ಕಳಪೆ ತೊಗರಿಬೇಳೆ ವಿತರಣೆ ತಕ್ಷಣ ನಿಲ್ಲಿಸಿ
Team Udayavani, Jun 29, 2020, 8:03 AM IST
ಹಾಸನ: ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಯಲ್ಲಿ ಕಳಪೆ ಗುಣಮಟ್ಟದ ತೊಗರಿಬೇಳೆ ವಿತರಣೆ ಯಾಗುತ್ತಿದ್ದು, ತಕ್ಷಣ ವಿತರಣೆಯನ್ನು ನಿಲ್ಲಿಸಿ ಕಳಪೆ ಬೇಳೆ ವಿತರಣೆಯ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯಡಿ ಕಳೆದ 2 ತಿಂಗಳಲ್ಲಿ 711 ಕ್ವಿಂಟಲ್ ತೊಗರಿಬೇಳೆ ಪೂರೈಕೆಯಾಗಿದ್ದು, ಹಾಳಾಗಿ ರುವ ತೊಗರಿ ಬೇಳೆ ವಿತರಣೆ ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಬೇಳೆ ವಿತರಣೆ ಮಾಡಕೂಡದು ಎಂದು ತೀರ್ಮಾನಿಸಲಾಗಿತ್ತು. ಆದರೂ ಕೆಲ ತಾಲೂಕುಗಳಿಗೆ ಕಳಪೆ ತೊಗರಿ ಬೇಳೆಯನ್ನೇ ಪೂರೈಕೆ ಮಾಡಲಾಗಿದೆ. ಮೊದಲು ಪರಿಶೀಲಿಸಿ ನಂತರ ತೊಗರಿಬೇಳೆ ಪಡೆಯಬೇಕಿತ್ತು.
ಏಕ ಪಕ್ಷೀಯವಾಗಿ ಹಂಚಿಕೆ ಮಾಡಲಾಗಿದೆ ಎಂದು ಗೋಪಾಲಸ್ವಾಮಿ ಆಪಾದಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೇ ಶಿಕ್ಷಣ ಸಚಿವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಕ್ರಮಕೈಗೊಳ್ಳಬೇಕು. ಕಳಪೆ ತೊಗರಿ ಬೇಳೆ ವಿತರಣೆ ನಿಲ್ಲಿಸದಿದ್ದರೆ ಕಾಂಗ್ರೆಸ್ನಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಸಿದರು. ಅಕ್ಷರ ದಾಸೋಹ ಯೋಜನೆಗೆ ತೊಗರಿಬೇಳೆ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಗಮನ ವನ್ನೂ ಸೆಳೆಯುವೆ ಎಂದರು. ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಮಾತ ನಾಡಿ, ಈ ವರ್ಷದ ಬಿತ್ತನೆ ಆಲೂಗೆಡ್ಡೆ ಕಳಪೆಯಾಗಿದ್ದು, ಭೂಮಿಯಲ್ಲೆ ಕೊಳೆತುಹೋಗುತ್ತಿದೆ. ಹಾಸನ ಶಾಸಕರು ಆಲೂಗಡ್ಡೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಆಲೂಗಡ್ಡೆ ಬೆಳೆ ನಾಶದ ಸಮೀಕ್ಷೆ ನಡೆಸುವಾಗಲೂ ಶಾಸಕ ಪ್ರೀತಂಗೌಡ ನಾಪತ್ತೆಯಾಗಿದ್ದರು ಎಂದು ಆಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.