ಸಚಿವರ ತಂಡದಿಂದ ಬರ ಪರಿಸ್ಥಿತಿ ಅಧ್ಯಯನ
Team Udayavani, Feb 2, 2019, 7:09 AM IST
ಅರಸೀಕೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ನೇತೃತ್ವದ ತಂಡ ಶುಕ್ರವಾರ ಮಧ್ಯಾಹ್ನ ಪ್ರವಾಸ ಕೈಗೊಂಡು ಬರ ಅಧ್ಯಯನ ನಡೆಸಿತು.
ಕಡೂರು ಮಾರ್ಗವಾಗಿ ತಾಲೂಕಿಗೆ ಆಗಮಿಸಿದ ಅಧ್ಯಯನ ತಂಡಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಲೂಕಿನ ಗಡಿ ಬಸವನಹಳ್ಳಿ ಗೇಟ್ ಸಮೀಪ ಸ್ವಾಗತಿಸಿದರು.
ನಂತರ ಬಾಣಾವರ, ಜಾವಗಲ್ ಹಾಗೂ ಗಂಡಸಿ ಹೋಬಳಿಯ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಬರ ಅಧ್ಯಯನದ ಜೊತೆಗೆ ಪ್ರಗತಿಯಲ್ಲಿರುವ ಬಹು ಗ್ರಾಮ ಕುಡಿವ ನೀರು ಪೂರೈಕೆ ಮತ್ತು ನರೇಗಾ ಯೋಜನೆಯ ಅಭಿವೃದ್ಧಿ ಕಾರ್ಯಗಳನ್ನು ಅಧ್ಯಯನ ತಂಡ ಪರಿಶೀಲನೆ ನಡೆಸಿತು.
ಅಂಕಿ, ಅಂಶ ವಿವರಣೆ: ಸತತ ಮಳೆಯ ವೈಪಲ್ಯ ದಿಂದ ಬರದ ಬವಣೆಗೆ ಸಿಲುಕಿ ತತ್ತರಿಸಿರುವ ತಾಲೂ ಕಿನ ನೈಜ್ಯ ಪರಿಸ್ಥಿತಿಯನ್ನ ಅಧ್ಯಯನ ತಂಡ ಸಾಗುವ ಮಾಗದ ಉದ್ದಕ್ಕೂ ರಸ್ತೆ ಬದಿಯಲ್ಲಿ ಒಣಗಿ ನಿಂತಿದ್ದ ಸಾಲು ಮರಗಿಡಗಳು ಬಿತ್ತನೆ ಕಾಣದ ಹೊಲಗಳು ಹಾಗೂ ಕೆರೆ ಕಟ್ಟೆಗಳು ಬರ ಪರಿಸ್ಥಿತಿಗ ಸಾಕ್ಷಿಯಾಗಿ ದ್ದವು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಂಕಿ, ಅಂಶಗಳ ಸಹಿತ ದಾಖಲೆ ಒದಗಿಸುವ ಮೂಲಕ ತಾಲೂಕಿನ ಜನತೆ ಎದುರಿ ಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿರುವ ತಾಲೂಕಿನ ರೈತರು ಅಧ್ಯಯನಕ್ಕೆಂದು ಆಗಮಿಸಿದ ಮಂತ್ರಿಗಳಿಗೆ ಕುಡಿಯಲು ಎಳನೀರು ಕೊಡುವ ಮೂಲಕ ಔದ್ಯಾರತೆ ಮೆರೆದರು. ದಶಕಗಳ ಕಾಲದಿಂದ ನಾವು ಎದುರಿಸುತ್ತಾ ಬಂದಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾದ ಎತ್ತಿನ ಹೊಳೆ ನೀರಾವರಿ ಯೋಜನೆಯ ಮೂಲಕ ನೀರು ಒದಗಿಸುವ ಜೊತೆಗೆ ಪ್ರಕೃತಿ ವೈಪರಿತ್ಯದಿಂದ ಮಳೆ, ಬೆಳೆ ಇಲ್ಲದೆ ಬರದ ಸಂಕಷ್ಟದಲ್ಲಿರುವ ರೈತ ಸಮು ದಾಯಕ್ಕೆ ಪರಿಹಾರ ನೀಡುವಂತೆ ಗ್ರಾಮೀಣ ಜನತೆ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಗ್ರಾಮಗಳಿಗೆ ನೀರು ಪೂರೈಕೆ: ತಾಲೂಕು ಬರಅಧ್ಯ ಯನ ನಡೆಸಿದ ಬಳಿಕ ಗ್ರಾಮೀಣಾಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಸುದ್ದಿಗಾರ ರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯಡಿ ಹಾಗೂ ಬಹುಗ್ರಾಮ ಯೋಜನೆಯಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸರ್ಕಾರದ ಎರಡು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.
ಸರ್ಕಾರಕ್ಕೆ ವರದಿ: ಸಾರ್ವಜನಿಕರು ಹಾಗೂ ಜನಪ್ರತಿ ನಿಧಿಗಳೊಂದಿಗೆ ತಂಡ ಸುರ್ದೀಘ ಸಮಾಲೋಚನೆ ನಡೆಸಿದ್ದು ಮುಂದೆ ಆಗಬೇಕಿರುವ ಅಭಿವೃದ್ಧಿ ಕೆಲಸ, ಕಾರ್ಯಗಳ ಕುರಿತು ಸಂಪೂರ್ಣ ವರದಿಯನ್ನು ಸರ್ಕಾರ ಸಲ್ಲಿಸಲಾಗುವುದು. ಅಲ್ಲದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗುವುದೆಂದು ಹೇಳಿದರು.
ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ, ಬರ ಪೀಡಿತ ಪ್ರದೇಶ ಮತ್ತು ನರೇಗಾ ಹಾಗೂ ತಾಲೂಕಿನ 530 ಹಳ್ಳಿಗಳ ಬಹುಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಗಳನ್ನು ಸಚಿವರಾದ ಕೃಷ್ಣೇಭೈರೇಗೌಡರು ಮತ್ತು ಜಯಮಾಲ ನೇತೃತ್ವದ ಅಧ್ಯಯನ ತಂಡ ಪರಿಶೀಲನೆ ನಡೆಸಿದೆ
ನಾನು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ನಮ್ಮ ಅಧಿಕಾರಿಗಳ ತಂಡ ತಾಲೂಕಿಗೆ ಸಂಬಂಧಿಸಿದಂತೆ ನೈಜ್ಯ ವರದಿ ನೀಡುವ ಮೂಲಕ ಪರಿಸ್ಥಿತಿಯನ್ನು ವಿವರಿಸಿ ಮನದಟ್ಟು ಮಾಡಿ ಕೊಟ್ಟಿದ್ದೇವೆ, ಶಾಶ್ವತ ನೀರಾವರಿ ಯೋಜನೆಯಾದ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ನಡೆಸಲು ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬೇಲೂರು ಶಾಸಕ ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಕಾರ್ಯಾನಿರ್ವಾಣಾಧಿಕಾರಿ ಪುಟ್ಟಸ್ವಾಮಿ, ಜಿಪಂ ಸದಸ್ಯರಾದ ಪಟೇಲ್ ಶಿವಪ್ಪ, ಮಾಡಾಳು ಸ್ವಾಮಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.