ದಾಖಲೆ ಪರಿಶೀಲಿಸಿದ ತಹಶೀಲ್ದಾರ್
Team Udayavani, May 28, 2021, 6:54 PM IST
ಸಕಲೇಶಪುರ: ಬಿತ್ತನೆ ಮಾಡಲು ಭತ್ತದ ಬೀಜಕೊಳ್ಳಲು ರೈತರು ನೂಕುನುಗ್ಗಲು ನಡೆಸಿದಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಯ್‌ಕುಮಾರ್ ಖುದ್ದು ಲಾಠಿ ಹಿಡಿದು ರೈತರನ್ನುಸಮಾಧಾನಿಸಿ ದಾಖಲೆ ಹಾಗೂ ಹಣ ಪಡೆದು ಬಿತ್ತನೆಬೀಜದ ಚೀಲಗಳನ್ನು ವಿತರಣೆ ಮಾಡಿಸಿದರು.
ಕೃಷಿ ಇಲಾಖೆಯ ಪಟ್ಟಣದ ರೈತ ಸಂಪರ್ಕಕೇಂದ್ರದಲ್ಲಿ ಬಿತ್ತನೆ ಬೀಜ ಪಡೆಯಲು ರೈತರುಮುಂಜಾನೆಯಿಂದಲೇ ಕೊರೊನಾದ ಆತಂಕ ಮರೆತು ನೂಕುನುಗ್ಗಲು ನಡೆಸಿದರು. ಕೃಷಿ ಇಲಾಖೆಯ ಸಿಬ್ಬಂದಿ ಒಬ್ಬೊಬ್ಬರಿಗೆ ಬಿತ್ತನೆ ಬೀಜ ಪಡೆಯಲು ದಾಖಲಾತಿ ಪರಿಶೀಲಿಸಿ ಆನ್‌ಲೈನ್ ಎಂಟ್ರಿಮಾಡುತ್ತಿದ್ದರಿಂದ ಒಬ್ಬ ರೈತನಿಗೆ ಬಿತ್ತನೆ ಬೀಜನೀಡಲು ಕನಿಷ್ಠ 20 ನಿಮಿಷ ಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ಜಯ್ ಕುಮಾರ್ ಖುದ್ದು ಸರದಿ ಸಾಲನ್ನು ಸರಿಪಡಿಸಿಅವರೇ ಅರ್ಜಿ ಸ್ವೀಕಾರ ಮಾಡುವ ಕೌಂಟರ್‌ನಲ್ಲಿನಿಂತು ದಾಖಲಾತಿ ಪಡೆದು ಬಿತ್ತನೆ ಬೀಜ ನೀಡುವಕಾರ್ಯಕ್ಕೆ ವೇಗ ನೀಡಿದರು.
ಕಂದಾಯ ಇಲಾಖೆಯರೆವಿನ್ಯೂ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮ ಲೆಕ್ಕಿಗರಾದಆಸೀಫ್, ಸಿದ್ದಲಿಂಗು ಮುಂತಾದವರು ರೈತರನ್ನುನಿಯಂತ್ರಿಸಿದರು.ಕುದುರಂಗಿ ಗ್ರಾಮಸ್ಥ ಸುರೇಶ್ ಮಾತನಾಡಿ,ತಹಶೀಲ್ದಾರ್‌ರ ಈ ಕಾರ್ಯ ಶ್ಲಾಘನೀಯ. ರೈತರಿಗೆಬಿತ್ತನೆ ಬೀಜ ನೀಡುವ ಪ್ರಕ್ರಿಯೆಯನ್ನುವೇಗಗೊಳಿಸಿದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.