ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆಗೆ ಶ್ರಮಿಸಿ
Team Udayavani, Feb 18, 2020, 3:00 AM IST
ಸಕಲೇಶಪುರ: ಬೂತ್ ಮಟ್ಟದಲ್ಲಿ ಬಿಜೆಸಂಘಟನೆಯನ್ನು ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕೆಂದು ಮೈಸೂರು ವಿಭಾಗೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೇಳಿದರು.
ಪಟ್ಟಣದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೂತನ ಬಿಜೆಪಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ದಿ. ಬಿ.ಬಿ ಶಿವಪ್ಪ ಅವರು ಅಪಾರವಾಗಿ ಶ್ರಮಿಸಿದ್ದರು. ಆದರೆ ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಹೊಂದುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ನೂತನ ಬಿಜೆಪಿ ಅಧ್ಯಕ್ಷರು ಬೂತ್ ಮಟ್ಟದಿಂದ ಸಂಘಟಿಸಬೇಕಾಗಿದೆ ಎಂದರು.
ಜನರಿಗೆ ಸರ್ಕಾರದ ಸಾಧನೆ ತಿಳಿಸಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರಗಳು ನೀಡುತ್ತಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿದರೆ ಸಾಕು ಮತ್ತಷ್ಟು ಮತದಾರರು ಬಿಜೆಪಿಯತ್ತ ಬರುತ್ತಾರೆ ಎಂದರು.
ಅಧಿಕಾರ ಹಸ್ತಾಂತರ: ಕಾರ್ಯಕ್ರಮದ ಅಂಗವಾಗಿ ನಿಕಟ ಪೂರ್ವ ಮಂಡಲ ಅಧ್ಯಕ್ಷ ಬಿ.ಎಸ್ ಪ್ರತಾಪ್ ಅವರು ಬಿಜೆಪಿ ಬಾವುಟವನ್ನು ನೂತನ ಅಧ್ಯಕ್ಷ ಮಂಜುನಾಥ್ ಸಾಂ ಅವರಿಗೆ ನೀಡುವ ಮುಖಾಂತರ ಅಧಿಕಾರ ಹಸ್ತಾಂತರಿಸಲಾಯಿತು. ಕೃಷಿ ಪತ್ತಿನ ಸಹಾಕರ ಸಂಘದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ಮಾಜಿ ಶಾಸಕ ಬಿ.ಆರ್. ಗುರುದೇವ್, ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್, ತಾಪಂ ಅಧ್ಯಕ್ಷೆ ಶ್ವೇತಾ, ತಾಪಂ ಸದಸ್ಯ ಸಿಮೆಂಟ್ ಮಂಜು, ಬಿಜೆಪಿ ರಾಜ್ಯ ಪದಾಧಿಕಾರಿಗಳಾದ ಹೆತ್ತೂರು ವಿಜಯ್‌ಕುಮಾರ್, ಜೈಮಾರುತಿ ದೇವರಾಜ್, ಹೆತ್ತೂರು ದೇವರಾಜ್, ಪುರಸಭಾ ಸದಸ್ಯೆ ರೇಖಾ ರುದ್ರಕುಮಾರ್, ಬಿಜೆಪಿ ತಾಲೂಕು ಪ್ರಭಾರಿ ಅಮಿತ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಯರಾದ ನರೇಶ್, ಷಣ್ಮುಖ, ನಗರ ಅಧ್ಯಕ್ಷ ದೀಪಕ್, ನಗರ ಕಾರ್ಯದರ್ಶಿ ದುಷ್ಯಂತ್ ಮುಂತಾದವರು ಹಾಜರಿದ್ದರು.
ಸಂಘಟನಾ ಪರ್ವ: ಬಿಜೆಪಿ ನಿಯೋಜಿತ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಹಾಸನದಲ್ಲಿ ಬಿಜೆಪಿ ಸಂಘಟನಾ ಪರ್ವ ಆರಂಭಗೊಂಡಿದ್ದು, ರಾಜ್ಯದಲ್ಲೆ ಮೊದಲಿಗೆ ಎಲ್ಲಾ ಮಂಡಲಗಳಲ್ಲೂ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಸೋಮಶೇಖರ್ ಹಾಗೂ ಬೇಲೂರಿನಿಂದ ನಾನು ಕೆಲವೇ ಕೆಲವು ಮತಗಳಿಂದ ಪರಾಜಿತರಾಗಿದ್ದೆವು. ಪಕ್ಷದ ಕೆಲವು ಕಾರ್ಯಕರ್ತರೇ ಕೈಕೊಟ್ಟಿದ್ದರಿಂದ ಈ ರೀತಿಯ ಫಲಿತಾಂಶ ಹೊರಹೊಮ್ಮಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯಾಗಬಾರದು, ಪ್ರತಿಯೊಬ್ಬ ಕಾರ್ಯಕರ್ತರು ವ್ಯಕ್ತಿಯ ಹಿಂದೆ ಹೋಗದೆ ಪಕ್ಷಕ್ಕಾಗಿ ಶ್ರಮಿಸಬೇಕು ಎಂದರು.
ಜಿಲ್ಲೆಯಲ್ಲಿ ಬಿಜೆಪಿಯತ್ತ ಒಲವು: ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಬದಲಾವಣೆ ಉಂಟಾಗುತ್ತಿದ್ದು ಜನ ಬಿಜೆಪಿಯತ್ತ ವಾಲುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಜೆಡಿಎಸ್ ಮುಖಂಡ ರೇವಣ್ಣನವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡುವ ಮಾತನಾಡುತ್ತಿದ್ದಾರೆ ಅವರು ಎಡಗಡೆ ಪ್ರತಿಭಟನೆ ಮಾಡಿದರೆ ನಾವು ಬಲಗಡೆ ಕೂತು ಪ್ರತಿಭಟನೆ ಮಾಡುತ್ತೇವೆ.
ನೂತನ ಅಧ್ಯಕ್ಷರಿಗೆ ನಾವೆಲ್ಲಾ ಶಕ್ತಿ ತುಂಬೋಣ, ಅವರ ನೇತೃತ್ವದಲ್ಲಿ ಸಿಎಎ ಪರ ಬೃಹತ್ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಯೋಜಿಸೋಣ. ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಆರ್ಥಿಕವಾಗಿ, ರಾಜಕೀಯವಾಗಿ ಮೇಲೆತ್ತುವ ಪ್ರಯತ್ನ ಮಾಡೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.