ಪ್ರಕೃತಿ ಅಸಮತೋಲನದಿಂದ ತಾಪಮಾನ ಹೆಚ್ಚಳ
ಯಾವುದೇ ಕಾನೂನುಗಳ ಭಯ ಇಲ್ಲದೆ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ.
Team Udayavani, Apr 23, 2022, 6:17 PM IST
ಅರಸೀಕೆರೆ: ಪ್ರಕೃತಿ ಅಸಮತೋಲನ ಪರಿಣಾಮ ಭೂಮಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಭೂಮಿ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ನಗರದ ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾ.ಬಿ.ಎನ್.ಅಮರ್‌ನಾಥ್ ತಿಳಿಸಿದರು.
ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಭೂ ಸಂರಕ್ಷಣೆ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಲಯ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮನುಷ್ಯನ ಬದುಕಿಗೆ ಅವಶ್ಯಕವಾದ ಗಾಳಿ, ನೀರು, ಬೆಳಕು, ಆಹಾರ ಸೇರಿದಂತೆ ಪ್ರತಿಯೊಂದನ್ನು ನೀಡುತ್ತಿದೆ. ಆದರೆ ನಾವುಗಳು ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪತ್ತುಗಳನ್ನು ನಾಶ ಮಾಡುವ ಮೂಲಕ ಪ್ರಕೃತಿ ಅಸಮತೋಲನಕ್ಕೆ ಕಾರಣಕರ್ತರಾಗಿದ್ದೇವೆ. ಇದರ ಪರಿಣಾಮ ಕಾಲಕಾಲಕ್ಕೆ ಬರಬೇಕಾದ ಮಳೆ ಬಾರದೆ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಪರದಾಡುವ ದುಸ್ಥಿತಿ ಕಾಣುತ್ತಿದ್ದೇವೆ.
ಜೀವ ಸಂಕುಲಕ್ಕೆ ಅಪಾಯ: ಪರಿಸರದಲ್ಲಿ ಉತ್ತಮ ಮಳೆಯಿಲ್ಲದೆ ಮರಗಿಡಗಳು ನಾಶವಾದ ಪರಿಣಾಮ ಭೂಮಿಯ ತಾಪಮಾನ ಹೆಚ್ಚಾಗಿ ಅನೇಕ ಪ್ರಾಣಿ ಪಕ್ಷಿಗಳ ಜೀವ ಸಂಕುಲ ಬದುಕಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮನುಷ್ಯನು ಕೂಡ ಭೂಮಿಯ ಮೇಲೆ ಬದುಳಿ ಉಳಿಯದ ದುಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ನಾವುಗಳು ಜಾಗೃತರಾಗಿ ಮರಗಿಡ ಬೆಳೆಸುವ ಮೂಲಕ ಪ್ರಕೃತಿ ಸಂರಕ್ಷಣೆಗೆ
ಪ್ರಾಮಾಣಿಕವಾಗಿ ಮುಂದಾಗಬೇಕಾಗಿದೆ.
ಅಂತರ್ಜಲ ವೃದ್ಧಿಗಾಗಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿ ಎಂದು ತಿಳಿಸಿದರು. ಕಾನೂನಿನ ಭಯವಿಲ್ಲ: ಹಿರಿಯ ವಕೀಲರಾದ ವಿಜಯಕುಮಾರ್ ಮಾತನಾಡಿ, ಸಮಾಜ ಜೀವಿಯಾದ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಹಾಗೂ ನೈತಿಕ ಪ್ರಜ್ಞೆ ಮಾಯಾವಾಗುತ್ತಿದೆ.
ಸ್ವಾರ್ಥದ ಚಿಂತನೆ ಬೆಳೆಯುತ್ತಿದ್ದು, ಯಾವುದೇ ಕಾನೂನುಗಳ ಭಯ ಇಲ್ಲದೆ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ. ಆದ್ದರಿಂದ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕ ಪ್ರಜ್ಞೆ ಬೆಳೆಸಿದರೆ ಮಾತ್ರ ಆತನಲ್ಲಿನ ಸುಪ್ತವಾಗಿರುವ ಮನುಷ್ಯತ್ವ ಜಾಗೃತಿ ಗೊಳಿಸುವ ಕಾರ್ಯ ನಾವುಗಳು ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ, ಹಿರಿಯ ವಕೀಲ ನಟರಾಜ್, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಕೃತಿ ವಿನಾಶದಿಂದ ಮುಂದಿನ ಪೀಳಿಗೆಗೆ ವಿಷಮ ಕಾಲ
ಅರಣ್ಯ ವಲಯ ಅಧಿಕಾರಿಗಳಾದ ಎಚ್.ಕೆ. ಅಮಿತ್ ಮಾತನಾಡಿ, ಮನುಷ್ಯ ವೈಜ್ಞಾನಿಕವಾಗಿ ಬೆಳೆದಂತೆ ಆತನಲ್ಲಿ ಸ್ವಾರ್ಥ ಭಾವನೆಗಳು ಹೆಚ್ಚಾಗಿ ಸಾಮಾಜಿಕ ಜವಾಬ್ದಾರಿಗಳು ಮರೆಯುತ್ತಿರುವ ಕಾರಣ ನಮ್ಮ ಬದುಕಿಗೆ ಪೂರಕವಾದ ಪರಿಸರ ಬೆಳೆಸಬೇಕು ಎಂಬ ಸಾಮಾನ್ಯ ಸಂಗತಿ ತಿಳಿಯದೇ ಶಿಲಾಯುಗದ ಅನಾಗರಿಕರಂತೆ ಮನುಷ್ಯ ವರ್ತಿಸುತ್ತಿದ್ದಾನೆ. ಪರಿಣಾಮ ನಮ್ಮ ಪೀಳಿಗೆ ನಾಳೆಯ ದಿನ ಕುಡಿಯುವ ನೀರಿಗಾಗಿ, ಉಸಿರಾಡುವ ಗಾಳಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ನಾವುಗಳೇ ಸ್ವತಃ ಅನುಭವಿಸುವ ದುಸ್ಥಿತಿ ಕಾಣುವಂತಾಗುತ್ತಿದೆ.ಆದ್ದರಿಂದ ಪರಿಸರ ಸಂರಕ್ಷಣೆ, ಅರಣ್ಯ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗೆ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಮುಂದಾಗ ಬೇಕಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.