ಜಿಪಂ, ತಾಪಂ ಚುನಾವಣೆ ಘೋಷಿಸಿ: ರೇವಣ್ಣ
ಪಾಲಿಕೆ ಚುನಾವಣೆ ನಡೆಸುವುದಾದರೆ ಜಿಪಂ, ತಾಪಂ ಚುನಾವಣೆಗೆ ವಿಳಂಬವೇಕೆ?: ಚುನಾವಣಾ ಆಯೋಗಕ್ಕೆ ತರಾಟೆ
Team Udayavani, Aug 17, 2021, 4:05 PM IST
ಹಾಸನ: ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ಸರ್ಕಾರದ ಒತ್ತಡಕ್ಕೆ ಮಣಿದು ಚುನಾವಣೆ ನಡೆಸಲು ಮುಂದಾಗುತ್ತಿಲ್ಲ. ರಾಜ್ಯ ಸರ್ಕಾರ ಅಧಿಕಾರಿ ಶಾಹಿ ಮೂಲಕವೇ ಸ್ಥಳೀಯ ಸಂಸ್ಥೆಗಳ ಆಡಳಿತ ನಡೆಸಲು ಬಯಸುತ್ತಿದೆ. ಆದರೆ ಚುನಾವಣಾ ಆಯೋಗ ಸರ್ಕಾರದ ಒತ್ತಾಸೆಗೆ ಅವಕಾಶ ಕೊಡದೆ ಚುನಾವಣೆ ಘೋಷಣೆ ಮಾಡಬೇಕು ಎಂದರು.
ಚುನಾವಣೆ ನಡೆಯಬೇಕು:ಬೆಳಗಾವಿ, ಹುಬ್ಬಳಿ – ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವುದಾದರೆ ಜಿಲ್ಲಾ ಮತ್ತು ತಾಪಂಗಳಿಗೆ ಏಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿ, ನಗರ ಪ್ರದೇಶಗಳಿಂತ ಕೋವಿಡ್ ಪಾಸಿಟಿವಿಟಿ ದರ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಇದೆ.ಹೀಗಾಗಿ ಜಿಲ್ಲಾ ಮತ್ತು ತಾಪಂಗಳಿಗೆ ಚುನಾವಣೆ ನಡೆಸಬಹುದಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ದಿನ ಅಧಿಕಾರಿ ಶಾಹಿ ಆಡಳಿತ ಅವಕಾಶ ಕೊಡಬಾರದು. ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇರಬೇಕು. ಸಂವಿಧಾನ ಬದ್ಧವಾಗಿ ರಚನೆಯಾಗಿರುವ
ಸ್ಥಳೀಯ ಸಂಸ್ಥೆಗಳಿಗೆ ಆಯಾ ಕಾಲಕ್ಕೆ ಚುನಾವಣೆ ನಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ:ನನ್ನ ಮಕ್ಕಳಿಗೆ ಬೇಡವೇ ಬೇಡ ಬಣ್ಣದ ಲೋಕದ ಬದುಕು : ನಟಿ ಕರೀನಾ ಕಪೂರ್
ಚರ್ಚೆ ನಡೆಸಲಿ: ಜಿಲ್ಲಾ ಮತ್ತು ತಾಪಂಗಳಿಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವವರೆಗೂ ಈ ಸಂಸ್ಥೆಗಳಿಗೆ
ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ವೆಚ್ಚ ಮಾಡಲು ಶಾಸಕರ ಸಭೆ ಕರೆದು ಚರ್ಚೆ ನಡೆಸಬೇಕು. ಈ ಸಂಬಂಧ ಈಗಾಗಲೇ ನಾನು ಜಿಲ್ಲಾ ಉಸ್ತುವಾರಿ ಸಚಿವರು, ಜಿಪಂ ಸಿಇಒ ಅವರಿಗೆ ಒತ್ತಾಯ ಮಾಡಿದ್ದೇನೆ. ಶಾಸಕರು ಜಿಪಂ ಪದ ನಿಮಿತ್ತ ಸದಸ್ಯರು ಹಾಗ ೂ ಸ್ಥಾಯಿ ಸಮಿತಿಗಳ ಸದಸ್ಯರಾಗಿರುವರು. ಹಾಗಾಗಿ ಅಭಿವೃದ್ಧಿ ಕಾರ್ಯ ಅನುಷ್ಠಾನ ವೆಚ್ಚ ಮಾಡಲು ಶಾಸಕರ ಸಭೆಯಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಘೋಷಣೆಯಾಗಿಯೇ ಉಳಿದಿದೆ: ಕೋವಿಡ್ 2ನೇ ಅಲೆ ನಿರ್ವಹಿಸಲು ಸರ್ಕಾರ ವಿಫಲವಾಗಿದ್ದರಿಂದ ಸಾವಿರಾರು ಜನ ರಾಜ್ಯದಲ್ಲಿ ಜೀವ
ಕಳೆದುಕೊಂಡರು. 3ನೇ ಅಲೆ ಆರಂಭವಾಗುವುದರೊಳಗೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಹಿಂದೆ ಆರೋಗ್ಯ ಸಚಿವರು ಸಭೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಘೋಷಣೆ ಮಾಡಿದ್ದರು. ಆದರೆ, ಆರೋಗ್ಯ ಸಚಿವರ ಘೋಷಣೆ ಇದುವರೆಗೂ ಅನುಷ್ಠಾನಗೊಂಡಿಲ್ಲ. ಸೆಪ್ಟೆಂಬರ್‌ನಿಂದ ಕೋವಿಡ್ 3ನೇ ಅಲೆ ಆರಂಭವಾಗುವ ಸೂಚನೆ ಇದೆ. ಅಷ್ಟರೊಳಗೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಮಂಜೂರಾತಿ ಸಿಕ್ಕಿಲ್ಲ: ಹಾಸನ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಕುರಿತು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದುವರೆಗೂ ಮಂಜೂರಾತಿ ಸಿಕ್ಕಿಲ್ಲ. ಕೂಡಲೇ ಸರ್ಕಾರ ಮಂಜೂರಾತಿ ನೀಡಿ ವೆಂಟಿಲೇಟರ್ ಸೇರಿ ಮೂಲ ಸೌಕರ್ಯ ಒದಗಿಸಬೇಕು. ಜಿಲ್ಲಾಧಿಕಾರಿ ಅವರು ಶಾಸಕರ ಸಭೆ ಕರೆದು ಆಸ್ಪತ್ರೆಗಳಲ್ಲಿ ಏನೇನು ವ್ಯವಸ್ಥೆ ಮಾಡಬೇಕು ಎಂಬ ಮಾಹಿತಿ ಪಡೆದು ಕಾರ್ಯೋನ್ಮುಖರಾಗಬೇಕು ಎಂದು ರೇವಣ್ಣ ಒತ್ತಾಯಿಸಿದರು.
ಮಂತ್ರಿಗಳನ್ನು ಮನೆಗೆಕರೆಯಲ್ಲ : ಮಾಜಿ ಸಚಿವ
ಹಾಸನ: ಮಂತ್ರಿಗಳನ್ನು ನಾವೇನು ಮನೆಗೆ ಕರೆಯಲ್ಲ. ಬಂದರೆ ಅವರನ್ನು ಗೌರವದಿಂದ ನೋಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದರು.
ಖರ್ಚು ಉಳಿಯುತ್ತೆ: ಮಂತ್ರಿಗಳು, ಬಿಜೆಪಿ ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ಮನೆಗಳಿಗೆ ಹೋಗಬಾರದು ಎಂದು ಹಾಸನಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ಮಾಡಿದ್ದ ಒತ್ತಾಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ ರೇವಣ್ಣ, ಮಂತ್ರಿಗಳು ಬಿಜೆಪಿ ಮುಖಂಡರ ಮನೆಗಳಿಗೇ ಹೋಗಲಿ. ಅಲ್ಲಿಯೇ ಸಮೃದ್ಧಿಯಾಗಿಊಟ, ತಿಂಡಿ ಮಾಡಲಿ. ನಾವು ಖರ್ಚು ಮಾಡುವುದು ಉಳಿಯುತ್ತದೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಯವರು, ಸಚಿವರು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಅವರು ಅಧಿಕಾರದ ಗೌಪ್ಯತೆ ಪ್ರಮಾಣ ವಚನ ಸ್ವೀಕರಿಸುವಾಗ ತಾರತಮ್ಯ, ಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿರುತ್ತಾರೆ. ಹಾಗಾಗಿ ಅವರು ಪಕ್ಷ, ಪ್ರತಿಪಕ್ಷದವರು ಎಂದು ಸಚಿವರು ತಾರತಮ್ಯ
ಮಾಡಬಾರದು. ಯಾರೋ ಹೇಳಿದರೆಂದು ವಿರೋಧ ಪಕ್ಷದವರನ್ನುಕಡೆಗಣಿಸಲು ಸಾಧ್ಯವೇ ಎಂದೂ ಪ್ರಶ್ನಿಸಿದರು
ಅಧಿಕಾರಿಗಳನ್ನು ಬಲಿ ಹಾಕೋದು ಗೊತ್ತಿದೆ..
ಅಧಿಕಾರಿಗಳು ತಿಳಿದುಕೊಂಡಿರಬಹುದು. ಆದರೆ, ಅಧಿಕಾರಿಗಳು ನನ್ನಕೈಗೆ ಸಿಗದೆ ಎಲ್ಲಿ ಹೋಗ್ತಾರೆ?.ಕಾನೂನಿನ ಚೌಕಟ್ಟಿನೊಳಗೆ ಅಧಿಕಾರಿಗಳು ಕೆಲಸ ಮಾಡಬೇಕು. ಯಾರದೋ ಒತ್ತಡಕ್ಕೆ ಮಣಿದುಕಾನೂನು ಮೀರಿ ಕೆಲಸ ಮಾಡಿದರೆ ಬಲಿ ಹಾಕುವುದು ಗೊತ್ತಿದೆ ಎಂದು
ಬಿಜೆಪಿ ಶಾಸಕರು ಮುಖಂಡರ ಒತ್ತಡಕ್ಕೆ ಮಣಿಯದೆಕೆಲಸ ಮಾಡಬೇಕು ಎಂದು ಶಾಸಕ ರೇವಣ್ಣ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.