ಸ್ವರ್ಣಗೌರಿ ದೇವಿಗೆ ವಿಶೇಷ ಪೂಜೆ
Team Udayavani, Aug 22, 2020, 1:46 PM IST
ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದ ಶ್ರೀಸ್ವರ್ಣಗೌರಿ ದೇವಿಯ ಪೂಜಾ ಕೈಕಂರ್ಯವನ್ನು ಕೋವಿಡ್ ಮಹಾಮಾರಿಯ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ಬೆರಳೆಣಿಕೆಯ ಭಕ್ತರು ಪ್ರತಿವರ್ಷದ ಸಂಪ್ರದಾಯದಂತೆ ಅತ್ಯಂತ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿಸಿದರು.
ರಾಜ್ಯದಲ್ಲೆಡೆ ಶ್ರೀಪ್ರಸನ್ನ ಗಣಪತಿ ಉತ್ಸವ ಹಾಗೂ ಮಾಡಾಳು ಶ್ರೀಸ್ವರ್ಣಗೌರಿ ದೇವಿಯ ಉತ್ಸವಕ್ಕೆ ಹೆಸರು ವಾಸಿಯಾಗಿದ್ದು, ಗೌರಿ ಹಬ್ಬದ ನಿಮಿತ್ತಮಾಡಾಳು ಗ್ರಾಮ ನವ ವಧುವಿನಂತೆ ತಳಿರು, ತೋರಣ, ಬಾಳೆ ಗಿಡಗಳಿಂದ ಶೃಂಗರಿಸಲಾಗಿತ್ತು. ಆದರೆ ಕೋವಿಡ್ ಸೋಂಕು ಹರಡುವ ಕಾರಣ ಸ್ವರ್ಣಗೌರಿ ಭಕ್ತ ಮಂಡಲಿ ಜಾತ್ರೆಯು ಇಲ್ಲವೆಂದು ಮೊದಲೇ ವಿನಂತಿಸಿದರೂ ನೂರಾರು ಮಂದಿ ಭಕ್ತರು ಆಗಮಿಸಿ ಶ್ರೀ ಸ್ವರ್ಣಗೌರಿ ದೇವಿ ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾದರು.
ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶುಕ್ರವಾರ ಬೆಳಗ್ಗೆ ಸ್ವರ್ಣ ಗೌರಿ ಮೂಲ ಸ್ಥಾನವಾದ ಗೌಡರ ಬಾವಿ ಬಳಿ ಲಿಂಗಪೂಜೆ ನೆರವೇರಿಸಿ ನಂತರ ಸ್ವರ್ಣಗೌರಿ ದೇವಿಮೂಲ ಸನ್ನಿಧಿಯಲ್ಲಿ ದೇವಿಗೆ ಮಹಾ ತಪಸ್ವಿಗಳಾದ ಲಿಂಗೈಕ್ಯ ಶಿವಲಿಂಗಸ್ವಾಮೀಜಿ ದೇವಿಗೆ ಆಶೀರ್ವದಿಸಿ ನೀಡಿದ ವಜ್ರದ ಮೂಗುತಿಯನ್ನು ಗೌರಿ ದೇವಿ ನಿರ್ಮಿಸಿದ ಆಚಾರ ಪುಟ್ಟಶಾಮಾಚಾರ್ ಅವರಿಗೆ ಸ್ವಾಮೀಜಿ ಆಶೀರ್ವದಿಸಿ ನೀಡಿದ ನಂತರ ಆಚಾರ್ ಆವರು ಗೌರಿ ದೇವಿಗೆ ಧರಿಸಿದರು. ಮಧ್ಯಾಹ್ನ 2ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರಾದರತಿಯೊಡನೆ ಶ್ರೀದೇವಿಯನ್ನು ನೀರಿನಲ್ಲಿ ವಿಸರ್ಜಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.