ಜಿಲ್ಲಾದ್ಯಂತ ವಾರಾಂತ್ಯದ ಕರ್ಫ್ಯೂ ಯಶಸ್ವಿ
Team Udayavani, Apr 26, 2021, 3:29 PM IST
ಹಾಸನ: ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದನಗರದ ಕಟ್ಟಿನಕೆರೆ ಮಾರುಕಟ್ಟೆ ಭಾನುವಾರಸಂಪೂರ್ಣ ಬಂದ್ ಆಗಿತ್ತು. ಕೆಲವು ತರಕಾರಿ ವರ್ತಕರು ಹೊರತುಪಡಿಸಿದರೆ ಬೆಳಗ್ಗೆ ಮಾರುಕಟ್ಟೆಯದಿನಸಿ ಅಂಗಡಿ ಮಂಗಟ್ಟುಗಳೂ ಮುಚ್ಚಿದ್ದವು.
ಮಾರುಕಟ್ಟೆಗೆ ಹೊಂದಿಕೊಂಡಂತಿರುವ ನಗರ ಸಾರಿಗೆಬಸ್ ನಿಲ್ದಾಣದತ್ತ ಜನ ಸುಳಿಯಲಿಲ್ಲ. ಬಸ್‌ಗಳುಬಾರದೆ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಗಸ್ತು ಹೆಚ್ಚಿತ್ತು: ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆವರ್ತಕರೂ ಸ್ವಯಂ ಸ್ಫೂರ್ತಿಯಿಂದ ತಮ್ಮಅಂಗಡಿಗಳನ್ನು ಮುಚ್ಚಿದರು. ಮಹಾವೀರ ಜಯಂತಿಹಿನ್ನಲೆಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧವಿದ್ದರೂಬಡಾವಣೆಗಳಲ್ಲಿ ಮಧ್ಯಾಹ್ನದವರೆಗೂ ಕದ್ದುಮುಚ್ಚಿಮಾಂಸ, ಕೋಳಿಗಳ ಮಾರಾಟ ನಡೆಯಿತಾದರೂ ಆನಂತರ ಪೊಲೀಸರ ಗಸ್ತು ಹೆಚ್ಚಿದಂತೆ ಅಂಗಡಿಗಳುಮುಚ್ಚಿದವು.
ಜನರಿಂದ ಸಹಕಾರ: ಸಂಜೆವರೆಗೂ ನಗರದ ಎಲ್ಲಾರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಕೆಲವು ಕಡೆ ರಸ್ತೆಗಳಿದವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು.ಅನಿವಾರ್ಯವಾಗಿ ಸಂಚರಿಸಬೇಕಿದ್ದವರಿಗೆ ಅನುವುಮಾಡಿಕೊಟ್ಟರು. ಕೆಲವಡೆ ವಾಹನಗಳನ್ನು ವಶಕ್ಕೆಪಡೆದರು. ವಾಹನ, ಜನರ ಸಂಚಾರ ಬಹುತೇಕರಸ್ತೆಗಳಲ್ಲಿ ಸ್ತಬ್ಧವಾಗಿದ್ದರಿಂದ ಪೊಲೀಸರು ರಸ್ತೆಬದಿಯ ನೆರಳಿನಾಶ್ರಯ ಪಡೆದುವಿರಮಿಸಿಕೊಳ್ಳುತ್ತಿದ್ದರು. 2ನೇ ದಿನದ ಕರ್ಫ್ಯೂಗೆ ಜನಸಂಪೂರ್ಣ ಸಹಕರಿಸಿದರು.
ಪೊಲೀಸರಿಗೆ ಊಟ ವಿತರಣೆ: ಕರ್ಫ್ಯೂ ವೇಳೆ ಗಸ್ತುಕರ್ತವ್ಯದಲ್ಲಿದ್ದ ಪೊಲೀಸರಿಗೆ ಅಂತಾರಾಷ್ಟ್ರೀಯಮಾನವ ಹಕ್ಕುಗಳ ಸಮಿತಿ ಪದಾಧಿಕಾರಿಗಳುಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಹಾಸನನಗರದ ಹಳೆ ಶಾಂತಿ ಸ್ಟೋರ್ ವೃತ್ತ, ಎನ್.ಆರ್.ಸರ್ಕಲ್, ಡೇರಿ ವೃತ್ತ, ರಿಂಗ್ ರಸ್ತೆ ಮತ್ತಿತರ ಕಡೆಸಂಚರಿಸಿ ಸಮಿತಿ ಸದಸ್ಯರು ಊಟ ಮತ್ತುಕುಡಿಯುವ ನೀರು ವಿತರಿಸಿದರು. ಸಮಿತಿ ಜಿಲ್ಲಾಧ್ಯಕ್ಷಸಯ್ನಾದ್ ಏಜಾಜ್, ರಾಲ್, ಜಗನಾಥ್, ನವಾಜ್,ಆಯುಷ್, ಶ್ರುತಿ, ಚಂದ್ರಿಕಾ, ಸಾದಿಕ್, ಬಕ್ಷಿಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.