ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ
Team Udayavani, Jan 3, 2019, 9:56 AM IST
ತುಮಕೂರು: ಭಕ್ತರ ಪಾಲಿನ ನಡೆದಾಡುವ ದೇವರ ಆರೋಗ್ಯದಲ್ಲಿ ದಿನೇ ದಿನೆ ಚೇತರಿಕೆ ಕಾಣುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ. ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿರುವ ಶ್ರೀಗಳು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಹಾಸಿಗೆ ಯಲ್ಲೇ ಮಂತ್ರ ಪಠಣೆ ನಡೆಸಿರೋ ಶ್ರೀಗಳು ಶಿವಸ್ತುತಿ ಹೇಳಿ ಭಕ್ತರ ಆತಂಕವನ್ನ ದೂರಾಗಿಸಿದ್ದಾರೆ.
ಈ ನಡುವೆ ಬುಧವಾರವೂ ಸಹ ಅನೇಕ ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಗಳ ಶ್ವಾಸಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಶ್ರೀಗಳ ಸಹ ವೈದ್ಯರು ರಕ್ತ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಸೋಂಕು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವುದು ದೃಢಪಟ್ಟಿದೆ. ದಿನನಿತ್ಯದಂತೆ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯ ಶ್ರೀಗಳ ಆರೋಗ್ಯ
ಇನ್ನಷ್ಟು ಸುಧಾರಿಸಿರುವುದು ಭಕ್ತರಲ್ಲಿ ಹರ್ಷ ತಂದಿದೆ.
ಶ್ರೀಗಳ ಆರೋಗ್ಯ ತಪಾಸಣೆ: ಎಂದಿನಂತೆ ಬುಧವಾರವೂ ಸಹ ಶ್ರೀಗಳಿಗೆ ಎಲ್ಲಾ ರೀತಿ ತಪಾಸಣೆ ನಡೆಸಿದ್ದಾರೆ. ಮುಂಜಾನೆಯೇ ರಕ್ತ ತಪಾಸಣೆ, ಬ್ಲಿಡ್ ಪ್ರಶರ್, ಶ್ರೀಗಳ ಉಸಿರಾಟ ಸೇರಿದಂತೆ ಎಲ್ಲವನ್ನೂ ತಪಾಸಣೆ ನಡೆಸಿರುವ ವೈದ್ಯರು, ಶ್ರೀಗಳ ಆರೋಗ್ಯ ಸ್ಥಿತಿ ಚೇತರಿಕೆಯಾಗಿರುವ ಕುರಿತು ಮಾಹಿತಿ ನೀಡಿದರು.
ಬಿಜಿಎಸ್ ವೈದ್ಯರಿಂದ ತಪಾಸಣೆ: ಸಿದ್ಧಗಂಗಾ ಮಠದ ಹಿರಿಯ ಶ್ರೀಗಳ ಆರೋಗ್ಯವನ್ನು ಬುಧವಾರ ಸಂಜೆ ಬಿಜಿಎಸ್ ವೈದ್ಯ ಡಾ.ರವೀಂದ್ರ ತಪಾಸಣೆ ನಡೆಸಿದರು. ನಂತರ ವರದಿಗಾರರೊಂದಿಗೆ ಮಾತನಾಡಿ, ಶ್ರೀಗಳಿಗೆ ಶ್ವಾಸಕೋಶದ ಸೊಂಕಿದ್ದು, ಅದರಲ್ಲಿ ಸ್ವಲ್ಪ ನೀರು ಸೇರಿಕೊಂಡಿದೆ. ಅದನ್ನು ತೆಗೆಯುವ ಕೆಲಸ ನಡೆತ್ತಿದೆ. ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಿಂದ ಬಿಜಿಎಸ್ ಆಸ್ಪತ್ರೆಯಿಂದ ಡಾ.ರವೀಂದ್ರನಾಥ ರೆಡ್ಡಿ, ಡಾ ಸಂದೀಪ್, ಜಯದೇವ ಆಸ್ಪತ್ರೆ ಯಿಂದ ಡಾ.ನಾಗೇಶ್ ಬಂದುಶ್ರೀಗಳಿಗೆ ಹೃದಯ ಪರೀಕ್ಷಿಸಿದ್ದು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರು.
ಇದರ ಜೊತೆಗೆ ಶ್ರೀಗಳ ಪಲ್ಸ… ರೇಟ್ ಕೂಡ ಚೆನ್ನಾಗಿದೆ. ಶ್ವಾಸಕೋಶದಲ್ಲಿ ಸ್ವಲ್ಪ ನೀರಿದ್ದು ವೈದ್ಯರ ತಂಡ ಚರ್ಚಿಸಿ ತಪಾಸಣೆ ಮಾಡಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿ ಸುತ್ತಿದ್ದು ಶ್ವಾಸ ಕೋಶದ ಸೋಂಕು ಸ್ವಲ್ಪ ಮಟ್ಟಿಗೆ ತೊಂದರೆ ನೀಡುತ್ತಿದೆ ಅದನ್ನು ನಿವಾರಿಸಬೇಕಿದೆ. ಶ್ರೀಗಳ ದೇಹದಲ್ಲಿ ಪ್ರೋಟೀನ್ ಕಡಿಮೆಯಾಗಿರುವ ಕಾರಣ ನೀರು ಸೇರಿಕೊಳ್ಳುತ್ತಿದೆ, ಪ್ರೋಟೀನ್ ನೀಡಿ ನೀರು ಸೇರುವುದನ್ನು ಕಡಿಮೆ ಮಾಡಬೇಕು. ಸದ್ಯ ಬಾಯಿ ಹಾಗೂ ಟ್ಯೂಬ್ ಮೂಲಕ ದ್ರವರೂಪದ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರೋಟೀನ್ ದೇಹದಲ್ಲಿ ಕನಿಷ್ಠ 3.5 ಇರಬೇಕು , ಆದರೆ ಶ್ರೀ ಗಳ ದೇಹದಲ್ಲಿ 2.5 ಪ್ರೋಟೀನ್ ಮಾತ್ರ ಇದೆ. ಇದರಿಂದ ನೀರು ಸೇರಿದೆ, ಶ್ರೀಗಳಿಗೆ ಇನ್ನೂ ಹೆಚ್ಚಿನ ವಿಶ್ರಾಂತಿ ಬೇಕು ಎಂದು ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಹೇಳಿದರು.
ಸಿದ್ದಗಂಗಾ ಮಠಕ್ಕೆ ವಿವಿಧ ಗಣ್ಯರು ಭೇಟಿ ಬುಧವಾರ ಶ್ರೀಮಠಕ್ಕೆ ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯಸಚೇತಕ ಮಹಂತೇಶ್ ಕೌಟಗಿ ಮಠ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಮಾಜಿ ಸಚಿವ ವಿ.ಸೋಮಣ್ಣ, ಸೊಗಡು ಎಸ್.ಶಿವಣ್ಣ ಕುಮಾರ್ ಬಂಗಾರಪ್ಪ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಸೇರಿದಂತೆ ವಿವಿಧ ಗಣ್ಯರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ ಮಾತನಾಡಿ, ಶ್ರೀಗಳ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದೆವು ಅವರ ಮಾತುಗಳು ಸರಿಯಾಗಿ ಕೇಳಿಸಲಿಲ್ಲ. ಶ್ರೀಗಳಿಗೆ ಸೋಂಕು ಕಡಿಮೆಯಾಗಿದ್ದು, ಆರೋಗ್ಯ ಇನ್ನೂ ಸ್ವಲ್ಪ ದಿನಗಳಲ್ಲಿ ಸರಿ ಹೋಗಲಿದೆ. ಅವರ ಆಶೀರ್ವಾದ ರಾಜ್ಯಕ್ಕೆ ಬೇಕು, ಅವರ ಆಯುಷ್ಯ ವೃದ್ಧಿಯಾಗಲಿ ಎಂದರು.
ಶ್ರೀಗಳಿಂದ ಮಂತ್ರ ಪಠಣ ಶ್ರೀಗಳು ತಮ್ಮ ವಿಶ್ರಾಂತಿ ನಡುವೆಯೂ ಹಾಸಿಗೆ ಯಲ್ಲೇ ಮಂತ್ರ ಪಠಿಸಿ ಇಡೀ ಭಕ್ತ ಸಮೂಹ ವನ್ನು ನಿಬ್ಬೆರಗಾಗಿಸಿದ್ದಾರೆ. ಇಷ್ಟಲಿಂಗ ಪೂಜೆ ವೇಳೆ ಶಿಷ್ಯರ ಶಿವಸ್ತುತಿಗೆ ಧ್ವನಿಗೂಡಿಸಿದ ಶ್ರೀಗಳು, ಅವರು ಹೇಳುತ್ತಿದ್ದ ಮಂತ್ರವನ್ನ ತಾವೂ ಸಹ ಪಠಿಸಿದ್ದಾರೆ. ಶ್ರೀಗಳ ಮಂತ್ರ ಪಠಣ ಮಾಡಿದರು ಎಂದು ಶ್ರೀಗಳ ಆರೋಗ್ಯ ನೋಡಿಕೊಳ್ಳುವರಿಂದ ತಿಳಿದು ಬಂದಿದ್ದು ಇದು ಭಕ್ತರಲ್ಲಿ ನಿರಾಳ ಭಾವ ಮೂಡಿಸಿದೆ. ಈ ಮೂಲಕ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ ಅನ್ನೋದು ಸ್ಪಷ್ಟ ಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.