![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 12, 2019, 3:00 AM IST
ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಹಾಸನ ಜಿಲ್ಲೆಯ ಕಾರೇಕೆರೆ ಕೃಷಿ ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಅರಿವು ಕಾರ್ಯಾನುಭವ ಶಿಬಿರಕ್ಕಾಗಿ ಕಳೆದ 90 ದಿವಸದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು, ರೈತರೊಂದಿಗೆ ಬೆರೆತು ಕೃಷಿ ಸಮಸ್ಯೆ ಅಧ್ಯಯನ ಪರಿಹಾರೋಪಾಯ ಕಾಣುವಲ್ಲಿ ಯಶಸ್ವಿಯಾಗಿದ್ದು ಗ್ರಾಮ ವಾಸ್ತವ್ಯ ಸಂಪನ್ನಗೊಂಡಿದೆ.
ತಾಲೂಕಿನ ಶ್ರವಣಬೆಳಗೊಳ ವಡ್ಡರಹಳ್ಳಿ, ಹಿರೀಬಿಳ್ತಿ, ಚಿಕ್ಕಬಿಳತಿ, ಜತ್ತೇನಹಳ್ಳಿ, ಬರಾಳು, ಕಾಂತರಾಜಪುರ, ಅಜ್ಜೆನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ರಾಗಿ, ಸೂರ್ಯಕಾಂತಿ, ನೆಲಗಡಲೆ, ಭತ್ತನಾಟಿ, ಮೆಕ್ಕಜೋಳ ಬೆಳೆಗಳನ್ನು ಬೆಳೆದು ಅವುಗಳನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎನ್ನುವುದು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಹೈನುಗಾರಿಕೆ, ಕೋಳಿ ಸಾಕಾಣೆ, ಅಣಬೆ ಬೆಳೆಯುವುದು ಹೇಗೆ ಎನ್ನುವುದನ್ನು ರೈತರಿಗೆ ತೋರಿಸಿದಲ್ಲದೇ ಕೃಷಿ ಸಮಸ್ಯೆಗಳ ಅಧ್ಯಯನ ಪರಿಹಾರೋಪಾಯಗಳನ್ನು ಪರಸ್ಪರ ಚರ್ಚಿಸುವುದರೊಂದಿಗೆ ರೈತರಿಗೆ ಸಮಗ್ರ ಮಾಹಿತಿ ನೀಡಿದರು. ಬೀದಿ ನಾಟಕ ಮಾಡುವ ಮೂಲಕ ಅಹಲವು ವಿಷಯಗಳನ್ನು ರೈತರಿಗೆ ತಿಳಿಸಿದ್ದರು.
ವಿದ್ಯಾರ್ಥಿಗಳ 6 ತಂಡ ರಚನೆ: ಕಾರೇಕೆರೆ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ.ಎನ್. ದೇವಕುಮಾರ್ ಮಾರ್ಗದರ್ಶನದಲ್ಲಿ ಸಂಯೋಜಕರಾದ ಡಾ. ವಿನಯಕುಮಾರ್ ಮುಂದಾಳತ್ವದಲ್ಲಿ ನಡೆದ ಶಿಬಿರದಲ್ಲಿ 200 ವಿದ್ಯಾರ್ಥಿಗಳನ್ನು 6 ತಂಡಗಳಾಗಿ ರಚಿಸಿ, ಆಯ್ಕೆ ಮಾಡಿದ 6 ಗ್ರಾಮಗಳಲ್ಲಿಯೇ ಕೃಷಿ ತಂತ್ರಜ್ಞರ ಮೇಲ್ವಿಚಾರಣೆಯಲ್ಲಿ ವಾಸ್ತವ್ಯ ಮಾಡಿ, ರೈತರಿಗೆ ಅಗತ್ಯ ಮಾಹಿತಿಗಳನ್ನು ಪ್ರಾತ್ಯಕ್ಷಿಕಗೆ ಮೂಲಕ ನೀಡಿದಲ್ಲದೆ ಹಲವು ತಜ್ಞರು ಸಂವಾದ ನಡೆಸಿದರು.
ಬೆಳೆ ನಷ್ಟಕ್ಕೆ ಆತ್ಮಹತ್ಯೆ ಪರಿಹಾರವಲ್ಲ: ಆರು ಗ್ರಾಮಗಳ 5600 ಜನರಿಗೆ ಮಾಹಿತಿಯನ್ನು ನೀಡಿದ್ದಾರೆ. ರೈತರೊಂದಿಗೆ ಸೇರಿ 142 ಕಾರ್ಯಕ್ರಮವನ್ನು ಕೃಷಿಯ ಬಗ್ಗೆ ರೂಪಿಸಲಾಗಿತ್ತು. 4,691 ರೈತರಿಗೆ ತಾಂತ್ರಿಕ ಸಲಹೆ ನೀಡಲಾಗಿದೆ, ಬೆಳೆ ನಷ್ಟವಾದರೆ ಆತ್ಮಹತ್ಯೆಯೇ ಪರಿಹಾರವಲ್ಲ. ಸರ್ಕಾರ ಒದಗಿಸಿರುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಿ.
ಕುಟುಂಬದ ಅವಲಂಬಿತರನ್ನು ಅನಾಥರನ್ನಾಗಿ ಮಾಡಬೇಡಿ ಎಂದು ಶಿಬಿರಾರ್ಥಿಗಳಾದ ಬೃಂದಾ, ಮೇಘನಾ, ಅಜಿತ್, ಸಿದ್ದೇಶ, ಸಿಂಧು, ಲೇಖ, ಹರ್ಷ, ಸತೀಶ ಸಲಹೆ ನೀಡಿದರು. ಶಿಬಿರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕಾರ ನೀಡಿದ್ದ ಗ್ರಾಮದ 36 ರೈತರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.