ತಿವೆ.
ಆದಾಯವಿಲ್ಲ: ಶ್ರೀಕ್ಷೇತ್ರಕ್ಕೆ ಆಗಮಿಸುವ ಬೆರಳೆಣಿಕೆಯಷ್ಟು ಮಂದಿ ಪ್ರವಾಸಿಗರು ಬೆಳಗ್ಗೆ 6 ಗಂಟೆಗೆ ಬೆಟ್ಟವೇರಿ ದೇವರ ದರ್ಶನ ಪಡೆದು, ಬೆಟ್ಟದಲ್ಲಿನ ಬಸದಿಗಳನ್ನು ವೀಕ್ಷಣೆ ಮಾಡಿ 11 ಗಂಟೆಯ ಒಳಗೆ ಕ್ಷೇತ್ರದಿಂದ ಹೊರಗೆ ಹೋಗುತ್ತಿದ್ದಾರೆ. ಇದರಿಂದಾಗಿ ಶ್ರವಣಬೆಳಗೊಳದಲ್ಲಿ ವ್ಯಾಪಾರವಿಲ್ಲದೆ ವರ್ತಕರು ತಲೆ ಮೇಲೆ ಕೈಹೊತ್ತು ಕೊಂಡು ಕೂರುವಂತಾಗಿದೆ. ಅಂಗಡಿಗಳತ್ತ ಗ್ರಾಹಕರು ಸುಳಿಯುತ್ತಿಲ್ಲ. ಇದರಿಂದಾಗಿ ಆದಾಯವಿಲ್ಲದೆ ವರ್ತಕರು ವಾಣಿಜ್ಯ ಸಂಕಿರ್ಣದ ಬಾಡಿಕೆ ಕಟ್ಟಲು ಸಾಲ ಮಾಡುವಂತಾಗಿದೆ.
ಕಲ್ಲಂಗಡಿಗೆ ಬೇಡಿಕೆ: ರಸ್ತೆ ಬದಿ ಕಲ್ಲಂಗಡಿ ಹಣ್ಣು ಮಾರಾಟ ಮಾರುವವರಿಗೆ ಎಲ್ಲಿಲ್ಲದೆ ಬೇಡಿಕೆಯಿದೆ. ಬೆಟ್ಟ ಏರುವ ಪ್ರವಾಸಿ ಗರು ಕಲ್ಲಂಗಡಿ ಹೊತ್ತು ಹೋಗುತ್ತಿದ್ದು, ನೆತ್ತಿಯ ಮೇಲೆ ಸೂರ್ಯನ ತಾಪ, ಕಾದ ಬಂಡೆಯ ಚುರುಕು ಎಷ್ಟು ನೀರು ಕುಡಿದರು ಚಾರಣಿಗಯಾತ್ರಿಗಳ ದಾಹ ನೀಗುತ್ತಿಲ್ಲ. ಆದ್ದರಿಂದ ಕ್ಷೇತ್ರಕ್ಕೆ ಆಗಮಿಸುವ ರಾಜ್ಯ ಮತ್ತು ಹೊರ ರಾಜ್ಯದ ಪ್ರವಾಸಿಗರು ಕಲ್ಲಂಗಡಿಗೆ ಮಾರು ಹೋಗುತ್ತಿದ್ದಾರೆ.
ಬೇಸಿಗೆ ರಜೆ ಇದ್ದರೂ ಸುಳಿಯುತ್ತಿಲ್ಲ: ಮಕ್ಕಳಿಗೆ ಪರೀಕ್ಷೆ ಇರುವ ಸಮಯದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದು ಮಾಮೂಲು. ಆದರೆ, ಸಾಲು ಸಾಲು ರಜೆಗಳು ಮಕ್ಕಳಿಗೆ ಬೇಸಿಗೆ ರಜೆ ಇದ್ದರೂ ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ. ಪ್ರತಿ ವರ್ಷ ನಿತ್ಯವೂ ನೂರಾರು ಮಂದಿ ವಿದೇಶಿ ಪ್ರವಾಸಿಗರು ಕ್ಷೇತ್ರದಲ್ಲಿ ಕಾಣಿಸುತ್ತಿದ್ದರು. ಈಗ ಅವರ ಸಂಖ್ಯೆಯೂ ಇಳಿಮುಖವಾಗಿದೆ ಎನ್ನುತ್ತಾರೆ ವರ್ತಕ ಶ್ರೇಯಸ್.
ಉತ್ತರ ಭಾರತದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ದೆಹಲಿ ರಾಜ್ಯಗಳಿಂದ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದರು, ಬಿಸಿಲಿನ ತಾಪಕ್ಕೆ ಕ್ಷೇತ್ರಕ್ಕೆ ಆಗಮಿಸುವ ಪ್ರವಾ ಸಿಗರ ಸಂಖ್ಯೆ ಕಡಿಮೆಯಾಗಿದೆ. ಶಾಲಾ- ಕಾಲೇಜುಗಳು ರಜೆ ತಿಂಗಳಲ್ಲಿ ಬಿಕೋ ಎನ್ನುತ್ತಿವೆ. ಜೂನ್ ಇಲ್ಲವೆ ಜುಲೈ ತಿಂಗಳ ಲ್ಲಿಯಾದರು ಹೆಚ್ಚು ಮಂದಿ ಭೇಟಿ ನೀಡಬಹುದು. – ಚೇತನ್ ಜೈನ್, ಶ್ರವಣಬೆಳಗೊಳ
– ಶಾಮಸುಂದರ್ ಕೆ ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.