ಲಕ್ಷ್ಮೀ ನರಸಿಂಹ ಸ್ವಾಮಿ ದರ್ಶನ ಪಡೆದ ಗಾಯಕ
Team Udayavani, Feb 25, 2021, 7:28 PM IST
ಹೊಳೆನರಸೀಪುರ: ಪಟ್ಟಣದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಖ್ಯಾತ ಗಾಯಕ ವಿಜಯಪ್ರಕಾಶ್ ತಮ್ಮ ಕುಟುಂಬ ಸದಸ್ಯರೊಂದಿಗೆ ಭೇಟಿ ದೇವರ ದರ್ಶನ ಪಡೆದರು.
ಹೊಳೆನರಸೀಪುರದ ಈ ದೇವಸ್ಥಾನದ ಬಗ್ಗೆ ನಮ್ಮ ಹಿರಿಯರ ಮೂಲಕ ತಿಳಿದುಕೊಂಡಿದ್ದೆ. ಲಕ್ಷ್ಮೀನರಸಿಂಹ ಸ್ವಾಮಿ ನಮ್ಮ ಮನೆ ದೇವರಾಗಿದೆ. ಒಂದು ಬಾರಿ ಭೇಟಿ ನೀಡಿ ಆಶೀರ್ವಾದ ಪಡೆಯಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಅದು ಈಗ ಪೂರೈಸಿದ್ದೇನೆ. ನನಗೆ ದೇವರ ಮೂರ್ತಿ, ಇಲ್ಲಿನ ಪೂಜಾ ಪದ್ಧತಿ ನೋಡಿ ಸಂತೋಷವಾಯಿತು ಎಂದು ಸುದ್ದಿಗಾರರಿಗೆ ವಿಜಯ್ ಪ್ರಕಾಶ್ ಹೇಳಿದರು.
ಈ ವೇಳೆ ಭಕ್ತಿವರ್ಧನ ಪ್ರತಿಷ್ಠಾನದ ಅಧ್ಯಕ್ಷ ಎ.ಶ್ರೀಧರ್ ಮತ್ತು ತಂಡ ಅವರನ್ನು ಸನ್ಮಾನಿಸಿ ಗೌರವಿಸಿತು.