ತಾಲೂಕಿಗೆ ಬೇಕು ಇನ್ನಷ್ಟು ಪವರ್ ಸ್ಟೇಷನ್
Team Udayavani, Apr 22, 2021, 3:13 PM IST
ಆಲೂರು: ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್‌ಪವರ್ ಸ್ಟೇಷನ್ (ಎಂಯುಎಸ್‌ಎಸ್) ಇಲ್ಲದೆಬೇಸಿಗೆಯಲ್ಲಿ ತಾಲೂಕಾದ್ಯಂತ ರೈತರು ಮತ್ತು ಸೆಸ್ಕ್ ನಡುವಿನ ಸಂಘರ್ಷ ನಿರಂತರವಾಗಿ ಸಾಗಿದೆ.ತಾಲೂಕಿಗೆ ಸದ್ಯಕ್ಕೆ 28 ಮೆಗಾವ್ಯಾಟ್ ವಿದ್ಯುತ್‌ಬೇಕು. ವರ್ಷ ಕಳೆದಂತೆ ಶೇ. 10 ಪ್ರಮಾಣಹೆಚ್ಚಾಗುತ್ತದೆ.ಪ್ರಸ್ತುತ ಕಂದಲಿ, ಮಗ್ಗೆ ಮತ್ತುಬಾಳ್ಳುಪೇಟೆ ಎಂಯುಎಸ್‌ಎಸ್ ಸ್ಟೇಷನ್‌ನಿಂದವಿದ್ಯುತ್ ಪಡೆಯಲಾಗುತ್ತಿದೆ.
ಆಲೂರಿನಿಂದ ಕಂದಲಿ5 ಕಿ.ಮೀ,ಮಗ್ಗೆ 23 ಕಿ.ಮೀ., ಮತ್ತು ಬಾಳ್ಳುಪೇಟೆ 15ಕಿ.ಮೀ. ಅಂತರದಲ್ಲಿದೆ. ಕಂದಲಿ ಕೇಂದ್ರದಿಂದ ಅರ್ಧಭಾಗ, ಬಾಳ್ಳುಪೇಟೆ ಕೇಂದ್ರದಿಂದ ಶೇ. 25. ವಿದ್ಯುತ್‌ಪಡೆಯಲಾಗುತ್ತಿದೆ. ಮಗ್ಗೆ ಕೇಂದ್ರ ಸಂಪೂರ್ಣತಾಲೂಕಿಗೆ ಸರಬರಾಜು ಮಾಡುತ್ತಿದ್ದರೂಅಡಚಣೆಗಳು ಹೆಚ್ಚಾಗಿದೆ. ಕಸಬಾ ಹೋಬಳಿಗೆವಿದ್ಯುತ್ತನ್ನು ಮೂರು ಕೇಂದ್ರಗಳಿಂದ ಪಡೆಯಬೇಕು.ಈ ಕೇಂದ್ರಗಳು ತಾಲೂಕು ಕೇಂದ್ರಕ್ಕೆದೂರವಿರುವುದರಿಂದ ಕ್ಷೀಣ ವಿದ್ಯುತ್ ಪ್ರವಾಹದಜತೆಗೆ ಅಡಚಣೆಗಳೂ ನಿರಂತರವಾಗಿದೆ. ಮಗ್ಗೆ ಕೇಂದ್ರಬಹುತೇಕ ಕಾಫಿ ತೋಟ ಸೇರಿದಂತೆ ಕಾಡುಪ್ರದೇಶವಾಗಿದೆ.
ಯಾವುದೆ ಕೇಂದ್ರದಲ್ಲಿ ವಿದ್ಯುತ್‌ಅಡಚಣೆಯಾದರೆ ಕಸಬಾ ಹೋಬಳಿಗೆತೊಂದರೆಯಾಗುತ್ತದೆ.ಪಾಳ್ಯ ಎಂಯುಎಸ್‌ಎಸ್ ಕೇಂದ್ರಕ್ಕೆನಿಯಮಾನುಸಾರ ಜಾಗ ನೀಡಲು ಖಾಸಗಿಯವರುಮುಂದೆ ಬಂದಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ,ಇದ್ದ ಅಡಚಣೆ ನಿವಾರಿಸಿ ವರದಿ ಈಗಾಗಲೆನೀಡಲಾಗಿದೆ.
ಕಣತೂರು ವ್ಯಾಪ್ತಿ ಕೊಡಗಿಹಳ್ಳಿಗ್ರಾಮದಲ್ಲಿ ಜಾಗ ಗುರುತಿಸಲಾಗಿದ್ದು, ಈ ಬಗ್ಗೆ ಜಂಟಿಪರಿಶೀಲನೆ ನಡೆಸಿ ವರದಿ ನೀಡಲಾಗಿದೆ.ಆಲೂರು ಎಂಯುಎಸ್‌ಎಸ್ ಕೇಂದ್ರದಿಂದವಿತರಣೆ ಕೇಂದ್ರಗಳು ದೂರದಲ್ಲಿರುವುದರಿಂದಮಾರ್ಗದಲ್ಲಿ ಅಡಚಣೆಗಳಾಗುವ ಸಾಧ್ಯತೆಯಿದ್ದು,ಸಮರ್ಪಕ ವೋಲ್ಟೆàಜ್ ಇರುವುದಿಲ್ಲ.
ಬೇಸಿಗೆಕಾಲದಲ್ಲಿ μàಡರ್‌ಗಳು ಓವರ್ ಲೋಡ್‌ಆಗುವುದರಿಂದ ವಿದ್ಯುತ್ ಪೂರೈಕೆಯಲ್ಲಿಅಡಚಣೆಯಾಗುತ್ತದೆ. ವಿವಿ ಕೇಂದ್ರಗಳುಸ್ಥಾಪನೆಗೊಂಡಲ್ಲಿ ಸಮಸ್ಯೆ ಬಗೆಹರಿಯುತ್ತದೆ.ತಾತ್ಕಾಲಿಕವಾಗಿ ಪವರ್ ಟ್ರಾನ್ಸ್‌ಫಾರ್ಮರ್‌ಗಳಸಾಮರ್ಥ್ಯವನ್ನು ಉನ್ನತೀಕರಣಗೊಳಿಸಿದರೆಬೇಸಿಗೆಯಲ್ಲಿ ರೈತರಿಗೆ ವಿದ್ಯುತ್ ಕೊಡಬಹುದು.
ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ. ಕಂದಲಿ ಸ್ಟೇಷನ್‌ಹತ್ತಿರವಿರುವುದರಿಂದ ಪಟ್ಟಣಕ್ಕೆ ಮಾತ್ರ ನಿರಂತರವಿದ್ಯುತ್ ಕೊಡುತ್ತಿದ್ದರೂ, ಕಂದಲಿ, ಹಾಸನವ್ಯಾಪ್ತಿಯಲ್ಲಿ ಅಡಚಣೆಯಾದರೆ ಇಲ್ಲಿಯೂಅಡಚಣೆಯಾಗುತ್ತದೆ ಎಂಬು ಸಾರ್ವಜನಿಕರದೂರಾಗಿದೆ.ಬೇರೆ ತಾಲೂಕುಗಳಲ್ಲಿ 4ರಿಂದ 5 ಎಂಯುಎಸ್‌ಎಸ್ ಪವರ್‌ಸ್ಟೇಷನ್‌ಗಳಿವೆ.
ಅದರೆ, ಆಲೂರುತಾಲೂಕಿನಲ್ಲಿ ಮಗ್ಗೆ ಗ್ರಾಮದಲ್ಲಿ ಮಾತ್ರ ಪವರ್‌ಸ್ಟೇಷನ್ ಇದೆ. ಅದರಲ್ಲೂ ಮಗ್ಗೆ ಗ್ರಾಮದ ಭಾಗದಲ್ಲಿಕಾಡಾನೆಗಳ ಉಪಟಳ ಹೆಚ್ಚಿರುವುದರಿಂದ ದಿನದ 24ಗಂಟೆಯೂ ವಿದ್ಯುತ್ ಹರಿಸಬೇಕಾದ ಅನಿವಾರ್ಯವಿದೆ.ಆದ್ದರಿಂದ ಆಲೂರು ತಾಲೂಕಿಗೆ ಇನ್ನೂ ಮೂರ್ನಲ್ಕುಪವರ್ ಸ್ಟೇಷನ್ ಸ್ಥಾಪನೆ ಮಾಡಿದರೆ ಬೇರೆ ಹೋಬಳಿಗಳಿಗೂ ವಿದ್ಯುತ್ ಪೂರೈಕೆ ಸುಗಮವಾಗುತ್ತದೆ.
ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.